ಬೆಂಗಳೂರು: ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯರಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಇದು ಅಸುರಕ್ಷತೆಯ ಭಾವನೆ ತಳೆಯಲು ಕಾರಣವಾಗಿದೆ. ನಡೆದುಕೊಂಡು ಹೋಗುತ್ತಿರುವ ವೇಳೆ, ವಾಹನಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವ ಉದಾಹರಣೆಗಳು ಸಾಕಷ್ಟಿವೆ.
ಚಾಲಕನ ಸೀಟಿನ ಹಿಂದೆ ಬರಹವೊಂದು ಅಂಟಿಸಿರುವ ಅವರು, ‘ನಾನೂ ಒಬ್ಬ ಅಣ್ಣ/ತಂದೆ, ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ’ ಎಂದು ಧೈರ್ಯ ತುಂಬಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನ ಆಟೊ ಚಾಲಕರೊಬ್ಬರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಸಿಐಟಿಯು ನಾಯಕಿ ಎಸ್. ವರಲಕ್ಷ್ಮಿಗೆ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿ
ಈಗ ರಾತ್ರಿ 12 ಗಂಟೆ… ರ್‍ಯಾಪಿಡೊ ಆಟೊದಲ್ಲಿ ನಾನು ಪ್ರಯಾಣಿಸುತ್ತಿದ್ದೇನೆ. ಆಟೊದಲ್ಲಿ ಕುಳಿತ ತಕ್ಷಣ ಈ ಬರಹವನ್ನು ಓದಿದೆ. ಈಗ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಬರಹವನ್ನು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರ(ಆಟೊ ಚಾಲಕ) ಹೆಸರು ಮತ್ತು ಪರಿಚಯವನ್ನು ಅವರು ಹಂಚಿಕೊಂಡಿಲ್ಲ.
‘ಇಂತಹ ಸಣ್ಣ ಕೆಲಸಗಳು ಮಹಿಳೆಯರಿಗೆ ಸುರಕ್ಷಿತ ಭಾವೆನಯನ್ನು ಮೂಡಿಸುತ್ತದೆ’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಹೇಳಿದ್ದಾರೆ.
‘ನಮಗೆ ಬೇಕಿರುವುದು ಇಷ್ಟೇ. ಸುರಕ್ಷತೆ ಒಂದೇ ನಾವು ಕೇಳುವುದು’ ಎಂದು ಮಹಿಳಾ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ನೋಡಿ : ಉದ್ಯೋಗ ಸೃಷ್ಟಿಯಲ್ಲಿ ಕುಂಟುತ್ತಿರುವ ಸರಕಾರಗಳು | ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
