ಮಾಧ್ಯಮದ ಸಮಸ್ಯೆ-ಬಿಕ್ಕಟ್ಟುಗಳ ಮೂಲಬೇರು ನವ-ಉದಾರವಾದ

ಆರ್.ವಿ. ಭಂಡಾರಿಯವರ ನೆನಪಿನ ಸಹಯಾನ ಸಾಹಿತ್ಯೋತ್ಸವ 2012

ಸಂಪುಟ – 06, ಸಂಚಿಕೆ 23, ಜೂನ್ 03, 2012

13

ಮಾಧ್ಯಮದ ಸಮಸ್ಯೆಗಳು, ಬಿಕ್ಕಟ್ಟುಗಳು ಏನು? ಅವಕ್ಕೆ ಏನು ಮೂಲ ಕಾರಣ? ಸಮಾಜದ ಸಮಸ್ಯೆಗಳಿಗೆ ಮಾಧ್ಯಮ ಪರಿಹಾರ ಕೊಡಬಲ್ಲುದೆ? ಅಥವಾ ಮಾಧ್ಯಮವೇ ಸಮಾಜ ಎದುರಿಸುತ್ತಿರುವ ಒಂದು ತೀವ್ರ ಸಮಸ್ಯೆಯೆ ? ಇವೆಲ್ಲಾ ಮಾಧ್ಯಮದಲ್ಲಿ ಹೊಸ ತಂತ್ರಜ್ಞಾನಗಳು ಸೃಷ್ಟಿ ಮಾಡಿರುವ ಸಮಸ್ಯೆಯೆ ? ಇವೆಲ್ಲದರಲ್ಲಿ ಹೊಸ ತಲೆಮಾರಿನ ಪಾತ್ರ ಏನು ? ಇವೆಲ್ಲದಕ್ಕೆ ಏನು ಪರಿಹಾರ ?

ಮಾಧ್ಯಮದ ಬಗೆಗಿನ ಈ ಹಲವು ಹತ್ತು ಹಲವು ಪ್ರಶ್ನೆಗಳನ್ನು ಮಗ್ಗುಲುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಎತ್ತಿ ಅದಕ್ಕೆ ಉತ್ತರ ಕಂಡುಕೊಳ್ಳಲು ಇತ್ತೀಚೆಗೆ ನಡೆದ ಮಾಧ್ಯಮ: ಹೊಸ ತಲೆಮಾರು ಎಂಬ ಒಂದು ದಿನ ಸಂವಾದದಲ್ಲಿ ಪ್ರಯತ್ನಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಹಿರಿಯ ಬಂಡಾಯ ಸಾಹಿತಿ ಡಾ.ಆರ್.ವಿ. ಭಂಡಾರಿ ಅವರ ನೆನಪಿನಲ್ಲಿ ರಚಿತವಾದ ಸಹಯಾನ ಟ್ರಸ್ಟ್ ಮೇನಲ್ಲಿ ಹಮ್ಮಿಕೊಂಡ ಸಹಯಾನ ಸಾಹಿತ್ಯೋತ್ಸವ-2012 ಈ ವರ್ಷ ಮಾಧ್ಯಮದ ವಿಷಯವನ್ನು ಆರಿಸಿಕೊಂಡಿತ್ತು. ಇದು ಸಹಯಾನ ಸಾಹಿತ್ಯೋತ್ಸವದ ಮೂರನೇ ಅವತರಣಿಕೆ ಯಾಗಿತ್ತು.

ಮಾಧ್ಯಮದ ವರ್ತಮಾನದ ಬಿಕ್ಕಟ್ಟುಗಳು
ಈ ಸಂವಾದದ ಖ್ಯಾತ ಸಿನಿಮಾ-ಟಿವಿ ನಿದರ್ೇಶಕ ನಟ ಬಿ.ಸುರೇಶ ಅವರ ಸಾರಥ್ಯ ದಲ್ಲಿ ನಡೆಯಿತು. ಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ಭಾಗವಹಿಸಿದ್ದರು. ಸಂವಾದದ ಪ್ರಮುಖ ಭಾಗವಾದ ವಿಚಾರ ಸಂಕಿರಣದಲ್ಲಿ ನವ ಮಾಧ್ಯಮಗಳ ಹಿನ್ನೆಲೆಯಲ್ಲಿ ಮುದ್ರಣ ಮಾಧ್ಯಮ ಎಂಬ ವಿಷಯದ ಬಗ್ಗೆ ಪ್ರಜಾವಾಣಿಯ ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ತಮ್ಮ ವಿಚಾರಗಳನ್ನು ಮಂಡಿಸಿದರು. ವರ್ತಮಾನ ಪತ್ರಿಕೆಯ ಸಂಪಾದಕ ರವಿಕೃಷ್ಣ ರೆಡ್ಡಿ ದೃಶ್ಯ ಮಾಧ್ಯಮ-ವರ್ತಮಾನ ಮತ್ತು ಭವಿಷ್ಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು.

ಆ ಮೇಲೆ ನಡೆದ ಮಾಧ್ಯಮದ ವರ್ತ ಮಾನದ ಬಿಕ್ಕಟ್ಟುಗಳು ಎಂಬ ಚಚರ್ೆಯಲ್ಲಿ ಕರಾವಳಿ ಮುಂಜಾವು ಸಂಪಾದಕ ಗಂ ಗಾಧರ ಹಿರೇಗುತ್ತಿ, ಚಿತ್ತಾರ ಪತ್ರಿಕೆಯ ಸಂಪಾದಕ ಬಿ. ಗಣಪತಿ, ಚಿಂತನ ಪುಸ್ತಕದ ವಸಂತರಾಜ ಎನ್.ಕೆ., ಡಿವೈಎಫ್ಐ ನಾಯಕ ಮುನೀರ್ ಕಾಟಿಪಳ್ಳ, ಕಸ್ತೂರಿ ಚಾನೆಲಿನ ವರದಿಗಾರ ನವೀನ್ ಮೂಲಕ ಮಾಧ್ಯಮದ ಬಗ್ಗೆ ಚಿಂತನೆ ಮುಂದುವರೆಸಿದರು. ಕೆ.ಎಸ್.ವಿಮಲ ಚಚರ್ೆಯ ಸಂಯೋಜನೆ ಮಾಡಿದರು. ಹಿರಿಯ ಪತ್ರಕರ್ತ ಶಶಿಧರ ಭಟ್ ಸಮಾರೋಪ ಭಾಷಣದವರೆಗೂ ಚಚರ್ೆ ಮುಂದುವರೆಯಿತು. ಬಿ.ಸುರೇಶ ಈ ಸಂವಾದದ ಪ್ರತಿ ಹಂತದಲ್ಲೂ ತಮ್ಮ ಭಾಷ್ಯವನ್ನು ಕೊಟ್ಟರು.

ಮಾಧ್ಯಮ ಹೊಸ ತಲೆಮಾರಿನ ನ್ಯೂನ್ಯತೆಗಳು
ಮನುಷ್ಯ-ಮನುಷ್ಯರ ನಡುವಣ ಎಲ್ಲಾ ಸಂಪರ್ಕಗಳು ಈಗ ಮಾಧ್ಯಮಗಳ ಮೂಲಕವೇ ಆಗಬೇಕು. ಎಲ್ಲವನ್ನೂ ಮಾಧ್ಯಮದ ಮೂಲಕವೇ ಕಲಿತಿದೆ ಹೊಸ ತಲೆಮಾರು. ದೊಡ್ಡ ಸಂಖ್ಯೆಯಲ್ಲಿ ಮಾಧ್ಯಮ ಸೇರಿಕೊಂಡಿದೆ. ಅದರಿಂದ ವಿಪರೀತವಾಗಿ ಪ್ರಭಾವಿತಗೊಂಡಿದೆ. ಸೈದ್ದಾಂತಿಕ ಚೌಕಟ್ಟು, ನೈತಿಕತೆ, ಮೌಲ್ಯ ಪ್ರಜ್ಞೆ ಇಲ್ಲದೆ ಅದನ್ನು ಬದಲಾಯಿಸುವ ಶಕ್ತಿ ಅದಕ್ಕೆ ಇಲ್ಲ. ಮಾಧ್ಯಮ ಮಾಹಿತಿ ತಂತ್ರಜ್ಞಾನದ ಅಗಾಧ ಬೆಳವಣಿಗೆ ಿಗಳೊಂದಿಗೆ, ಮನುಷ್ಯ ಕೇಂದ್ರಿತವಾಗಿರುವ ಬದಲು ತಂತ್ರಜ್ಞಾನ-ಕೇಂದ್ರಿತವಾಗಿದೆ. ಭಾಷೆ ಹಾಳಾಗಿದೆ. ಮಾಧ್ಯಮ ಪ್ರಧಾನವಾಗಿ ಉದ್ಯಮವಾಗಿದ್ದು, ಭ್ರಷ್ಟವಾಗಿದ್ದು, ಪ್ರಜಾಪ್ರಭುತ್ವವನ್ನು ಎತ್ತಿ ನಿಲ್ಲಿಸುವ ಕರ್ತವ್ಯದಿಂದ ವಿಮುಖವಾಗಿದೆ. ಸಮಾಜವನ್ನು ತಿದ್ದುವ ಬದಲು, ಮಾಧ್ಯಮಗಳು ಮೌಢ್ಯ-ಅಜ್ಞಾನ ಬಿತ್ತುತ್ತಾ, ಸೆಕ್ಸ್-ಕ್ರೈಮ್-ಜ್ಯೋತಿಷ್ಯವನ್ನು ಬಂಡವಾಳ ಮಾಡಿಕೊಂಡಿವೆ. ಮುದ್ರಣ ಮಾಧ್ಯಮ ತನ್ನ ಪ್ರಭಾವ ಕಳೆದುಕೊಂಡಿದೆ. ಮುದ್ರಣ ಮಾದ್ಯಮಕ್ಕಿಂತ ದೃಶ್ಯ ಮಾಧ್ಯಮ ಪ್ರಧಾನವಾಗಿರುವುದು ಈ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಬಹುಶಃ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಿರಾಶಾವಾದ ಚಚರ್ೆ-ಸಂವಾದದಲ್ಲಿ ಮೂಡಿಬಂದ ಒಂದು ಅಭಿಪ್ರಾಯ. ನವ-ಉದಾರವಾದ ಮೂಲಬೇರು

ಮಾಧ್ಯಮ (ಅದರಲ್ಲೂ ಪತ್ರಿಕೆಗಳು) ಯಾವಾಗಲೂ ಉದ್ಯಮವಾಗಿ ಇತ್ತು. ಮಾಧ್ಯಮ ಹಳೆಯ ತಲೆಮಾರಿನ ಪತ್ರಕರ್ತರ ಭ್ರಷ್ಟತೆ, ಹೊಸ ತಲೆಮಾರಿನ ಪತ್ರಕರ್ತರ ನ್ಯೂನ್ಯತೆಗಳು ಇಂದಿನ ಮಾಧ್ಯಮ ಅಥವಾ ಸಮಾಜದ ಸಮಸ್ಯೆಗಳ ಮೂಲ ಕಾರಣವಲ್ಲ. ಅವು ಸಮಾಜದಲ್ಲಿ ಮಾಧ್ಯಮದಲ್ಲಿ ಆದ ಮೂಲಭೂತ ಬದಲಾವಣೆಗಳ ಪರಿಣಾ ಮವೇ ಹೊರತು ಕಾರಣವಲ್ಲ. ಕಳೆದ 20 ವರ್ಷದಲ್ಲಿ ಮೂಲಭೂತ ಬದಲಾವಣೆ ಬಂದಿರುವುದು ಮಾಧ್ಯಮದ ಒಡೆತನದಲ್ಲಿ ಬದಲಾವಣೆ, ಜಾಹೀರಾತುದಾರರ ಪ್ರಭಾವದ ಹೆಚ್ಚಳ ಮತ್ತು ಅದರ ಜತೆಗೆ ಬಂದ ನವ-ಉದಾರವಾದ ಪೋಷಿತ ಮಾಧ್ಯಮದ ಪಾತ್ರದ ಬದಲಾವಣೆಯಿಂದ. ರೂ.8 ಉತ್ಪಾದನಾ ವೆಚ್ಚ ಇರುವ ಪತ್ರಿಕೆಯ ಬೆಲೆಯನ್ನು ಪೈಪೋಟಿಯಲ್ಲಿ ರೂ.3 ರಿಂದ ರೂ.1.50ಕ್ಕೆ ಇಳಿಸಲಾಗಿದೆ. ಇದಕ್ಕೆ ಸಬ್ಸಿಡಿ ಕೊಡುವ ಜಾಹಿರಾತುದಾರರ ಬಲ-ಪ್ರಭಾವ ವಿಪರೀತ ಹೆಚ್ಚಿದೆ. ಓದುಗರ ಪ್ರಭಾವ ತಗ್ಗಿದೆ. ಫೀಲ್-ಗುಡ್ ಪತ್ರಕಾರಿತೆ ನವ-ಉದಾರವಾದದ ಉತ್ಪನ್ನ. ಚೋಮ್ಸ್ಕಿ ಹೇಳುವ ಹಣಕಾಸು ಬಂಡವಾಳದ ಪರವಾಗಿ ಒಪ್ಪಿಗೆಯ ಸಾಮೂಹಿಕ ಉತ್ಪಾದನೆ ನವ-ಉದಾರವಾದದ ನೆರಳಲ್ಲಿ ಈಗ ಮಾಧ್ಯಮದ ಪ್ರಮುಖ ಪಾತ್ರ. ಈ ಮೂಲಭೂತ ಅಂಶ ಗ್ರಹಿಸದೆ ಮಾಧ್ಯಮದ ಬಿಕ್ಕಟ್ಟು ಅರ್ಥ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಅದಕ್ಕೆ ಪರಿಹಾರ ಹುಡುಕುವುದೂ ಸಾಧ್ಯವಿಲ್ಲ. ಇದು ಮೂಡಿಬಂದ ಇನ್ನೊಂದು ಪ್ರಧಾನ ಅಭಿಪ್ರಾಯ.

ಆನ್ ಲೈನ್ ಪ್ರಜಾಪ್ರಭುತ್ವ ಬಗ್ಗೆ ಆಶಾವಾದ
ತಂತ್ರಜ್ಞಾನ ಮಾಧ್ಯಮದ ಮೂಲಭೂತ ಸ್ವಭಾವದಲ್ಲಿ ನಕಾರಾತ್ಮಕವಾದ ಬದಲಾವಣೆ ತಂದಿದೆ ನಿಜ. ಆದರೆ ಇಂಟರ್ ನೆಟ್, ಮೊಬೈಲಿನಂತಹ ಕಡಿಮೆ ಖಚರ್ಿನ ಹೆಚ್ಚು ಮುಕ್ತವಾದ ನವಮಾಧ್ಯಮಗಳು, ಟಿವಿ-ಪತ್ರಿಕೆಗಳ ಏಕಸ್ವಾಮ್ಯಕ್ಕೆ ದುಡ್ಡಿನ ಬಲಕ್ಕೆ, ವ್ಯಕ್ತಿಗಳು ಸಣ್ಣ ಗುಂಪುಗಳು ಚಳುವಳಿಗಳು ಜನಸಂಘಟನೆಗಳು, ಸವಾಲು ಹಾಕುವ ಸಾಧ್ಯತೆಯನ್ನು ಹೆಚ್ಚಿಸಿವೆ. ಈಗ ಬ್ಲಾಗುಗಳು, ಟ್ವಿಟರ್, ಎಸ್ಸೆಮ್ಮೆಸ್, ಯೂ-ಟ್ಯೂಬುಗಳಿಗೆ ಸೀಮಿತವಾಗಿದೆ ನಿಜ. ಆದರೆ ಇನ್ನಷ್ಟು ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ಇಂಟನರ್ೆಟ್ ಲಭ್ಯತೆಯ ವಿಸ್ತಾರದೊಂದಿಗೆ, ಪೂರ್ಣ ಪ್ರಮಾಣದ ಟಿವಿ, ಪತ್ರಿಕೆಗಳನ್ನು ಕಡಿಮೆ ಖಚರ್ಿನಲ್ಲಿ ಆನ್ ಲೈನ್ ಸಿಟಿಜನ್ ಪತ್ರಕಾರಿತೆ ಯ ಸಾಧ್ಯತೆ ಹೆಚ್ಚಲಿದೆ. ಹೆಚ್ಚು ಸಪಾಟಾದ ಮಾಧ್ಯಮ ಲೋಕ ಮತ್ತು ಗಟ್ಟಿಯಾದ ಆನ್ ಲೈನ್ ಪ್ರಜಾಪ್ರಭುತ್ವ ಬರಲಿದೆ ಎಂಬ ಆಶಾವಾದ ಇನ್ನೊಂದು ಕಡೆ. ಸಾಮಾಜಿಕ-ಆಥರ್ಿಕ ಅಸಮಾನತೆ ಇಂಟನರ್ೆಟ್ ಲಭ್ಯತೆಯ ಅಸಮಾನತೆಯನ್ನೂ ತಂದಿರುವುದು, ಇಂಟನರ್ೆಟ್ಟಿನ ಮೇಲೆ ಸಕರ್ಾರ ಮತ್ತು ಹಣಕಾಸು ಬಂಡವಾಳದ ಹಿಡಿತ ಮತ್ತು ಸೆನ್ಸಾರ್ಶಿಪ್ ಹೆಚ್ಚುತ್ತಿರುವುದು, ಭಾರತದಂತಹ ದೇಶದಲ್ಲಿ ಶೇ.8 ಜನರ ಆನ್ ಲೈನ್ ಪ್ರಜಾಪ್ರಭುತ್ವದಲ್ಲಿ ಹಿಂದುತ್ವವಾದದ ಗಟ್ಟಿದನಿ ಕೇಳಿಬರುತ್ತಿರುವ ವಿಪಯರ್ಾಸ – ಬಗ್ಗೆ ಅರಿವು ಈ ಆಶಾವಾದಕ್ಕೆ ಕಡಿವಾಣ ಸಹ ಹಾಕಿತು.

ಬದಲಿ ಮಾಧ್ಯಮದ ಅಗತ್ಯ
ಮಾಧ್ಯಮದ ಮತ್ತು ಸಮಾಜದ ಬಿಕ್ಕಟ್ಟುಗಳಿಗೆ ಪರಿಹಾರಗಳೇನು ಎಂಬ ಬಗ್ಗೆ ಸಹ, ಅದರ ಮೂಲಬೇರು ಬಗ್ಗೆ ಇದ್ದಷ್ಟೇ ಭಿನ್ನ ಅಭಿಪ್ರಾಯಗಳೇ ಇದ್ದಿದ್ದು ಆಶ್ಚರ್ಯವೇನಲ್ಲ. ಮುಖ್ಯವಾಹಿನಿ ಮಾಧ್ಯಮದ ಪ್ರಭಾವ ಸದ್ಯಕ್ಕೆ ಹೋಗುವುದಿಲ್ಲ. ಆದ್ದರಿಂದ ಅವುಗಳ ಒಳಗಿಂದ ಎಚ್ಚೆತ್ತ ಪತ್ರಕರ್ತರು, ಹೊರಗಿಂದ ಓದುಗರು ಅದರ ಬದಲಾವಣೆಗೆ ಒತ್ತಡ ಹೇರಬೇಕು. ಹೊಸ ತಲೆಮಾರಿನ ಪತ್ರಕರ್ತರನ್ನು ಇದಕ್ಕಾಗಿ ತಯಾರು ಮಾಡಬೇಕು. ಅಣಿ ನೆರೆಸಬೇಕು ಎಂಬುದು ಒಂದು ಅಭಿಪ್ರಾಯ. ಇಂತಹ ಸಾಧ್ಯತೆ ಕಡಿಮೆ. ವ್ಯಕ್ತಿಗಳು ಸಣ್ಣ ಗುಂಪುಗಳು ಚಳುವಳಿಗಳು ಜನಸಂಘಟನೆಗಳು, ಬದಲಿ ಮಾಧ್ಯಮಗಳನ್ನು ಕಟ್ಟಿ ಬೆಳೆಸುವುದು ಈಗಿನ ಬಿಕ್ಕಟ್ಟು ಪರಿಹಾರಕ್ಕೆ ಪ್ರಮುಖ ಸಾಧನ. ಇದಕ್ಕಾಗಿ ನವಮಾಧ್ಯಮಗಳು, ಸಮುದಾಯ ರೇಡಿಯೋ, ಸ್ಥಳೀಯ ಕೇಬಲ್ ಟಿವಿ ಮುಂತಾದ ಎಲ್ಲಾ ಸಾಧ್ಯತೆಗಳನ್ನು ಬಳಸಬೇಕು. ಇದು ಗಟ್ಟಿಯಾಗಿ ಮೂಡಿಬಂದ ಇನ್ನೊಂದು ಅಭಿಪ್ರಾಯ.

ಆದರೆ ಬದಲಿ ಮಾಧ್ಯಮ ನಿವರ್ಾತದಲ್ಲಿ ಹುಟ್ಟುವುದಿಲ್ಲ. ಅಥವಾ ಬದುಕಲು ಸಾಧ್ಯವಿಲ್ಲ. ಈಗಿನ ಮಾಧ್ಯಮ ಬಿಕ್ಕಟ್ಟುಗಳಿಗೆ ಕಾರಣವಾದ ನವ-ಉದಾರವಾದಿ ಜಾಗತೀಕರಣದ ವಿರುದ್ಧ ಹೋರಾಟದ ಭಾಗವಾಗಿ ಇದು ಆಗಬೇಕು. ಇದಕ್ಕೆ ಮಾಧ್ಯಮಗಳ ಒಪ್ಪಿಗೆಯ ಸಾಮೂಹಿಕ ಉತ್ಪಾದನೆಯ ನವ-ಉದಾರವಾದಿ ಪಾತ್ರದ ಬಗ್ಗೆ ಈ ಚಳುವಳಿಯಲ್ಲಿ ಸೈದ್ದಾಂತಿಕ ಸ್ಪಷ್ಟತೆ, ಅಗತ್ಯ ಇದೆ. ಮಾಧ್ಯಮಗಳ ಪಾತ್ರದ ಬಗ್ಗೆ ಅರಿವು ಮೂಡಿಸುವುದು, ಪ್ರತಿರೋಧ ಒಡ್ಡುವುದು ಎಲ್ಲಾ ಸಾಮೂಹಿಕ ಸಂಘಟನೆಗಳ ಅಜೆಂಡಾದ ಭಾಗ ಆಗಬೇಕು. ಮಾಧ್ಯಮ ಶಿಕ್ಷಣ, ಮಾಧ್ಯಮ ವಿಮಶರ್ೆ ಹರಡುವ ವ್ಯಾಪಕ ಪ್ರಚಾರ-ಆಂದೋಲನ ನಡೆಸಬೇಕು. ಸಾರ್ವಜನಿಕ ಒಡೆತನ ಮತ್ತು ನಿಯಂತ್ರಣದಲ್ಲಿರುವ ಸಾರ್ವಜನಿಕ ಮಾಧ್ಯಮ ನೀತಿಗೆ ಹೋರಾಡ ಬೇಕು. ಸಾರ್ವಜನಿಕ ಮಾಧ್ಯಮ ಸಕರ್ಾರಿ ಮಾಧ್ಯಮ ಆಗಬೇಕಾಗಿಲ್ಲ. ನಿಜವಾದ ಸಾರ್ವಜನಿಕ ಮಾಧ್ಯಮ ಆಗಲು ಸಾಧ್ಯವಿದೆ ಎಂಬುದಕ್ಕೆ ಹಾಲಂಡ್ ಮತ್ತು ಉತ್ತರ ಯುರೋಪಿನ ದೇಶಗಳಲ್ಲಿ 70-80 ರ ದಶಕದಲ್ಲಿ ಉತ್ತಮ ಮಾದರಿಗಳು ಇದ್ದವು. ಇವೆಲ್ಲದರ ಜತೆಗೆ, ಮುಖ್ಯವಾಹಿನಿ ಮಾಧ್ಯಮಗಳ ಒಳಗಿಂದ ಎಚ್ಚೆತ್ತ ಪತ್ರಕರ್ತರು, ಹೊರಗಿಂದ ಓದುಗರು ಅದರ ಬದಲಾವಣೆಗೆ ಒತ್ತಡ ಹೇರುವುದು ಸಾಧ್ಯವಾಗಬೇಕು. ಇದು ಮೂಡಿಬಂದ ಮತ್ತೊಂದು ಅಭಿಪ್ರಾಯ.

ಕೃಷ್ಣ ಭಂಡಾರಿ ಮತ್ತು ತಂಡದ ಪಂಚವಾದ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇಡೀ ಕಾರ್ಯಕ್ರಮವನ್ನು ಶ್ರೀಮತಿ ನುಗ್ಲಿಗೌಡ ತಮ್ಮ ಜಾನಪದ ಹಾಡಿನೊಂದಿಗೆ ಉದ್ಘಾಟಿಸಿದರು. ವಿಷ್ಣು ನಾಯಕ್ ಆರ್.ವಿ.ಭಂಡಾರಿಯವರನ್ನು ಭಾವಪೂರ್ಣವಾಗಿ ನೆನೆಸಿಕೊಳ್ಳುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಹತ್ತಾರು ಕವಿಗಳು ಭಾಗವಹಿಸಿದ ಕವಿಗೋಷ್ಟಿ, ಕುಣಬಿ ನೃತ್ಯ ಸಾಹಿತ್ಯೋತ್ಸವದ ಮೆರಗನ್ನು ಹೆಚ್ಚಿಸಿದವು. ಉಡುಪಿಯ ರಥಬೀದಿ ಗೆಳೆಯರು ತಂಡ, ಡಾ.ಶ್ರೀಪಾದ ಭಟ್ ನಿದರ್ೇಶನದ ಸಾದತ್ ಹಸನ್ ಮಾಂಟೋ ಕತೆ ಆಧಾರಿತ ಮಿಸ್ಟೇಕ ನಾಟಕ ಪ್ರದರ್ಶನ ಮಾಡಿದರು. ಡಾ.ವಿಠ್ಠಲ ಭಂಡಾರಿ ಮತ್ತು ಸಹಯಾನದ ಇತರ ಸಂಗಾತಿಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು.
0

Donate Janashakthi Media

Leave a Reply

Your email address will not be published. Required fields are marked *