ಬೆಂಗಳೂರು: ಪೋಲೀಸರ ಕಾಟ ತಡೆಯಲಾಗದೆ ಯುವಕನೊಬ್ಬ ಪೋಲೀಸರ ವಿರುದ್ದ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ನಗರದ ಅಶೋಕ್ ಪುರಂನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಕೀರ್ತಿ(̄25) ಎಂದು ತಿಳಿದು ಬಂದಿದ್ದು, ಈತ ನಗರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ ಪಾರ್ಕರ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಗೆ ಬಂದ ಕಾರ್ ಈತ ಪಾರ್ಕಿಂಗ್ ಮಾಡಿದರೆ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇನೊಬ್ಬ ಕಾರ್ ವಾಪಾಸ್ ಮಾಲೀಕರಿಗೆ ತಂದು ಕೊಡುತಿದ್ದ. ಆದರೆ ಮೊನ್ನೆ ಬಂದ ಕಾರ್ ವೊಂದರಲ್ಲಿ ಚಿನ್ನ ಕಳುವಾದ ಸಂಗತಿ ಕೇಳಿ ಬಂದಿದ್ದು, ಈ ಸಂಬಂಧ ಕಾರು ಮಾಲೀಕ ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆ ಸುಬ್ರಮಣ್ಯನಗರ ಪೊಲೀಸರು ಕೀರ್ತಿ ಹಾಗೂ ಮತ್ತೊರ್ವನನ್ನು ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು.
ವಿಚಾರಣೆ ವೇಳೆಯಲ್ಲಿ ಕೀರ್ತಿಗೆ ಪೊಲೀಸರು ಹಲ್ಲೆ ಮಾಡಿದ್ದು, ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ವಿಚಾರಣೆಗೆ ಮತ್ತೆ ಬರುವಂತೆ ಪೊಲೀಸರು ಕೀರ್ತಿಗೆ ಹೇಳಿ ಕಳುಹಿಸಿದರು. ಯಾವುದೇ ತಪ್ಪು ಮಾಡದೇ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಹಾಗೂ ಕುಟುಂಬದ ಭವಿಷ್ಯದ ಆತಂಕದಲ್ಲಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸುಬ್ರಹ್ಮಣ್ಯ ನಗರ ಪೊಲೀಸರೇ ನೇರ ಕಾರಣ ಎಂದು ಕೀರ್ತಿಯ ತಾಯಿ ಆರೋಪಿಸಿದ್ದು, ಕಾರು ಮಾಲೀಕ ಸುನೀಲ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.