ಭಾರತದ ನೆಲ ದುಡಿಯುವ ವರ್ಗಕ್ಕೆ ಸೇರಿದ್ದು| ಎಸ್‌ಎಫ್‌ಐ ಕೇಂದ್ರ ಸಮಿತಿ ಉಪಾಧ್ಯಕ್ಷ ನೀತಿಶ್ ನಾರಾಯಣ್

ಕಲಬುರಗಿ : ಭಾರತದ ನೆಲ ದುಡಿಯುವ ವರ್ಗಕ್ಕೆ ಸೇರಿದ್ದು ಎಂದು ಎಸ್‌ಎಫ್‌ಐ ಕೇಂದ್ರ ಸಮಿತಿಯ ಉಪಾಧ್ಯಕ್ಷ ನೀತಿಶ್ ನಾರಾಯಣ್ ಹೇಳಿದರು.

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಡಿಸೆಂಬರ್ 1 ರಂದು ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ ಆಯೋಜಿಸಲಾಗಿತ್ತು.

” ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ” ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು. ತಿಮ್ಮಾಪುರ ಸರ್ಕಲ್‌ನಿಂದ ಜಗತ್ ಸರ್ಕಲ್ ವರೆಗೂ ಮೆರವಣಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ದಾರಿಯುದ್ದಕ್ಕೂ ಘೋಷಣೆ ಕೂಗುವ ಮೂಲಕ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ಇದನ್ನೂ ಓದಿ:ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ | ಎಸ್‌ಎಫ್‌ಐ ಮನವಿ

ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಸ್‌ಎಫ್‌ಐ ಕೇಂದ್ರ ಸಮಿತಿಯ ಉಪಾಧ್ಯಕ್ಷ ನೀತಿಶ್ ನಾರಾಯಣ್ ಅವರು ಮಾತಾನಾಡಿ, ಈ ದೇಶದಲ್ಲಿ ಹಲವಾರು ಭಾಷೆಗಳಿವೆ, ಜನಾಂಗಳಿವೆ, ಧರ್ಮಗಳಿವೆ, ಹಲವಾರು ಬುಡಕಟ್ಟುಗಳಿವೆ ಆ ಕಡೆ ಮಣಿಪುರ ಈ ಕಡೆ ಕರ್ನಾಟಕ ಮತ್ತು ನಾಗಲ್ಯಾಂಡ ಪಕ್ಕದಲ್ಲಿ ಆಂಧ್ರ ಪ್ರದೇಶವಿದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನೆಲ. ನಾವೆಲ್ಲರೂ ಈ ದೇಶಕ್ಕೆ ಈ ನೆಲಕ್ಕೆ ಸೇರಿದವರು ಈ ದೇಶ ದುಡಿಯುವಂತಹ ವರ್ಗಕ್ಕೆ ಸೇರಿದ್ದು.‌ ದೇಶದಲ್ಲಿ ಯಾವುದೇ ಒಂದು ಭಾಷೆ, ಧರ್ಮ, ಸಂಸ್ಕೃತಿ ಒಂದು ಆಡಳಿತಕ್ಕೆ ಸೇರಿದಲ್ಲ ಎಂದರು.

ಸಮಾವೇಶದಲ್ಲಿ ಎಸ್‌ಎಫ್‌ಐ ಕೇಂದ್ರ ಸಮಿತಿ ಜಂಟಿ ಕಾರ್ಯದರ್ಶಿ ದಿಪ್ಸೀತಾ ಧರ್ ಮಾತಾನಾಡಿ, ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಕ್ಕಳು ಮತ್ತೆ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿವೆ‌, ಮಹಿಳೆಯರು ಯಾವ ಉಡುಪು ಹಾಕಬೇಕು, ಯಾವ ಆಹಾರ ತಿನ್ನಬೇಕು, ಸಂಗಾತಿಯಾಗಿ ಯಾರನ್ನ‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನ ಆಳುವ ಸರ್ಕಾರ ನಿರ್ಧರಿಸುತ್ತಿದೆ. ಅದನೆಲ್ಲ ನಿರ್ಧರಿಸುವುದಕ್ಕೆ ಇವರು ಯಾರು ಎಂಬ ಪ್ರಶ್ನೆಯನ್ನು ಎತ್ತಿದರು.

ಇದನ್ನೂ ಓದಿ:ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಎಸ್‌ಎಫ್‌ಐ ಒತ್ತಾಯ

ನಾವು ಎಸ್‌ಎಫ್‌ಐ ಸಂಘಟನೆಯವರು ಈ ನೆಲದ ವೈವಿಧ್ಯತೆಯನ್ನು ಎತ್ತಿ ಹಿಡಿಯುವವರು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ಖಂಡಿಸುತ್ತೇವೆ. ಆ ಕಾರಣಕ್ಕಾಗಿ ನಾವುಗಳು ನಮ್ಮ ಜೀವನವನ್ನು ಸಂಘಟನೆಗೆ ಅರ್ಪಿಸಿಕೊಂಡಿದ್ದೇವೆ‌. SFI ಅಂದ್ರೆ ವಿದ್ಯಾರ್ಥಿಗಳ ಹಿತಕ್ಕಾಗಿ ಅರ್ಪಿಸಿಕೊಂಡ ಸಂಘಟನೆ ಎಂದು ತಿಳಿಸಿದರು.

ಈ ಸಮಾವೇಶಕ್ಕೆ ಉದ್ಘಾಟಕರಾಗಿ ಬಂದ ಶಿವಶರಣಪ್ಪ ಮೂಳೆಗಾಂವ್ ಅವರು ಎಸ್‌ಎಫ್‌ಐ ಎಂದರೆ ವಿದ್ಯಾರ್ಥಿಗಳು ಕನಸಿಗೆ ರೆಕ್ಕೆ ಕಟ್ಟುವುದಾಗಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸುವ ಸಂಘಟನೆ, ವಿದ್ಯಾರ್ಥಿಗಳನ್ನ ಗಟ್ಟಿಗೊಳಿಸುವ ಸಂಘಟನೆಯಾಗಿದೆ. ನಾನು ಕೂಡ ಎಸ್‌ಎಫ್‌ಐ ಸಂಘಟನೆ ಮೂಲಕವೇ ಹೋರಾಟಕ್ಕೆ ಬಂದವನೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಈ ಸಮಾವೇಶದಲ್ಲಿ ಡಾ ಮೀನಾಕ್ಷಿ ಬಾಳಿ, ಭೀಮನಗೌಡ ಸುಂಕೇಶ್ವರಹಾಳ, ಅಮರೇಶ ಕಡಗದ , ಡಾ ಶರಣಪ್ಪ ಸೈದಾಪೂರ, ಡಾ ಸಂತೋಷ ಹುಂಪ್ಳಿ, ಬೃಂದಾ ಧನ್ನಿ, ಮಾಲಾಶ್ರೀ ಮತ್ತಿಮೂಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ನಿರ್ವಹಿಸಿದರೆ ಮೇಘಾ ಸ್ವಾಗತಿಸಿದರು ಸುಕನ್ಯಾ ವಂದನಾರ್ಪಣೆ ಮಾಡಿದರು.

ವಿಡಿಯೋ ನೋಡಿ:ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *