ಬೆಳಗಾವಿ | ದಿನದ 24 ಗಂಟೆಯೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರಬೇಕು ! – ಸಚಿವ ಗುಂಡೂರಾವ್

ಬೆಳಗಾವಿ : ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜ್ಯದ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಜರಿರಬೇಕು. ಇದು ರಾಜ್ಯದ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಅನ್ವಯಿಸುತ್ತೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ನಡೆದ‌ ಪ್ರಶ್ನೋತ್ತರ ಕಲಾಪದಲ್ಲಿ ಕುಷ್ಠಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾಸ್ಪತ್ರೆಗಳ ಒತ್ತಡವನ್ನು ಕಡಿಮೆ ಮಾಡಲು ಇನ್ನು ಮುಂದೆ ಎಲ್ಲ ತಾಲೂಕು ಆಸ್ಪತ್ರೆಗಳು ಜನರಿಗೆ ನಿರಂತರ ಆರೋಗ್ಯ ಸೇವೆಯನ್ನು ಒದಗಿಸಬೇಕಿದೆ. ಅದಕ್ಕಾಗಿ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದರು.

ಇದನ್ನೂ ಓದಿ : ಆಂಧ್ರಪ್ರದೇಶ | ಶಸ್ತ್ರಚಿಕಿತ್ಸೆ : ಹಸುವಿನ ಹೊಟ್ಟೆಯಲ್ಲಿದ್ದ 52 ಕೆ.ಜಿ ಪ್ಲಾಸ್ಟಿಕ್ ಹೋರ ತೆಗೆದ ವೈದ್ಯರು

ಕೊರತೆ ನೀಗಲು ಸರ್ಕಾರ ಕ್ರಮ ಕೈಗೊಂಡಿದ್ದು, 600 ಶುಶ್ರೂಷಕರು, 400 ಟೆಕ್ನಿಶಿಯನ್ಸ್ ನೇಮಕ ಪ್ರಕ್ರಿಯೆ ಈ ತಿಂಗಳಲ್ಲಿ ಮುಗಿಯಲಿದೆ  ಪ್ರತಿಯೊಂದು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಜೊತೆಗೆ ಇಬ್ಬರು ಅರಿವಳಿಕೆ ತಜ್ಞರು, ಇಬ್ಬರು ಮಕ್ಕಳ ತಜ್ಞರು ಹಾಜರಿರಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ನೀಗಿಸಲು ‘ಕಂಪಲ್ ಸರಿ ಮೆಡಿಕಲ್ ಸರ್ವಿಸ್’ ಅಡಿಯಲ್ಲಿ ಈಗಾಗಲೇ 1500 ಎಂಬಿಬಿಎಸ್ ವೈದ್ಯರ ನೇಮಕಾತಿ ಮಾಡಲಾಗಿದೆ. ಇದೇ ವೇಳೆ, ತಜ್ಞ ವೈದ್ಯರ ನೇಮಕ ಪ್ರಕ್ರಿಯೆಯೂ ಮುಂದುವರಿದಿದ್ದು, ಕೆಲವರು ಕೋರ್ಟ್ ಗೆ ಹೋಗಿರುವುದರ ಪರಿಣಾಮ ನೆನೆಗುದಿಗೆ ಬಿದ್ದಿದೆ. 400 ಫಾರಮಾಸಿಸ್ಟ್ ಸೇರಿದಂತೆ 800-900 ತಜ್ಞ ವೈದ್ಯರ ನೇಮಕ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ.

ರಾಜ್ಯದಲ್ಲಿ ಒಟ್ಟು 3000 ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಇದ್ದು, ಈ ಪೈಕಿ ಪ್ರಸಕ್ತ ವರ್ಷ 1500 ಮಂದಿಯ ನೇಮಕ ಕಾರ್ಯ ಈಗಾಗಲೇ ಮುಗಿದಿದೆ. ನಮ್ಮ ಇಲಾಖೆಯಿಂದ ಬಡ್ತಿ ಮೇರೆಗೆ ಬೇರೆ ಬೇರೆ ಇಲಾಖೆಗೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ ಮಾತೃ ಇಲಾಖೆಗೆ ಕರೆಯಿಸಿಕೊಳ್ಳಲಾಗುತ್ತಿದ್ದು, ಇನ್ನು ಮುಂದೆ ಗ್ರಾಮೀಣ ಭಾಗದಲ್ಲಿ ವೈದರ ಕೊರತೆ ಕಡಿಮೆಯಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಸದನಕ್ಕೆ ಮಾಹಿತಿ ನೀಡಿದರು.

ಇದನ್ನೂ ನೋಡಿ : ಡಿಸೆಂಬರ್ 10| ಮಾನವ ಹಕ್ಕುಗಳ ದಿನ ; ನಮ್ಮ ದೈನಂದಿನ ಹಕ್ಕುಗಳು Janashakthi Media

 

Donate Janashakthi Media

Leave a Reply

Your email address will not be published. Required fields are marked *