ಬೆಂಗಳೂರಿನಲ್ಲಿ ನಾಯಿಗಳ ಕಾಟ ಒಂದು ಕಡೆಯಾದರೆ, ನಾಯಿಗಳ ಹೆಸರಿನಲ್ಲೂ ಭ್ರಷ್ಟಾಚಾರ ಮತ್ತೊಂದು ಕಡೆ. ಇದರಿಂದ ಸಾರ್ವಜನಿಕರು ಯಾರನ್ನು ದೋಷಿಸಬೇಕು ಅಂತ ಗೊತ್ತಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಗೆ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಇಲ್ಲೂ ಭ್ರಷ್ಟಾಚಾರಕ್ಕೆ ಕೈ ಹಾಕಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಬೆಂಗಳೂರಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಕರೆದ ಟೆಂಡರ್ ನಲ್ಲೂ ಭ್ರಷ್ಟಾಚಾರ ನಡೆದಿದೆ ಎಂದಯ ಪ್ರಾಣಿ ದಯಾ ಸಂಘಗಳು ಆರೋಪಿಸಿವೆ.
ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ 9 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದ್ದು, ಗ್ರೀನ್ ಸಿಗ್ನಲ್ ಕೂಡ ನೀಡಿದೆ.
ಬೆಂಗಳೂರಿನಲ್ಲಿ ಸುಮಾರು 45 ಸಾವಿರ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಿದ್ದು, ಪ್ರತಿ ನಾಯಿಗೆ 2000 ರೂ. ನಿಗದಿಪಡಿಸಲಾಗಿದೆ.
ಆದರೆ ನಾಯಿಗಳಿಗೆ ಸಂತನ ಹರಣ ಚಿಕಿತ್ಸೆ ನೀಡುವ ಪರವಾನಗಿ ಪಡೆದ ಅಥವಾ ಯಾವುದೇ ಅನುಭವ ಹೊಂದದ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಎಬಿಸಿ ಪರವಾನಗಿ ಪಡೆಯದ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಕೊಲ್ಲಂ, ಎದನಾಕುಲಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಬಿಬಿಎಂಪಿ ಕೂಡ ಪರವಾನಗಿ ಪಡೆದ ಸ್ಥಳೀಯ ಸಂಸ್ಥೆಗಳಿಗೆ ಏಕೆ ಗುತ್ತಿಗೆ ನೀಡಬಾರದು ಎಂದು ಪ್ರಾಣಿದಯಾ ಸಂಘದ ಅರುಣ್ ಪ್ರಸಾದ್ ಆರೋಪಿಸಿದ್ದಾರೆ.
ಏಜೆನ್ಸಿಗಳಿಗೆ ಬಿಲ್ ವಿಚಾರದಲ್ಲೂ ಗೋಲ್ಮಾಲ್ ನಡೆಯುತ್ತಿದ್ದು, ಎನ್ ಜಿಒ- ಎಡಿ-ಜೆಸಿ ಮೂಲಕ ಏಜೆನ್ಸಿಗಳಿಗೆ ಬಿಲ್ ಮಾಡಲಾಗಿದೆ. ಆದರೆ ಬಿಲ್ ಜಿಲ್ಲಾ ಪಶುಪಾಲನಾ ಅದಿಕಾರಿಗೆ ಹೋಗಿ ಪರಿಶೀಲನೆ ಆಗಬೇಕಿದೆ. ಎಸ್ ಬಿಸಿಎ ಮೆಂಬರ್ ಸೆಕ್ರೆಟರಿ ಅಪ್ರೂವಲ್ ಮಾಡಬೇಕು. ಆದರೆ ಯಾವುದೇ ನಿಯಮ ಪಾಲನೆ ಆಗದೆ ಬೋಗಸ್ ಆಗಿದೆ ಎಂದು ಪ್ರಾಣಿದಯಾ ಸಂಘದ ಅರುಣ್ ಪ್ರಸಾದ್ ಆರೋಪಿಸಿದ್ದಾರೆ.
ಆದರೆ ಬಿಲ್ ಜಿಲ್ಲಾ ಪಶುಪಾಲನಾ ಅದಿಕಾರಿಗೆ ಹೋಗಿ ಪರಿಶೀಲನೆ ಆಗಬೇಕಿದೆ. ಎಸ್ ಬಿಸಿಎ ಮೆಂಬರ್ ಸೆಕ್ರೆಟರಿ ಅಪ್ರೂವಲ್ ಮಾಡಬೇಕು. ಆದರೆ ಯಾವುದೇ ನಿಯಮ ಪಾಲನೆ ಆಗದೆ ಬೋಗಸ್ ಆಗಿದೆ ಎಂದು ಪ್ರಾಣಿದಯಾ ಸಂಘದ ಅರುಣ್ ಪ್ರಸಾದ್ ಆರೋಪಿಸಿದ್ದಾರೆ.