ಪವರ್ ಸ್ಟಾರ್ ಪುನೀತ್ ರಾಜಕುಮಾರ್ ʼಯುವರತ್ನʼ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರು :  ಬಹುನೀರಿಕ್ಷಿತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದ್ದು, ಸಿನಿಮಾ ರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ನಟಸಾರ್ವಭೌಮ’ ಚಿತ್ರದ ಬಳಿಕ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇಂದು ಮಧ್ಯಾಹ್ನ ಯುವರತ್ನ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದ್ದು, ಟ್ರೇಲರ್ ನ ಮೊದಲ ಭಾಗದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಮಿಂಚಿರುವ ಅಪ್ಪು ” ಮುಂದೆ ಕುಳಿತರೆ ಬೋರ್ಡ್‌ ಕಾಣುತ್ತೇ, ಹಿಂದೆ ಕುಳಿತರೇ ಇಡೀ ಜಗತ್ತೆ ಕಾಣುತ್ತದೆ ಎಂದು ಪಂಚಿಂಗ್ ಡೈಲಾಗ್ ಮೂಲಕ ಪವರ್‌ ಸ್ಟಾರ್‌ ಯುವಜನರನ್ನು ಆಕರ್ಷಿಸಿದ್ದಾರೆ.  ಮುಂದುವರೆದ ಭಾಗದಲ್ಲಿ ಪೊಲೀಸ್ ವೇಶದಲ್ಲಿ ಖಡಕ್ ಸ್ಟೈಲ್ ನಲ್ಲಿ ಕಾಣಿಕೊಂಡಿರುವ ನಟಸಾರ್ವಭೌಮನಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಾಲ್ಕು ವರ್ಷಗಳ ನಂತರದಲ್ಲಿ ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿರುವ ಯುವರತ್ನ ಸಿನಿಮಾ ಟೀಸರ್​ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್​ ವಿಲನ್‌ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕೂತುಹಲ ಮತ್ತಷ್ಟು ಹೆಚ್ಚಿಸಿದೆ.

ಪ್ರಸ್ತುತ ಶೈಕ್ಷಣಿಕ ರಂಗದಲ್ಲಿ ಕಾರ್ಪೊರೇಟ್‌ ಸಂಸ್ಕೃತಿ ಹೆಚ್ಚುತ್ತಿದೆ. ಇದರಿಂದ ಶಿಕ್ಷಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳ ಬದುಕು ಸಂಕಷ್ಟದ ಸಿಲುಕಿ ಒದ್ದಾಡುತ್ತಿದೆ. ಇದರ ನಡುವೆ ಸಿನಿಮಾದಲ್ಲಿ ಡ್ರಗ್​ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಸೂಕ್ಷಮವಾಗಿ ಗಮನಿಸಿದರೆ ಕಾಣುತ್ತದೆ. ಇದರೆಲ್ಲದರ ಸುತ್ತವೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ.

‌ಟಾಲಿವುಡ್‌ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದ ಸಯೇಷಾ ಸೈಗಲ್‌ ಅವರು, ಪುನೀತ್‌ಗೆ ಜೋಡಿಯಾಗಿದ್ದಾರೆ. ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ. ಧನಂಜಯ್​ ಹಾಗೂ ಪ್ರಕಾಶ್​ ರಾಜ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಏಪ್ರಿಲ್​ 1ರಂದು ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *