ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ

ಬೆಂಗಳೂರು : ರಾಜ್ಯದೆಲ್ಲೆಡೆ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. 2025ಕ್ಕೆ ವಿದಾಯ ಹೇಳಿದ ಜನರು 2026ನ್ನು ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ, ಪಾರ್ಟಿ ಮಾಡುತ್ತಾ ಸ್ವಾಗತಿಸಿದರು.

ನಗರದ ವಿವಿದ ಕಡೆಗಳಲ್ಲಿ ಹೊಸ ವರ್ಷದ ಸಡಗರದಲ್ಲಿ  ವಿವಿಧ ಪಬ್‌, ಬಾರ್‌, ರೆಸ್ಟೊರೆಂಟ್‌ಗಳು ತುಂಬಿದ್ದವು. ಎಂ.ಜಿ. ರಸ್ತೆ, ಕೋರಮಂಗಲ  ಗಳಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು. ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಒಪೆರಾ ಜಂಕ್ಷನ್‌, ರೆಸ್ಟ್‌ಹೌಸ್ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ರಿಚ್ಮಂಡ್‌ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೋರಮಂಗಲದಲ್ಲಿ ಹೆಚ್ಚಿನ ಯುವ ಸಮೂಹ ಕಂಡುಬಂತು.

ಇದನ್ನೂ ಓದಿ : ಬೆಂಗಳೂರು | ಮೂಲಸೌಕರ್ಯ ಜೊತೆಗೆ ಪುನರ್‌ವಸತಿ ಕೋಗಿಲು ಬಡಾವಣೆಯ ನಿವಾಸಿಗಳಿಗೆ  ಕಲ್ಪಿಸಿ – ಡಾ. ನಾಗಲಕ್ಷ್ಮೀ ಚೌಧರಿ

ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಡಿಜೆ ಸೇರಿದಂತೆ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆ ಆಗುವುದನ್ನೇ ಕಾಯುತ್ತಿದ್ದ ಯುವ ಜನತೆ ನೃತ್ಯ ಮಾಡುತ್ತಾ ಖುಷಿಪಟ್ಟರು. ಹೊಸ ವರ್ಷವನ್ನು ಸಂಭ್ರಮಿಸಿದರು. ವಿವಿಧ ಕ್ಲಬ್, ರೆಸಾರ್ಟ್​ಗಳಲ್ಲಿ ಹೊಸ ವರ್ಷಕ್ಕಾಗಿ ವಿವಿಧ ಈವೆಂಟ್​ಗಳನ್ನು ಏರ್ಪಡಿಸಲಾಗಿತ್ತು.

ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ
ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ

ಅಡಕೆ ಮಂಡಿ ಕ್ಲಬ್​ನಲ್ಲಿ ರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಖುಷಿ ಖುಷಿಯಿಂದ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಯಿತು. ಯುವಕ-ಯುವತಿಯರು ಸೇರಿದಂತೆ ಎಲ್ಲರೂ ಡ್ಯಾನ್ಸ್ ಮಾಡಿದರು. ಶಿವಮೊಗ್ಗದ ಕಂಟ್ರಿ‌ ಕ್ಲಬ್, ಮಲೆನಾಡ್ ಶೈರ್, ಕಂಟ್ರಿ ಕ್ಲಬ್, ಸಿಟಿ ಕ್ಲಬ್, ಅಡಕೆ ಮಂಡಿ‌ ಕ್ಲಬ್​ನಲ್ಲಿ ಹಾಗೂ ಸಾಗರದ ಗ್ರೀನ್ ಆ್ಯಂಬಸಿಯಲ್ಲಿ ಹೊಸ ವರ್ಷಕ್ಕಾಗಿ ತರಹೇವಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹೊಸವರ್ಷವನ್ನು ಜನರು ಸ್ವಾಗತಿಸಿದರು. ಖಾಸಗಿ ಹೋಟೆಲ್​ಗಳಲ್ಲಿ ಆಯೋಜಿಸಿದ್ದ ಈವೆಂಟ್​ಗಳಲ್ಲಿ ಭಾಗಿಯಾಗಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಯುವಕರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ಯುವತಿಯರು ಶಂಕರ್​ ನಾಗ್​ ಚಿತ್ರದ ‘ಸಂತೋಷಕ್ಕೆ.. ಹಾಡು ಸಂತೋಷಕ್ಕೆ’ ‘ಮಸ್ತ್​​ ಮಸ್ತ್​​ ಹುಡುಗಿ ಬಂದ್ಲು’, ‘ನಿಂಬೆ ಹಣ್ಣಿನಂತ ಹುಡ್ಗಿ ಬಂದ್ಲು ನೋಡು’ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದರು.

ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ
ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ

ಮಧ್ಯರಾತ್ರಿ ಕೇಕ್ ಕತ್ತರಿಸಿದರು. ಆಕಾಶದಲ್ಲಿ ರಂಗು ರಂಗಿನ ಪಟಾಕಿ ಚಿತ್ತಾರ ಬಿಡಿಸಿದವು. ಹಿಂದಿ ಹಾಡುಗಳಾದ ಗಂದಿ ಗಂದಿ ಬಾತ್, ಓ ರಾತ್ ಭರ್, ತೇರೆ ಧ್ಯಾನ್ ಕಿದರ್ ಹೈ ತೇರ ಹೀರೋ ಇದರ್ ಹೈ, ಸಾಂಗ್​ಗಳಿಗೆ ದಂಪತಿಗಳು ಸಖತ್​ ಹೆಜ್ಜೆ ಹಾಕಿದರು. ಇನ್ನಷ್ಟು ಜನ ಗೇಮ್​​ ಆಡುವ ಮೂಲಕ ವಿನೂತನವಾಗಿ ಹೊಸ ವರ್ಷಾಚರಿಸಿದರು.

ಯುವತಿಯರಿಗೆ ಕುಣಿಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಯುವಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈವೆಂಟ್​​ಗಳಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಬೌನ್ಸರ್​ಗಳು ವಿಶೇಷ ಭದ್ರತೆ ಒದಗಿಸಿದ್ದರು. ಪೊಲೀಸರು ಕೂಡ ಬಿಗಿ ಬಂದೋಬಸ್ತ್ ಮಾಡಿದ್ದರು. ಪೊಲೀಸ್ ವಾಹನಗಳಲ್ಲಿ ನಗರದ ಗಸ್ತು ಹಾಕುತ್ತಿದ್ದರು.

ಮೈಸೂರು : ಅರಮನೆಗೆ ವಿಶೇಷ ವಿದ್ಯುತ್​ ಅಲಂಕಾರ ಮಾಡಲಾಗಿತ್ತು. ಮೈಸೂರಿನ ಜನರೂ ಕೂಡ ಹೊಸವರ್ಷವನ್ನು ಸಂಭ್ರಮಿಸುವುದರಲ್ಲಿ ಹಿಂದೆ ಬೀಳಲಿಲ್ಲ.  ಅರಮನೆ ಮುಂಭಾಗ 12 ಗಂಟೆಗೆ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ
ಬೆಂಗಳೂರು |ರಾಜ್ಯದೆಲ್ಲೆಡೆ ಹೊಸ ವರ್ಷ ಆಚರಣೆ : 2025ಕ್ಕೆ ವಿದಾಯ ಹೇಳಿ 2026ನ್ನು ಕೇಕ್​ ಕತ್ತರಿಸಿ ಸಂಭ್ರಮ

ಇದನ್ನೂ ನೋಡಿ : 2026 | ನಿರಾತಂಕ ಹಗಲು, ನಿರ್ಭಯದ ರಾತ್ರಿಗಳ ಖಾತ್ರಿಯಾಗಿರಲಿ Janashakthi Media

Donate Janashakthi Media

Leave a Reply

Your email address will not be published. Required fields are marked *