- ಮಾಸ್ಕೋದ ಸ್ಪುಟ್ನಿಕ್ ನಲ್ಲಿ ಪೊಲೀಸರಿಂದ ಹತ್ಯೆ
ವಿಸ್ಕಾನ್ಸಿನ್(ಯುಎಸ್‍ಎ): ಅಮೆರಿಕದಲ್ಲಿ ಕಪ್ಪು ವರ್ಣಿಯ ಜಾರ್ಜ್ ಫ್ಲಾಯ್ಡ್ ಅವರ ಘೋರ ಹತ್ಯೆಯ ಬಳಿಕ ಇದೀಗ ರಷ್ಯಾದ ಮಾಸ್ಕೋ, ( ಸ್ಪುಟ್ನಿಕ್)ದಲ್ಲಿ ಆಫ್ರಿಕನ್-ಅಮೆರಿಕನ್ ಮತ್ತೊಬ್ಬ ಕಪ್ಪು ವರ್ಣಿಯನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.
ಜಾಕಬ್ ಬ್ಲೇಕ್ ಎಂಬುವವರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಲಿ ನಡೆಸಿ ಹತ್ಯೆಗೈದಿದ್ದಾರೆ. ಈ ಘಟನೆಯನ್ನು ಖಂಡಿಸಿ, ಅಮೆರಿಕಾದ ವಿಸ್ಕಾನ್ಸಿನ್ ರಾಜ್ಯದ ಕೆನೋಶಾ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯನ್ನು ಚದುರಿಸಲು ಕಾನೂನು ಜಾರಿ ಅಧಿಕಾರಿಗಳು ಅಶ್ರುವಾಯು ಸಿಡಿಸಿದ್ದಾರೆ ಎಂದು ಅಮೆರಿಕಾ ಮಾಧ್ಯಮ ವರದಿ ಮಾಡಿದೆ. ಕರ್ಫ್ಯೂ ಜಾರಿಗೊಳಿಸಿದ ಎರಡು ಗಂಟೆಗಳ ನಂತರ ಕಳೆದ ರಾತ್ರಿ 10 ಗಂಟೆಗೆ ಪ್ರದೇಶದಲ್ಲಿ ಗಲಭೆಗಳು ಆರಂಭಗೊಂಡಿವೆ ಎಂದು ಸಿಎನ್ ಎನ್ ವರದಿ ಮಾಡಿದೆ.
ಕೆನೋಶ ಕೌಂಟಿ ಕೋರ್ಟ್ ಹೌಸ್ ಬಳಿ ಕಾನೂನು ಬಾಹಿರವಾಗಿ ಜಮಾಯಿಸಿದ್ದ ಪ್ರತಿಭಟನಾಕಾರರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆದರೆ ಅವರು ಸ್ಥಳದಿಂದ ತೆರಳದ ಕಾರಣ ಗುಂಪಿನ ಮೇಲೆ ಪೊಲೀಸ್ ಅಧಿಕಾರಿಗಳು ಅಶ್ರುವಾಯು ಸಿಡಿಸಿದರು ಎಂದು ಮಾಧ್ಯಮ ಪ್ರಸಾರ ಮಾಡಿದೆ.