ಬಿಬಿಎಂಪಿ 1500 ಕೋಟಿ ರೂ ನಕಲಿ ಬಿಲ್ ಹಗರಣ; ಶ್ವೇತಪತ್ರಕ್ಕೆ ಆಗ್ರಹ

ಬೆಂಗಳೂರು : 2008 ರಿಂದ 2011 ಕಾಲಾವಧಿಯಲ್ಲಿ ರಾಜರಾಜೇಶ್ವರಿನಗರ, ಗಾಂಧಿನಗರ ಮತ್ತು ಮಲ್ಲೇಶ್ವರಂ  ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದಿರುವ ಬಿಬಿಎಂಪಿ  ನಕಲಿ ಬಿಲ್ ಗಳ 1500 ಕೋಟಿ ರೂಗಳ ಹಗರಣ ಕುರಿತು ನ್ಯಾಯಮೂರ್ತಿ ಶ್ರೀ.ಹೆಚ್.ಎನ್.ನಾಗಮೋಹನ್ ದಾಸ್ ತನಿಖಾ ಆಯೋಗ ನೀಡಿರುವ ವರದಿ ಆಧರಿಸಿ ರಾಜ್ಯ ಸಕಾ೯ರವು ಕೈಗೊಂಡಿರುವ ಕ್ರಮಗಳ ಕುರಿತು ಕೂಡಲೆ ಶ್ವೇತಪತ್ರ ಹೊರಡಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಬಿಜೆಪಿ ಸಕಾ೯ರವನ್ನು ಆಗ್ರಹಿಸಿವೆ.

ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ 6000 ಕಡತಗಳನ್ನು ಪರಿಶೀಲಿಸಿ 1500 ಕೋಟಿ ರೂಗಳ ಅಕ್ರಮ ನೆಡೆದಿರುವುದನ್ನು ದೃಢಪಡಿಸಿ ಸಿವಿಲ್, ಕ್ರಿಮಿನಲ್ ಮತ್ತು ನಷ್ಟ ವಸೂಲಿಯ ಮೂರು ವಿಧದ ಕ್ರಮಗಳಿಗೆ ಆಯೋಗವು ಶಿಫಾರಸ್ಸು ಮಾಡಿತ್ತು. 2018 ರಲ್ಲಿ 600 ಪುಟಗಳ 2 ಸಂಪುಟದ ವರದಿಯನ್ನು ಅಂದಿನ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಿತ್ತು.

ಅದಕ್ಕೂ ಮುನ್ನ ಐಎಎಸ್ ಅಧಿಕಾರಿ ಡಾ.ರಾಜೇಂದ್ರ ಕುಮಾರ್  ಕಟಾರಿಯ ಸಿವಿಲ್ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ವರದಿ ನೀಡಿದ್ದರು. ಅಂದು ಕಾಂಗ್ರೆಸ್ ಶಾಸಕರಾಗಿದ್ದ ಇಂದಿನ ಬಿಜೆಪಿಯ ಆರ್.ಆರ್.ನಗರ ಕ್ಷೇತ್ರದ ಅಭ್ಯಥಿ೯ಯಾಗಿರುವ ಶ್ರೀ.ಮುನಿರತ್ನ ಅವರ ಕಚೇರಿಯಲ್ಲಿ ಹಲವು ಬಿಬಿಎಂಪಿ ಕಡತಗಳು ಮುಂತಾದವು ಸಿಕ್ಕಿದ್ದು, ಆ ವೇಳೆ ಬಿಜೆಪಿಯೆ ವಿರೋಧ ಪಕ್ಷವಾಗಿ ಅದರ ವಿರುದ್ದ ಹೋರಾಟ ನಡೆಸಿ ತನಿಖೆಗೆ ಒತ್ತಾಯಿಸಿತ್ತು. ಪರಿಣಾಮವಾಗಿ ತನಿಖೆಗೆ ಆದೇಶಿಸಲಾಗಿತ್ತು.

ಇಂತಹ ಹಗರಣವು ಹಾಲಿ ಉಪ ಮುಖ್ಯ ಮಂತ್ರಿ ಡಾ.ಅಶ್ವತ್ ನಾರಾಯಣ್,  ಮಾಜಿ ಸಚಿವರು ಕಾಂಗ್ರೆಸ್ ಮುಖಂಡರಾದ ಶ್ರೀ. ದಿನೇಶ್ ಗುಂಡು ರಾವ್ ಹಾಗು ಹಾಲಿ ಆರ್.ಆರ್.ನಗರ ಉಪ ಚುನಾವಣೆಯ ಬಿಜೆಪಿ ಅಭ್ಯಥಿ೯ ಶ್ರೀ.ಮುನಿರತ್ನ ನಾಯ್ಡು ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ಸಂಬಂಧಿಸಿದ ನಕಲಿ ಬಿಲ್  ಹಗರಣವಾಗಿರುವ ಕಾರಣ  ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯ ಸಕಾ೯ರವು ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ ಕೆ. ಎನ್. ಉಮೇಶ್ , ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾಯ೯ದಶಿ೯ ಎನ್. ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *