ದೇಶಪ್ರೇಮಿಗಳ ಮೆರವಣಿಗೆ ಯಶಸ್ವಿಗೊಳಿಸಿ : ವಾಸುದೇವರೆಡ್ಡಿ

ಮುಳಬಾಗಿಲು : ಮಾರ್ಚ್ 23 ರಂದು ಮುಳಬಾಗಿಲು ನಗರದಲ್ಲಿ ದೇಶಪ್ರೇಮಿಗಳಾದ ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ 90ನೇ ಹುತಾತ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಡಿವೈಎಫ್ಐ) ಗಳ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿ ಯುವಜನರ ದೇಶಪ್ರೇಮಿ ಮೆರವಣಿಗೆ ನಡೆಸಿ ಗಡಿ ಭವನದಲ್ಲಿ ” ಭಗತ್ ಸಿಂಗ್ ಕನಸಿನ ಭಾರತ ಮತ್ತು ಇಂದಿನ ವಿದ್ಯಾರ್ಥಿ ಯುವಜನ” ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಸಿದರು.

ಎಸ್ಎಫ್ಐ, ಡಿವೈಎಫ್ಐ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ ಭಗತ್ ಸಿಂಗ್ ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರನ್ನು ಓಡಿಸುವುದು ಮಾತ್ರವಲ್ಲ, ಬದಲಾಗಿ ಪೂರ್ಣ ಸ್ವಾತಂತ್ರ್ಯದ ಕಲ್ಪನೆಯನ್ನು ದೇಶಕ್ಕೆ ಮೊಟ್ಟಮೊದಲ ನೀಡಿದವರು, ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿ ಹೊಸ ವ್ಯವಸ್ಥೆಯನ್ನು ತರಬಲ್ಲ ಕ್ರಾಂತಿಯಿಂದಲೇ ಭಾರತದ ಹೊಸ ಹುಟ್ಟು ಸಾಧ್ಯ ಎಂದು ನಂಬಿದ್ದರು. ಅವರ ನಿಜವಾದ ಸ್ವಾತಂತ್ರ್ಯದ ಆಶಯವೆಂದರೆ ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ, ಎಲ್ಲರಿಗೂ ಆರೋಗ್ಯ, ಎಲ್ಲರಿಗೂ ನಿವೇಶನ, ಎಲ್ಲರೂ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡುವುದಾಗಿತ್ತು. ಅಲ್ಲದೆ ಬಡವ – ಬಲ್ಲಿದ, ಮೇಲು ಕೀಳೆಂಬ ಅಸಮಾನತೆಯ ಈ ಜಡ್ಡುಗಟ್ಟಿದ ಪುರಾತನ ಶೋಷಕ ವ್ಯವಸ್ಥೆಯನ್ನು ತೊಡೆದು ಹಾಕಿ ಸಮಾನತೆಯ ಸಮಾಜವಾದಿ ವ್ಯವಸ್ಥೆಯ ನಿರ್ಮಾಣದ ಕನಸಿನ ಭಾರತವನ್ನು ಕಂಡಿದ್ದರು. ಆದರೆ ಇಂದು ಭಗತ್ ಸಿಂಗ್ ಅವರ ಕನಸಿನ ಭಾರತ ಕೇವಲ ಕನಸಾಗೇ ಉಳಿದಿದೆ. ವಿದ್ಯಾರ್ಥಿಗಳಾದ ನಾವು-ನೀವು ಈ ಕನಸಿನ ಭಾರತವನ್ನು ನನಸಾಗಿಸುವ ಜವಾಬ್ದಾರಿಯನ್ನು ಹೋರಾಬೇಕಾಗಿದೆ.

ಮಾರ್ಚ್ 23ರಂದು ಅಪ್ಪಟ ದೇಶ ಪ್ರೇಮಿಗಳಾದ ಭಗತ್‌ಸಿಂಗ್, ರಾಜ್‌ಗುರು ಸುಖ್‌ದೇವ್ ಬ್ರಿಟಿಷರು ದೇಶ ಬಿಟ್ಟು ತೊಲಗಬೇಕೆಂದು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಇವರನ್ನು ನೆನೆಯುತ್ತಾ 90ನೇ ಹುತಾತ್ಮ ದಿನಾಚರಣೆಯನ್ನು ಮುಳಬಾಗಿಲು ನಗರದಲ್ಲಿ ವಿದ್ಯಾರ್ಥಿ ಯುವಜನರ ಮೆರವಣಿಗೆ ಮತ್ತು ಗಡಿನಾಡ ಭವನದಲ್ಲಿ ವಿದ್ಯಾರ್ಥಿಗಳಿಂದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.

ಸಭೆಯಲ್ಲಿ ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು ಕಾರ್ಯದರ್ಶಿ ಆನಂದ್, ಡಿವೈಎಫ್ಐ ಮುಖಂಡರು ಅಣ್ಣೇನಹಳ್ಳಿ ಟಿ.ವಿ. ಶ್ರೀನಿವಾಸ್ , ಎಂ.ಹೊಸಹಳ್ಳಿ ಗಂಗಾಧರ, ಬ್ಯಾಡರಹಳ್ಳಿ ವಿಜಯ್ ಕುಮಾರ್, ಹಾಗೂ ಎಸ್ಎಫ್ಐ ಡಿವೈಎಫ್ಐ ಕಾರ್ಯಕರ್ತರಿದ್ದರು.

Donate Janashakthi Media

Leave a Reply

Your email address will not be published. Required fields are marked *