ಭಾರತದ ಮಹತ್ವಾಕಾಂಕ್ಷಿ ಗಗನಯಾತ್ರೆಗೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರನ್ನು ಪ್ರಧಾನ ಗಗನಯಾತ್ರಿಯಾಗಿ ಭಾರತೀಯ ಬಾಹ್ಯಕಾಶ ಸಂಸ್ಥೆ ನೇಮಕ ಮಾಡಿದೆ.
ಇಸ್ರೊ ಇತ್ತೀಚೆಗಷ್ಟೇ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದ ಶುಭಾಂಶು ಶುಕ್ಲ ಅವರನ್ನು ಪ್ರಧಾನ ಗಗನಯಾತ್ರಿಯಾಗಿ ಆಯ್ಕೆ ಮಾಡಿದೆ.
ಗಗನಯಾತ್ರೆಗೆ ಯಾವಾಗಲೂ ಪ್ರಧಾನ ಗಗನಯಾತ್ರಿಯನ್ನು ನೇಮಕ ಮಾಡಲಾಗುತ್ತದೆ. ಗಗನಯಾತ್ರೆ ಅತ್ಯಂತ ಕ್ಲಿಷ್ಟ ಯಾತ್ರೆ ಆಗಿರುವುದರಿಂದ ಪರ್ಯಾಯ ಗಗನಯಾತ್ರಿಯನ್ನೂ ಆಯ್ಕೆ ಮಾಡಲಾಗುತ್ತಿದೆ. ಇದು ಸಹಜ ಪ್ರಕ್ರಿಯೆ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.
ಶುಭಾಂಶು ಶುಕ್ಲ 1985 ಅಕ್ಟೋಬರ್ 10ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ್ದಾರೆ. 2006 ಜೂನ್ 17ರಂದು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರ್ಪಡೆಯಾಗಿದ್ದರು. ಇಲ್ಲಿ ಭಾರತೀಯ ವಾಯುಪಡೆಯ ಯದ್ಧವಿಮಾನಗಳ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದಾರೆ.
ಭಾರತದ ಯುದ್ಧ ವಿಮಾನಗಳ ಪ್ರಮುಖ ಪೈಲೆಟ್ ಆಗಿದ್ದು ಸುಮಾರು 2000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಅತ್ಯಂತ ವೇಗ ಹಾಗೂ ವೈವಿದ್ಯಮಯ ವಿಮಾನಗಳಾದ ಸುಖೋಯ್-30ಎಂಕೆಐ, ಮಿಗ್-21, ಮಿಗ್-29, ಜಾಗ್ವರ್, ಹ್ವಾಕ್, ಡ್ರೋನಿಯರ್ ಮತ್ತು ಎನ್-32 ಮಾದರಿಗಳನ್ನು ಚಲಾಯಿಸಿದ ಅನುಭವ ಹೊಂದಿದ್ದಾರೆ.
ಪರ್ಯಾಯ ಪ್ರಧಾನ ಗಗನಯಾತ್ರಿಯಾಗಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣ ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಾಂತ್ ಕೇರಳದ ತಿರುವೆನ್ಜಿಯಾಡ್ ನಲ್ಲಿ 1976 ಆಗಸ್ಟ್ 26ರಂದು ಜನಿಸಿದ್ದಾರೆ. ಇವರು ಕೂಡ ರಾಷ್ಟ್ರೀಯ ರಕ್ಷಣಾ ಆಕಾಡೆಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ.