ನೆಲಕ್ಕುರಳಿದ ಮರದಲ್ಲಿತ್ತು ನೂರಾರು ಪಕ್ಷಿಗಳು

ಕೇರಳ: ಮರ ನೆಲಕ್ಕುರುಳಿಸಿದರೂ ಪಕ್ಷಿಗಳು ಹಾರಿಹೋಗದೆ ಮರದಲ್ಲೇ ಪ್ರಾಣ ತ್ಯಜಿಸಿರುವ ಘಟನೆ ಕೇರಳದ  ಮಲಪ್ಪುರಂ ಜಿಲ್ಲೆಯ ರಂದಥನಿ ಗ್ರಾಮದಲ್ಲಿ ಸಂಭವಿಸಿದೆ . ಸೋಷಿಯಲ್‌ ಮೀಡಿಯದಲ್ಲಿ ವೈರಲ್‌ ಆಗಿರುವ ಈ ವೀಡಿಯೋ ಸಾವಿರಾರು ನೋಡುಗರ ಮನಕಲುಕಿದೆ.

ರಂದಥನಿ ಗ್ರಾಮದಲ್ಲಿರುವ ಈ ಮರವು ರಾಷ್ಟ್ರೀಯ ಹೆದ್ದಾರಿ  66ರ ಬಳಿ ಇದ್ದು, ನೂರಾರು ಪಕ್ಷಿಗಳು ಈ ಮರದಲ್ಲಿ ಗೂಡು ಕಟ್ಟಿಕೊಂಡಿದ್ದವು. ಜನರ ಗುಂಪೊಂದು ಬಂದು ಜೆಸಿಬಿಯಿಂದ ಮರ ಕಡಿದು ನೆಲಕ್ಕುರುಳಿಸಿದರು, ಮರ ಬಿಟ್ಟು ಹಾರದೇ ಪ್ರತಿಭಟಿಸಿದ  ಪಕ್ಷಿಗಳು ಮರದ ಕೆಳಗೆ ಸಿಲುಕಿ ಪ್ರಾಣ ಕಳೆದುಕೊಂಡ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಘಟನೆಯು ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ನಡೆದಿದೆಯೆಂದು ಹೇಳಲಾಗಿದ್ದು,  ಐಎಫ್‌ಎಸ್‌ ಅಧಿಕಾರಿ  ಪ್ರವೀಣ್‌ ಕಸ್ವಾನ್‌ ತಮ್ಮ ಟ್ವಟ್ಟರ್‌ ಅಕೌಂಟ್‌ನಲ್ಲಿ ಈ ವೀಡಿಯೋ ಹಂಚಿಕೋಡಿದ್ದು, “Everybody need a house. How cruel we can become” ಎಂದು ಟೈಟಲ್‌ ಕಟ್ಟು ಶೇರ್‌ ಮಾಡಿದ್ದರು. ಈ ವೀಡಿಯೋ 8.45 ಲಕ್ಷಕ್ಕೂ ಹೆಚ್ಚು ವೀವ್‌ ಗಳನ್ನು ಪಡೆದುಕೊಂಡಿದ್ದು, ಜನರ ಅಕ್ರೋಶಕ್ಕೆ ಕಾರಣವಾಗಿದೆ.

ಪ್ರತೀ ವರ್ಷವು ಈ ಪಕ್ಷಿಗಳು ಇದೇ ಮರದಲ್ಲಿ ಗೂಡು ಕಟ್ಟುತ್ತಿದ್ದು, ಇಲ್ಲೇ ಮರಿ ಇಡುತ್ತಿದ್ದವು. ಅಚಾನಕ್ಕಾಗಿ ಮರ ಕೆಡುವಿದ್ದರಿಂದ ಈ ವರ್ಷವು ಗೂಡು ಕಟ್ಟಿದ್ದ ಪಕ್ಷಿಗಳು ಮರಿಗಳನ್ನು ಬಿಟ್ಟು ಹಾರಲಾಗದೆ ಮರದ ಕೆಳಗೆ ಸಿಲುಕಿ ಪ್ರಾಣ ಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಕೆಲವರು ಕಮೆಂಟ್‌ ಮಾಡಿದ್ದು, “ಇಂತಹ ಚಟುವಟಿಕೆಗಳನ್ನು ನಿಲ್ಲಿಸಲು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಬೇಕು”, “ಕೇರಳದಲ್ಲಿ ಎಲ್ಲೋ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಮರ ಕಡಿಯಲಾಗಿದೆ”, “ಅವುಗಳ ಮನೆಯನ್ನು ಈ ರೀತಿಯಲ್ಲಿ ನಾಶಮಾಡಲು ನಾವು ಎಷ್ಟು ಹೃದಯಹೀನರಾಗಿದ್ದೇವೆ”, ಈ ರೀತಿಯ ಅನೇಕ ಕಮೆಂಟ್ ಗಳು ಟ್ವಿಟ್ಟರ್‌ ನಲ್ಲಿ ಕಂಡು ಬಂದಿವೆ.

Donate Janashakthi Media

Leave a Reply

Your email address will not be published. Required fields are marked *