ದೇವಸ್ಥಾನದಲ್ಲಿ ಜೊತೆಯಲ್ಲಿ ಕುಳಿತಿದ್ದಕ್ಕೆ ದಲಿತ ಯುವಕನ ಹತ್ಯೆ

 

– ದೇವಸ್ಥಾನದಲ್ಲಿ ಸರಿಸಮಾವಾಗಿ ಕುಳಿತ್ತಿದ್ದಾನೆಂದು ಕೊಂದ ಮೇಲ್ಜಾತಿ ಯುವಕರು

 

 

ವಿಜಯಪುರ: ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಗಾಳ್ ಪಿ.ಹೆಚ್ ಗ್ರಾಮದಲ್ಲಿ  ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ತಮ್ಮ ಸಮನಾಗಿ ಕುಳಿತನೆಂಬ ಕಾರಣಕ್ಕೆ ಅನಿಲ್ ಇಂಗಳಗಿ ಎಂಬ ದಲಿತ ಯುವಕನನ್ನು  ಮಲ್ಲಿಕಾರ್ಜುನ ಅದೇ  ಅಲ್ಲಿಯ ಗ್ರಾಮದ ಸಿದ್ದು ಬಿರಾದಾರ್ ಹಾಗೂ ಸಂತೋಷ ಬಿರಾದಾರ್ ಎಂಬುವವರು ಕೊಲೆ ಮಾಡಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡಿರುವ ಎಸ್ ಸಿ ಸಮುದಾಯದ ನೂರಾರು ಜನರು ಸಿಂಧಗಿಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹತ್ಯೆಗೀಡಾದ ಎಸ್ಸಿ ಯುವಕನ ಶವವಿಟ್ಟು, ಪ್ರತಿಭಟನೆಯನ್ನು ನಡೆಸಿದ್ದಾರೆ.

ಇದೊಂದು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯ ಆಚರಣೆಯ ಅಕ್ಷಮ್ಯವಾಗಿದ್ದು ಹೇಯ ಮತ್ತು ಬರ್ಬರ ದುಷ್ಕೃತ್ಯವಾಗಿದೆ. ಇದು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಭಾರತದ ಸಂವಿಧಾನಾತ್ಮಕ ಕಾನೂನುಗಳು ಜಾರಿಯಲ್ಲಿಲ್ಲವೆಂಬ ಬಲಹೀನತೆಯನ್ನು ಮತ್ತೊಮ್ಮೆ ಎತ್ತಿ ತೋರಿದೆ. ಈ ಗ್ರಾಮದ ದಲಿತರಿಗೆ ಅಗತ್ಯ ರಕ್ಷಣೆಯನ್ನು ಒದಗಿಸಲು ಹಾಗೂ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆ ತಡೆ ಕಾಯ್ದೆಗಳನ್ನು ಆ ಪ್ರದೇಶದಲ್ಲಿ ವ್ಯಾಪಕವಾಗಿ ಜಾರಿಗೆ ತರಲು ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐಎಂ ನ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ರವರು ಒತ್ತಾಯಿಸಿದ್ದಾರೆ.

ದಲಿತರ ಮೇಲಿನ ಇಂತಹ ದೌರ್ಜನ್ಯ ಹಾಗೂ ಅಪರಾಧಗಳನ್ನು ತಡೆಯಲು ಮತ್ತು ಕಠಿಣ ಕ್ರಮವಹಿಸಲು ಪರಿಶಿಷ್ಠ ಜಾತಿ ಹಾಗೂ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಠು ಬಲಗೊಳಿಸಬೇಕಾಗಿದೆ. ತಕ್ಷಣವೇ ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಅವರ ಈ ದುಷ್ಕೃತ್ಯದ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು , ಕೂಡಲೇ ಕೊಲೆಗೀಡಾದ ಅನಿಲ್ ಇಂಗಳಗಿ ಕುಟುಂಬಕ್ಕೆ ಅಗತ್ಯ ಪರಿಹಾರಗಳನ್ನು ಘೋಷಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬಿಜಾಪುರ ಜಿಲ್ಲಾ ಮುಖಂಡರಾದ ಅಣ್ಣಾರಾಯ ಇಳಗೇರ ಆಗ್ರಹಿಸಿದ್ದಾರೆ.

ಅನಿಲ ಇಂಗಳಗಿ ಯವರ ಕೊಲೆ ಖಂಡನೀಯ. ಈ ಹಿಂದಿನಿಂದಲ್ಲೂ ದೌರ್ಜನ್ಯಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿವೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ, ದಲಿತರಿಗೆ ಸೂಕ್ತ ರಕ್ಷಣೆ ಕೊಡಬೇಕೆಂಬುದು ದಲಿತರ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿಯವರು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *