ಪತ್ರಕರ್ತ ಕಪ್ಪನ್‌ಗೆ ದೆಹಲಿಯಲ್ಲಿ ಚಿಕಿತ್ಸೆ ಕೊಡಿಸಬಹುದೆ? ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: ಕೇರಳ ರಾಜ್ಯದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರಿಗೆ ಉತ್ತರ ಪ್ರದೇಶ ರಾಜ್ಯದ ಹೊರಗೆ ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಬಹುದೆ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಇಂದು ಕೇಳಿದೆ.

ಸಿದ್ದಿಕ್ ಕಪ್ಪನ್ ಅವರನ್ನು ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಸಾವನ್ನಪ್ಪಿದ್ದ ಹತ್ರಾಸ್ ಗೆ ಭೇಟಿ ನೀಡುವ ಮಾರ್ಗದ ಮಧ್ಯೆ ಉತ್ತರ ಪ್ರದೇಶ ಪೋಲೀಸರು ಬಂಧಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠವು ರಾಜ್ಯ ಸರಕಾರ ಸೂಚನೆಗಳು ನೀಡಬೇಕೆಂದು ಹೇಳಿದೆ.

ಇದನ್ನು ಓದಿ: ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎ ಎಸ್ ಬೋಪಣ್ಣ ಅವರನ್ನೂ ಒಳಗೊಂಡ ನ್ಯಾಯಪೀಠವು ಈ ಸಂದರ್ಭದಲ್ಲಿ ಕಪ್ಪನ್‌ಗೆ ಉತ್ತಮ ಆರೋಗ್ಯವನ್ನು ಸುಧಾರಿಸಲು ಬೇಕಾಗ ಸೌಲಭ್ಯಗಳನ್ನು ತುಂಬಾ ಕಡಿಮೆ ಇರುವುದರಿಂದ ಕೂಡಲೇ ಅವರನ್ನು ದೆಹಲಿಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಅನುಮತಿಸಬಹುದೆ ಎಂದು ಕೇಳಿದೆ.

ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ಮತ್ತು ಕಪ್ಪನ್ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೀಡುವ ಸಲಹೆಗಳ ಮೇರೆಗೆ ರಾಜ್ಯ ಸರ್ಕಾರಕ್ಕೆ ಸೂಚನೆಗಳನ್ನು ಕೇಳಿದೆ.

ಸರ್ಕಾರದ ಪರ ಹಾಜರಾದ ತುಷಾರ್‌ ಮೆಹ್ತಾ, ಇದೇ ರೀತಿಯ ಹಲವಾರು ಆರೋಪಿಗಳು ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕಪ್ಪನ್ ಅವರಿಗೆ ವಿಶೇಷ ಚಿಕಿತ್ಸೆ ನೀಡಬಾರದು ಎಂಬ ಸಲಹೆಯನ್ನು ತೀವ್ರವಾಗಿ ವಿರೋಧಿಸಿದರು. ಬಹು ಅಂಗಾಂಗ ವೈಫಲ್ಯದ ಜನರನ್ನು ಮಥುರಾದ ಜೈಲು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಇದನ್ನು ಓದಿ: ಮತ ಎಣಿಕೆ ದಿನ ವಿಜಯೋತ್ಸವಕ್ಕೆ ಕಡಿವಾಣ: ಚುನಾವಣಾ ಆಯೋಗ

ಕಳೆದ ವರ್ಷ ನವೆಂಬರ್ 16 ರಂದು ಪತ್ರಕರ್ತನ ಬಂಧನವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾಗಿದ್ದು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ಕು ಜನರ ವಿರುದ್ಧ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹತ್ರಾಸ್ ನಲ್ಲಿ 2020 ರ ಸೆಪ್ಟೆಂಬರ್ 14 ರಂದು ಸಾಮೂಹಿಕ ಅತ್ಯಾಚಾರ ನಂತರ ದಲಿತ ಯುವತಿ ಸಾವನ್ನಪ್ಪಿದ್ದರು. ಈ ಬಗ್ಗೆ ಹತ್ರಾಸ್ ಗೆ ತೆರಳುವ ಮಾರ್ಗದಲ್ಲಿ ಕಪ್ಪನ್  ಅವರನ್ನು ಪೋಲೀಸರು ಬಂಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *