ದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,786 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಇದೇ ಅವಧಿಯಲ್ಲಿ 1,005 ಮಂದಿ ಕೋವಿಡ್ನಿಂದ ಅಸುನೀಗಿದ್ದು, 61,588 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಮೂಲಕ ದೇಶದಾದ್ಯಂತ ಸೋಂಕಿತರ ಒಟ್ಟು ಸಂಖ್ಯೆ 3,04,11,634ಕ್ಕೆ ಏರಿದೆ. ಈವರೆಗೆ 2,94,88,918 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 3,99,459 ರಷ್ಟಾಗಿದೆ.
ದೇಶದಲ್ಲಿ ಸದ್ಯ 5,23,257 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 1.72 ರಷ್ಟಿದೆ.ದೇಶದಾದ್ಯಂತ ಈವರೆಗೆ 33,57,16,019 ಡೋಸ್ ಲಸಿಕೆ ವಿತರಿಸಲಾಗಿದೆ.