ಪಕ್ಷದ ಧ್ವಜ, ಚಿಹ್ನೆ ಬಿಡುಗಡೆ ಮಾಡಿದ ತಮಿಳು ನಟ ವಿಜಯ್!

ತಮಿಳು ನಟ ವಿಜಯ್ ಗುರುವಾರ ತಮ್ಮ ರಾಜಕೀಯ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಿದ್ದಾರೆ. ೀ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ವಿಜಯ್ ಸಿದ್ಧತೆ ಆರಂಭಿಸಿದ್ದಾರೆ.

ಫೆಬ್ರವರಿಯಲ್ಲಿ ರಾಜಕೀಯ ಎಂಟ್ರಿ ಕುರಿತು ಘೋಷಿಸುವುದರ ಜೊತೆಗೆ ‘ತಮಿಳಿಗ ವೆಟ್ರಿ ಕಳಗಂ’ (TVK Party) ಎಂದು ಪಕ್ಷದ ಹೆಸರನ್ನು ವಿಜಯ್ ತಿಳಿಸಿದ್ದರು. ಈ ಬೆನ್ನಲ್ಲೇ ತಮ್ಮ ಪಕ್ಷದ ಬಾವುಟ ಮತ್ತು ಚಿಹ್ನೆಯನ್ನು ಇಂದು ಬಿಡುಗಡೆ ಮಾಡಿದ್ದಾರೆ.

2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ವಿಜಯ್ ಈ ಹಿಂದೆ ಹೇಳಿದ್ದರು. ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ್ ಯಾವುದೇ ಮೈತ್ರಿ ಅಥವಾ ಪಕ್ಷದ ಪರ ಅವರು ನಿಲ್ಲಲಿಲ್ಲ.

Donate Janashakthi Media

Leave a Reply

Your email address will not be published. Required fields are marked *