ಪದವಿ- ಸ್ನಾತ್ತಕೋತ್ತರ ಶುಲ್ಕ ಹೆಚ್ಚಳದ ಬರಸಿಡಿಲು-ವಿದ್ಯಾಥರ್ಿಗಳ ತೀವ್ರ ಪ್ರತಿಭಟನೆಗೆ ಮಣಿದ ವಿ.ವಿ.ಆಡಳಿತ

ಬಳ್ಳಾರಿಯ `ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ ವ್ಯಾಪ್ತಿಯಲ್ಲಿರುವ ಎರಡು ಜಿಲ್ಲೆಗಳ ಹತ್ತು ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾಥರ್ಿಗಳು ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾಥರ್ಿಗಳಿಗೆ ದಿಢೀರನೇ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಈ ವಿದ್ಯಾಥರ್ಿಗಳಿಗೆ ಬರಸಿಡಿಲು ಬಡಿದಂತಾಗಿತ್ತು.

10257850_645298678840655_2851958788138675373_n
ರಾಜ್ಯದಲ್ಲಿರುವ ಹತ್ತಾರು ವಿಶ್ವವಿದ್ಯಾಲಯಗಳಲ್ಲಿ ಬಳ್ಳಾರಿ ವಿ.ವಿ.ಯೂ ಒಂದು. ರಾಜ್ಯದಲಿರುವ ಯಾವುದೇ ವಿಶ್ವ ವಿದ್ಯಾಲಯವು ಓಬಿಸಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾಥರ್ಿಗಳಿಗೆ ದಿಢೀರನೆ ಯಾವುದೇ ತರಹದ ಶುಲ್ಕಗಳನ್ನು ಏರಿಕೆ ಮಾಡಿರುವುದಿಲ್ಲ. ಹೈದ್ರಾಬಾದ್ ಕನರ್ಾಟಕ ವ್ಯಾಪ್ತಿಯಲ್ಲಿ ಬರುವ ವಿಶ್ವ ವಿದ್ಯಾಲಯವು ಈ ಎರಡು ಜಿಲ್ಲೆಗಳ ವಿದ್ಯಾಥರ್ಿಗಳಿಗೆ ಕಲಿಯಲು ಪೂರಕ ವಾತಾವರಣ ಕಲ್ಪಿಸುವಂತಹ ಆಶಾದಾಯಕ ಪರಿಸ್ಥಿತಿಯನ್ನು ನಿಮರ್ಿಸುವ ಬದಲಾಗಿ ವಿದ್ಯಾಥರ್ಿಗಳ ಹಿತಾಸಕ್ತಿಯನ್ನು ಕಡೆಗಣಿಸಿ ಶುಲ್ಕ ಏರಿಕೆ ಮೂಲಕ ಉನ್ನತ ಶಿಕ್ಷಣವನ್ನು ಮಾರಾಟಕ್ಕಿಟ್ಟಿರುವುದು ಅತ್ಯಂತ ಖಂಡನೀಯ.
ವಿಶ್ವ ವಿದ್ಯಾಲಯವು ಮಾಚರ್್ ಕೊನೆಯ ವಾರದಲ್ಲಿ ವಿ.ವಿ. ವ್ಯಾಪ್ತಿಯ (ಎಸ್ಸಿ,ಎಸ್ಟಿ ಮತ್ತು ಓಬಿಸಿ) ಎಲ್ಲಾ ವಿದ್ಯಾಥರ್ಿಗಳ ಎಲ್ಲ ವಿಭಾಗಗಳಿಗೂ  ದಿಢೀರನೆ ಪರೀಕ್ಷಾ ಶುಲ್ಕವನ್ನು ಮೊದಲಿದ್ದ ರೂ.110 ದಿಂದ 700 ಮತ್ತು 850 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಎಸ್ಎಫ್ಐ ಸಂಘಟನೆಯು ಏಪ್ರಿಲ್ 5 ಮತ್ತು 7 ರಂದು ಸಾವಿರಾರು ವಿದ್ಯಾಥರ್ಿಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡಿರುವುದಕ್ಕೆ ಆದೇಶ ಪರೀಷ್ಕರಣೆಯ ನಾಟಕ ಮಾಡಿ ಎಸ್ಸಿ-ಎಸ್ಟಿ ವಿದ್ಯಾಥರ್ಿಗಳಿಗೆ ಮಾತ್ರ ಮೊದಲಿನಂತೆ ಯಥಾಸ್ಥಿತಿ ಕಾಪಾಡಿಕೊಂಡು ಉಳಿದ ವಿದ್ಯಾಥರ್ಿಗಳಿಗೆ 700 ರಿಂದ 850 ರೂ. ಆದೇಶವನ್ನೇ ಮುಂದುವರೆಸಿತು.
ಎಸ್ಸಿ-ಎಸ್ಟಿ ವಿಭಾಗದ ವಿದ್ಯಾಥರ್ಿಗಳಿಗೆ ಶುಲ್ಕ ಏರಿಕೆ ಹಿಂದೆ ಪಡೆದದ್ದು ಸ್ವಾಗತಾರ್ಹವಾದರೂ  ಇತರ ಹಿಂದುಳಿದ ವಿದ್ಯಾಥರ್ಿಗಳಿಗೆ ಶುಲ್ಕ ಹೆಚ್ಚಳವನ್ನು ವಾಪಸ್ ಪಡೆಯದಿರುವ ಕ್ರಮ ಒಪ್ಪುವಂತಿರಲಿಲ್ಲ. ನಂತರ ವಿ.ವಿ. ಕುಲಪತಿ ಎಸ್.ಆರ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ  10 ರೂ. ಶುಲ್ಕ ಕಡಿಮೆಗೊಳಿಸಲಾಗಿದೆ ಎಂದು ಹೇಳಿಕೆ  ನೀಡುವುದರೊಂದಿಗೆ  ವಿದ್ಯಾಥರ್ಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವಂತಹ ಬೇಜವಾಬ್ದಾರಿ ತೋರಿದರು.
ಏರಿಕೆ ಮಾಡಿರುವ ಪರೀಕ್ಷಾ ಶುಲ್ಕಗಳನ್ನು ತಕ್ಷಣ ಕಡಿತಗೊಳಿಸಿ ಮೊದಲಿನಂತೆ ಯಥಾ ಸ್ಥಿತಿ ಕಾಪಾಡಬೇಕು. ಒಬಿಸಿ ವಿದ್ಯಾಥರ್ಿಗಳ ಶುಲ್ಕ ವಿನಾಯ್ತಿ ಹಣ ಕಟ್ಟಲು ಹೊರಡಿಸಿದ್ದ ಆದೇಶವನ್ನು ವಾಪಾಸ್ ಪಡೆಯಬೇಕು. ಈಗಾಗಲೇ ಶುಲ್ಕಗಳನ್ನು ಪಾವತಿ ಮಾಡಿರುವ ವಿದ್ಯಾಥರ್ಿಗಳಿಗೆ ಅವರ ಹಣವನ್ನು ಮರುಪಾವತಿ ಮಾಡಬೇಕು. ದಂಡ ಶುಲ್ಕವಿಲ್ಲದೇ  ಪರೀಕ್ಷಾ ಶುಲ್ಕಗಳನ್ನು ಪಾವತಿಸಲು ದಿನಾಂಕ ವಿಸ್ತರಿಸಬೇಕು. ವಿ.ವಿ.ಯ ಎಲ್ಲಾ ಸಮಸ್ಯೆಗಳ ಕುರಿತು ಚಚರ್ಿಸಲು ವಿದ್ಯಾಥರ್ಿ ಮುಖಂಡರನ್ನೊಳಗೊಂಡ ಸಭೆಯನ್ನು ಉಪ ಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆಸಬೇಕು ಮುಂತಾದ ಬೇಡಿಕೆಗಳನ್ನು ಇಟ್ಟು ಬಳ್ಳಾರಿ-ಕೊಪ್ಪಳ ಜಿಲ್ಲಾ ಸಮಿತಿಗಳು ಚಳುವಳಿ ನಡೆಸಲು ನಿರ್ಧರಿಸಿದವು.
ಮಣಿದ ವಿ.ವಿ.- ಪರೀಕ್ಷಾ ಶುಲ್ಕ ಕಡಿತ
ಬಳ್ಳಾರಿ ನಗರದಲ್ಲಿ ಎಪ್ರಿಲ್ 23, 2014 ರಂದು  ಎಸ್ಎಫ್ಐ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನೂರಾರು ವಿದ್ಯಾಥರ್ಿಗಳು ವಿಜಯನಗರ ವಿ.ವಿ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ವಿ.ವಿ. ಉಪಕುಲಪತಿಗಳಾದ ಶ್ರೀ ಮಂಜುನಾಥ ಹೊಸಮನಿ ಹಾಗು ಕುಲ ಸಚಿವರು ಶುಲ್ಕ ಕಡಿತಗೊಳಿಸುವುದಾಗಿ ಘೋಷಿಸಿದರು.
`ವಿಜಯೋತ್ಸವ’
ಎಸ್ಎಫ್ಐ ನೇತೃತ್ವದಲ್ಲಿ ನಡೆದ ವಿದ್ಯಾಥರ್ಿಗಳ ಪ್ರತಿಭಟನೆಗೆ ಮಣಿದ ವಿ.ವಿ. ಆಡಳಿತದ ಪರವಾಗಿ ಏರಿಕೆ ಮಾಡಿರುವ ಪರೀಕ್ಷಾ ಶುಲ್ಕವನ್ನು ರೂ 850 ರಿಂದ ರೂ. 300ಕ್ಕೆ ಇಳಿಕೆ ಮಾಡುವುದೆಂದು ಹಾಗೂ ಈಗಾಗಲೇ ರೂ.850 ಶುಲ್ಕ ಕಟ್ಟಿರುವ ವಿದ್ಯಾಥರ್ಿಗಳಿಗೆ ಹಣ ಮರುಪಾವತಿ ಮಾಡಲಾಗುವುದೆಂದು ಉಪ ಕುಲಪತಿಗಳು ಘೋಷಿಸಿದರು. ಸ್ನಾತಕೋತ್ತರ ವಿದ್ಯಾಥರ್ಿಗಳಿಂದ ಭೋಧನಾ ಹಾಗೂ ಇತರೆ ಶುಲ್ಕಗಳನ್ನು ಕಟ್ಟಲು ಮಾಡಿದ್ದ ಆದೇಶವನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದರು. ಇದು ವಿದ್ಯಾಥರ್ಿಗಳ ಹೋರಾಟಕ್ಕೆ ಸಿಕ್ಕ ಜಯವೆಂದು  ಎಸ್ಎಫ್ಐ ಕಾರ್ಯಕರ್ತರು ನಗರದ ರಾಯಲ್ ಸರ್ಕಲ್ನಲ್ಲಿ ವಿಜಯೋತ್ಸವ ಆಚರಿಸಿದರು.
ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾದ ಹುಳ್ಳಿ ಉಮೇಶ್,     ರಾಜ್ಯಾಧ್ಯಕ್ಷರಾದ ಅಂಬರೀಶ್.ವಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಪೂಜಾರ್,    ಜಿಲ್ಲಾಧ್ಯಕ್ಷರು-ಕೊಪ್ಪಳ    ಅಮರೇಶ್ ಕಡಗದ್,    ಕಾರ್ಯದಶರ್ಿ ಬಾಳಪ್ಪ ಹುಲಿ ಹೈದರ್,     ಪರಶುರಾಮ್ ರಾಠೋಡ್,      ಗ್ಯಾನೇಶ್ ಕಡಗದ್   ಬಳ್ಳಾರಿ ಜಿಲ್ಲಾ ಕಾರ್ಯದಶರ್ಿ ರಾಜೇಶ್, ಮುಖಂಡರಾದ ಪಂಪಾನಂದ, ದೊಡ್ಡ ಬಸವರಾಜ್, ಶರತ್ ಕುಮಾರ್, ವಿದ್ಯಾಥರ್ಿನಿಯರ ಉಪ ಸಮಿತಿಯ ಮುಖಂಡರಾದ ಮೇಘನ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0

Donate Janashakthi Media

Leave a Reply

Your email address will not be published. Required fields are marked *