ಸಂಪುಟ – 06, ಸಂಚಿಕೆ 26, ಜೂನ್ 24, 2012
ಸುಮ್ಮನಿದ್ದೇವೆ ಆದರೆ ತಿಳಿಯದಿರಿ
ಮಲಗಿದ್ದೇವೆಂದು, ಸೋತಿದ್ದೇವೆಂದು,
ಬೂದಿ ಮುಚ್ಚಿದರೂ ನಿಗಿನಿಗಿಸುವ
ಕೆಂಡದುಂಡಿಗಳು ನಾವು
ನಮ್ಮ ಪಾಲಿನ ಅನ್ನ ಕಸಿದು ತಿನ್ನುವ
ನಾಯಿಗಳಿಗೆ ಕಳಿಸುವೆವು ನರಕಕ್ಕೆ,
ಮುಟ್ಟಿದರೆ ಮಣ್ಣುಗೂಡಿಸುವೆವು,
ಬರಗಾಲದ ದಿಕ್ಕೆಟ್ಟ ರೈತ, ಕೂಲಿಗಳು
ನಾವು ನೋವು, ಹಸಿವೆಯನುಂಡ ಮಣ್ಣಿನ
ಮಕ್ಕಳು, ಪರೀಕ್ಷಿಸದಿರಿ ತಾಳ್ಮೆಯನು,
ಕಂಗೆಡಿಸಿದರೆ ಸಿಡಿಯುವೆವು ಸಿಡಿಮದ್ದುಗಳಾಗಿ
ಬರಗಾಲದ ಹಸಿದ ಹುಲಿಗಳು ನಾವು
ಲಂಚ ತಿನ್ನುವ ಕೈಗಳಿಗೆ ಹಬ್ಬ
ಈ ಬರಗಾಲ, ಘಾಡ ನಿದ್ರೆ
ಮಾಡುವ ಸಕರ್ಾರ, ಬಡಿದೆಬ್ಬಿಸು
ಬೀದಿಗೆ ಬಂದು, ಘಜರ್ಿಸು
ಸಿಂಹಗಳಂತೆ ರೈತ, ಕೂಲಿಗಳೆ.
– ಜಿ.ಎ.ಹಿರೇಮಠ
ಹಾವೇರಿ
( ಕಳೆದ ವರ್ಷದ ಬರದ ಬೇಗೆ ಇನ್ನೂ ತೀರಿಲ್ಲ. ಮಳೆಗಾಲ ಬಂದರೂ ರಾಜ್ಯದ ಬಹಳಷ್ಟು ಕಡೆ ಮಳೆ ಇಲ್ಲ. ಆಳುವ ಜನಕ್ಕೆ ಕುಚರ್ಿ ಕಾದಾಟ ಬಿಟ್ಟು ಬೇರ್ಯಾವುದರ ಕಡೆಗೂ ಲಕ್ಷ್ಯವಿಲ್ಲ. ಅಧಿಕೃತ ವಿರೋಧ ಪಕ್ಷಗಳು ಏನು ಮಾಡುತ್ತಿದ್ದಾವೋ ಗೊತ್ತಿಲ್ಲ. ಇಂಥ ಹೊತ್ತಲ್ಲಿ ನೊಂದವರ ಎದೆಯಾಳದ ಕಿಚ್ಚು ಒಂದು ಕವನವಾಗಿ `ಸಿಡಿದರೆ’ ಅದು ಹೇಗಿರುತ್ತದೆ. ಓದಿ, ಒಂದು ಹೃದಯ ಸ್ಫಶರ್ಿ ಕವನ.)
0