ಐದು ಬಾರಿಯ ಡಿಎಂಕೆ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಜಗತ್ ರಕ್ಷಕನ್ ಗೆ ವಿದೇಶ ವ್ಯವಹಾರಗಳ ನಿಯಮ ಉಲ್ಲಂಘಿಸಿದ್ದಕ್ಕಾಗಿ 908 ಕೋಟಿ ರೂ. ದಂಡ ವಿಧಿಸಲಾಗಿದೆ.
76 ವರ್ಷದ ಜಗತ್ ರಕ್ಷಕನ್ ತಮಿಳುನಾಡಿನ ಅರಕ್ಕೊನಮ್ ಸರಣಿ ಆಸ್ಪತ್ರೆ ಮತ್ತು ಕಾಲೇಜುಗಳನ್ನು ಹೊಂದಿದ್ದು, ವಿದೇಶ ವ್ಯವಹಾರಗಳ ನಿಯಮ ಉಲ್ಲಂಘಿಸಿ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಈಗಾಗಲೇ ಜಗತ್ ರಕ್ಷಕನ್ ಅವರ 89 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. ಈಗ 908 ಕೋಟಿ ರೂ. ದಂಡ ವಿಧಿಸಲಾಗಿದೆ. ಫೆಮಾ ನಿಯಮ ಉಲ್ಲಂಘನೆ ಬಗ್ಗೆ ತನಿಖೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಇಲ್ಲದೇ ಸಿಂಗಾಪುರ ಮೂಲದ ಸಿಲ್ವರ್ ಪ್ಯಾಕ್ ಇಂಟರ್ ನ್ಯಾಷನಲ್ ಪ್ರವೇಟ್ ಲಿಮಿಟೆಡ್ ಕಂಪನಿಯಲ್ಲಿ ಜಗತ್ ರಕ್ಷನ್ 70 ಲಕ್ಷ ಷೇರುಗಳು ಮತ್ತು ಅವರ ಪುತ್ರ ಸಂದೀಪ್ ಆನಂದ್ 20 ಲಕ್ಷ ಷೇರುಗಳನ್ನು ಹೊಂದಿದ್ದಾರೆ.
ಇಡಿ ದಾಳಿ ವೇಳೆ ಮನೆಯಲ್ಲಿ 20 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದು ಮತ್ತು 5 ಕೋಟಿ ರೂ. ನಗದು ಕಚೇರಿಯಲ್ಲಿ ಲಭಿಸಿತ್ತು.