ನಾಟಕ ಬೆಂಗಳೂರು 20-21 13ನೇ ವರ್ಷದ ಸಂಭ್ರಮದ ಪ್ರಯುಕ್ತ ಕಳೆದ ತಿಂಗಳಿಂದ ನಾಟಕೋತ್ಸವ ನಡೆಯುತ್ತಿದೆ. ಮಾರ್ಚ್ 10 ರವರೆಗೆ ಅದು ನಡೆಯಲಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.
ರಂಗಭೂಮಿಯ ಅದ್ಭುತ ಪ್ರತಿಭೆ ನಯನಾ ಜೆ. ಸೂಡ ಅವರ ಪ್ರಮುಖ ನಾಯಕಿಯಾಗಿ ನಟಿಸಿರುವ ಗುಲಾಬಿ ಗ್ಯಾಂಗ್ – 2 ನಾಟಕವು ಮೊದಲ ಗುಲಾಬಿ ಗ್ಯಾಂಗ್ ನಂತಯೇ ಹಲವು ಕೂತಹಲ, ಮತ್ತು ಕ್ರೌರ್ಯತೆಗಳಿಗೆ ಅಂತ್ಯ ಹೇಳುವ ಕಾಲ ಬರಲಿದೆ ಎನ್ನುವ ಗಟ್ಟಿತನದ ಧ್ವನಿ ಮೊಳಗಿಸಲಿದೆ. ದೈಹಿಕವಾಗಿ, ಮಾನಸಿಕವಾಗಿ ಹೆಣ್ಣಿನ ಮೇಲೆ ನಡೆಸುತ್ತಿದ್ದ ದೌರ್ಜ್ಯದ ವಿರುದ್ಧ ಧ್ವನಿ ಎತ್ತಿ ಮಾತನಾಡದಂತಹ ಪರಿಸ್ಥಿತಿಯನ್ನು ಈ ಪುರುಷ ಪ್ರಧಾನ ವ್ಯವಸ್ಥೆ ನಿರ್ಮಿಸಿದೆ. ಈ ಸಂಕೋಲೆಯ ಕೋಟೆಯನ್ನು ದಾಟಿ ದಮನಿತರ ಗಟ್ಟಿ ಧ್ವನಿಯಾಗಿ ಮತ್ತೆ ಬರಲಿದೆ ಗುಲಾಬಿ ಗ್ಯಾಂಗ್ – 2
ಕೈ ಮುಗ್ದು ಬಾಯ್ಮಾತಲ್ಲಿ
ಹೇಳ್ತೀವಿ ಅಂದ್ರೆ ನೀವು
ಕೇಳಲ್ಲ ಅಂತೀರ..ಕೋಲಲ್ಲಿ ಮಾತಾಡ್ದ್ರೆ ಗೂಂಡಾಗಿರಿ
ಅಂತೀರ…. ಇದಕ್ಕೆ ಸರಿಯಾದ
ಉತ್ತ್ರಾನೆ ಸಿಗ್ತೀಲ್ವೇ…
ಉತ್ತರ 3 ನೇ ತಾರೀಖು ಸಿಗುತ್ತೆ….
ದೌರ್ಜನ್ಯ ಎಸಗುವ ಮನಸುಗಳಿಗೆ ಸಾಕಷ್ಟು ಪರಿಣಾಮಕಾರಿ ಬೀರಿದ್ದ ಗುಲಾಬಿ ಗ್ಯಾಂಗ್ ನಾಕಟ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಾಕಷ್ಟು ಮಹಿಳೆಯರು ಮತ್ತು ಯುವತಿಯರು ಈ ನಾಟಕಕ್ಕೆ ಮೆಚ್ಚುಗೆ ವ್ಯಕ್ತಿಪಡಿಸಿದ್ದರು. ಹಾಗೆಯೇ ಗುಲಾಬಿ ಗ್ಯಾಂಗ್ – 2 ನಾಟಕವೂ ಕೂಡು ಅಷ್ಟೇ ಕೂತುಹಲದಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ.
ರಂಗ ಪಯಣ ತಂಡದ ಪ್ರವೀಣ್ ಸೂಡಾ ರಚನೆ ಮತ್ತು ರಂಗರೂಪ/ಅನುವಾದ ಮಾಡಿರುವ, ರಾಜಗುರು ನಿರ್ದೇಶನದ ಗುಲಾಬಿ ಗ್ಯಾಂಗ್ -2 ಮಾರ್ಚ್ 03 ರಂದು ರವೀಂದ್ರ ಕಲಾಕ್ಷೇತ್ರ – ಸಂಸ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.