ಮಾನವ ಸ್ವಾರ್ಥಕ್ಕೆ ಪ್ರಕೃತಿ ನಾಶ: ಉಸಿರಾಡುವ ಗಾಳಿ ಖರೀದಿಸುವ ಸಂದರ್ಭ ಬಂದರೂ ಅಚ್ಚರಿಯಿಲ್ಲ

ಗಜೇಂದ್ರಗಡ : ಜೂ ೧೨ ನಗರದ ಎಸ್.ಎಮ್.ಭೂಮರೆಡ್ಡಿ ಕಾಲೇಜು ಮೈದಾನದ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಬಳಗದಿಂದ ೫೦೦ಕ್ಕೂ ಹೆಚ್ಚು ಸಸಿ ನಡುವ ಕಾರ್ಯಕ್ರಮದಲ್ಲಿ ನಡೆಸಿದರು.

ಗಿಡ ಮರ ಗಳನ್ನು ಬೆಳೆಸಿ ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬರ ಕರ್ತವ್ಯ. ಭಾಷಣ, ಘೋಷಣೆಗಿಂತ ವಾಸ್ತವವಾಗಿ ಕಾರ್ಯೋನ್ಮುಖರಾಗ ಬೇಕು ಎಂದು ರೋಣದ ಉಪ ವಲಯ ಅರಣ್ಯ ಅಧಿಕಾರಿ ಅನ್ವರ ಕೋಲ್ಹಾರ ಹೇಳಿದರು.
ಮನುಷ್ಯನ ಸ್ವಾರ್ಥಕ್ಕೆಪರಿಸರ ನಾಶವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯನ್ನು ಖರೀದಿಸುವ ಸಂದರ್ಭ ಬಂದರೂ ಅಚ್ಚರಿಪಡಬೇಕಾಗಿಲ್ಲ. ಸಮಾಜ ಇಂದು ಎಚ್ಚೆತ್ತು ಕೊಳ್ಳಬೇಕು. ಪ್ರತಿಯೊಬ್ಬರು ಗಿಡನೆಡುವ ಮೂಲಕ ಪರಿಸರ ಕಾಪಾಡಲು ಬದ್ಧರಾಗೋಣ. ನಮ್ಮೆಲ್ಲರಿಗೂ ಕೂಡ ಪ್ರತಿ ದಿನವೂ ಪರಿಸರ ದಿನವೇ ಆಗಿದೆ ಎಂದು ಮಾತನಾಡಿದರು.

ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪ್ರಾಚಾರ್ಯ ವಿ.ಬಿ.ಮರದ ಮಾತನಾಡಿ ಗಿಡ ಮರಗಳನ್ನು ನೆಡುವುದಲ್ಲದೆ ಪರಿಸರವನ್ನು ಸಂರಕ್ಷಿಸಬೇಕು. ಅಂತರ್ಜಲ ನಾಶವನ್ನು ತಡೆಗಟ್ಟುವ ಮೂಲಕ ನಮ್ಮ ಮುಂದಿನ ಪಿಳೀಗೆಗೆ ಸಹಕಾರ ನೀಡಬೇಕು. ಪ್ರಕೃತಿ ನಾಶವು ನಮಗೆ ನಾವೇ ಮಾಡಿಕೊಳ್ಳುವಂತಹ ನಾಶವಾಗಿದ್ದು, ಪರಿಸರವನ್ನು ಸಂರಕ್ಷಿಸುವುದ ರೊಂದಿಗೆ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳೋಣ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗಿ ಪರಿಸರದಲ್ಲಿ ಸಮತೋಲ ನ ಕಳೆದುಕೊಳ್ಳುತ್ತಿದೆ. ಇದರಿಂದ ಹಲವು ಪ್ರಕತಿ ವಿಕೋಪಗಳು ನಡೆಯುತ್ತಿವೆ. ಹಾಗಾಗಿ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಎಂದು ಪ್ರಗತಿಪರ ಚಿಂತಕ, ಪರಿಸರವಾದಿ ಬಿ.ಎ.ಕೆಂಚರೆಡ್ಡಿ ಹೇಳಿದರು

ಪ್ರಾಸ್ತಾವಿಕವಾಗಿ ಹಳೆಯ ವಿದ್ಯಾರ್ಥಿಗಳಾದ ಎಫ್.ಡಿ.ಕಟ್ಟಿಮನಿ ಹಾಗೂ ಎಮ್.ಎಸ್. ಹಡಪದ ಮಾತನಾಡಿದರು. ಇದೇ ವೇಳೆ ಅಗಲಿದ ಪರಿಸರವಾದಿ ಸುಂದರಲಾಲಾ ಬಹುಗಣ ಹಾಗೂ ದಲಿತ ಕವಿ ಸಿದ್ದಲಿಂಗಯ್ಯ ಅವರಿಗೆ ಮೌನ ಆಚರಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ, ಅಶೋಕ ವನ್ನಾಲ, ಜೆ.ಜೆ.ಕುದರಿ, ರವೀಂದ್ರ ಹೊನವಾಡ, ಎಸ್.ಎಸ್.ನರಗೇಲ್ಲ, ಬಿ.ವ್ಹಿ.ಮುನವಳ್ಳಿ, ಫಯಾಜ್ ತೋಟದ, ದಾವಲಸಾಬ ವಣಗೇರಿ, ಎ.ಎಸ್.ವಡ್ಡರ, ಎಲ್.ಕೆ.ಕ್ವಾಟಿ, ಎಸ್.ಎಸ್.ಚುಂಚಾ, ಶರಣಪ್ಪ ಹಡಪದ, ಸುಭಾಷ್, ಎಲ್.ಕೆ.ಹಿರೇಮಠ, ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *