ನಾಚಿಕೆಯಿಲ್ಲದೆ ಕೇಂದ್ರೀಯ ಸಂಸ್ಥೆಗಳ ದುರುಪಯೋಗ ನಡೆಯುತ್ತಿದೆ- ಸಿಪಿಐ(ಎಂ) ಪೊಲಿಟ್ ಬ್ಯುರೊ

ದೆಹಲಿ : ಕಸ್ಟಮ್ಸ್ ಅಧಿಕಾರಿಗಳು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍, ಮೂವರು ಇತರ ಮಂತ್ರಿಗಳು ಮತ್ತು ವಿಧಾನಸಭಾ ಅಧ್ಯಕ್ಷರನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ.

ಈ ಉದ್ದೇಶಕ್ಕೆ ಅವರು  ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ ಇರುವ ಒಬ್ಬ ಆರೋಪಿಯಿಂದ ಒಂದು ಅಫಿಡವಿಟ್‍ ನ್ನು ತೋರಿಸಿದ್ದಾರೆ. . ನಿಜಸಂಗತಿಯೆಂದರೆ ಈ ಹೇಳಿ ಬರೆಸಿದ ಹೇಳಿಕೆಯನ್ನು ಕೆಲವು ತಿಂಗಳ ಹಿಂದೆ ದಾಖಲು ಮಾಡಿಕೊಳ್ಳಲಾಗಿತ್ತು  ಮತ್ತು ಈಗ ಚುನಾವಣೆಗಳ  ಪ್ರಕಟಣೆಯ ನಂತರ ಸಲ್ಲಿಸಲಾಗಿದೆ ಎಂಬುದು ಈ ನಡೆಯ ಹಿಂದಿರುವ ರಾಜಕೀಯ ಆಟವನ್ನು ತೋರಿಸುತ್ತದೆ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಬಿಜೆಪಿ ಕೇಂದ್ರ ಸರಕಾರ ಮುಖ್ಯಮಂತ್ರಿಗಳು ಮತ್ತು ಎಲ್‍.ಡಿ.ಎಫ್‍. ಸರಕಾರದ ಹೆಸರುಗೆಡಿಸಲು ಕೇಂದ್ರೀಯ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಆದರೆ ಕೇರಳದ ಜನತೆ ಇದರ ಹಿಂದಿರುವ ರಾಜಕೀಯ ಕುಯುಕ್ತಿಗಳನ್ನು ಕಾಣುತ್ತಾರೆ ಮತ್ತು ಬಿಜೆಪಿ ಹಾಗೂ ಯುಡಿಎಫ್‍ ಅನುಸರಿಸುತ್ತಿರುವ ಹೊಲಸು ತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *