ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ರೇ 2ನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದೆ.
ವಿಡಿಯೋದಲ್ಲಿ ಕಾಣಿಸಿದ ಪುರುಷನ ಅಂಗಾಂಗಳೊಂದಿಗೆ ಪ್ರಜ್ವಲ್ ರೇವಣ್ಣ ಅಂಗಗಳನ್ನು ಹೋಲಿಕೆ ಮಾಡಲು ಅಧಿಕಾರಿಗಳ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್‍ನ ಅಹಮದಾಬಾದ್‍ನ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ವಿದೇಶಿ ತಜ್ಞರ ನೆರವು ಪಡೆದುಕೊಳ್ಳಲು ಎಸ್‍ಐಟಿ ತಂಡ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಎಸ್‍ಐಟಿ ಅಧಿಕಾರಿಗಳು ಆರೋಪಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ. ಅಶ್ಲೀಲ ವಿಡಿಯೋಗಳಲ್ಲಿನ ಮುಖ ಮರೆ ಮಾಚಿಕೊಂಡಿರುವ ವ್ಯಕ್ತಿಯ ಪತ್ತೆಗೆ ಅಂಗಾಂಗ ಪರೀಕ್ಷೆಗೆ ಎಸ್‍ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ.
ನಾಲ್ಕು ಜನ ವೈದ್ಯರ ತಂಡ ಐದು ಗಂಟೆಗಳ ಕಾಲ ಪ್ರಜ್ವಲ್‍ಗೆ ವೈದ್ಯಕೀಯ ಪರಿಕ್ಷೆಯನ್ನು ನಡೆಸಿದ್ದಾರೆ. ಈ ವೇಳೆ ಎಫ್‍ಎಸ್‍ಎಲ್ ಅಧಿಕಾರಿಗಳ ತಂಡವು ಭಾಗಿಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತಹ ಎಲ್ಲಾ ಟೆಸ್ಟ್‌ಗಳನ್ನು ವೈದ್ಯರ ತಂಡ ನಡೆಸಿದೆ. ಈ ಬಗ್ಗೆ ಎಸ್‍ಐಟಿ ತಂಡಕ್ಕೆ ವೈದ್ಯಕೀಯ ವರದಿಯನ್ನು ವೈದ್ಯರ ತಂಡ ನೀಡಲಿದೆ.