ಭಾರೀ ಮಳೆ-ಗಾಳಿಯಿಂದ ಹೆಲಿಕಾಫ್ಟರ್ ಪತನ: 4 ಸಾವು

ಭಾರೀ ಮಳೆ ಗಾಳಿಯಿಂದಾಗಿ ನಿಯಂತ್ರಣ ತಪ್ಪಿದ ಹೆಲಿಕಾಫ್ಟರ್ ಪತನಗೊಂಡ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಶನಿವಾರ ಸಂಭವಿಸಿದೆ.

ಎಡ್ಲ್ಯೂ 139 ಹೆಲಿಕಾಫ್ಟರ್ ಮುಂಬೈನ ಜುಹುವಿನಿಂದ ಹೈದರಾಬಾದ್ ಕಡೆಗೆ ಹೊರಟ್ಟಿದ್ದು, ಪೊದೆಯೊಂದರ ಬಳಿ ಪತನಗೊಂಡಿದೆ.

ದುರ್ಘಟನೆಯಲ್ಲಿ ಕ್ಯಾಪ್ಟನ್ ಆನಂದ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಭದ್ರತಾ ಪಡೆ ಸಿಬ್ಬಂದಿ ದೌಡಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *