ದೆಹಲಿ, ಮುಂಬೈನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಐಸಿಎಸ್ ಮುಖಂಡ ದೆಹಲಿಯಲ್ಲಿ ಅರೆಸ್ಟ್!

ದೆಹಲಿ ಮತ್ತು ಮುಂಬೈನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.

ಪುಣೆ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಶಂಕಿತ ಐಸಿಸ್ ಉಗ್ರ ರಿಜ್ವಾನ್ ಅಬ್ದುಲ್ ಹಾಕಿ ಅಲಿ ಎಂಬಾತನನ್ನು ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ.

ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ರಿಜ್ವಾನ್ ಅಬ್ದುಲ್ ಅಲಿ ಬಂಧಿಸಲಾಗಿದ್ದು, ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಪುಣೆ ಐಸಿಸ್ ಇತರ ಸದಸ್ಯರೊಂದಿಗೆ ಸೇರಿ ದೆಹಲಿ ಮತ್ತು ಮುಂಬೈನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹಲವಾರು ಯೋಜನೆ ಮಾಡಿದ್ದ. ಇದಕ್ಕೂ ಮುನ್ನ ಹಲವಾರು ಸದಸ್ಯರನ್ನು ಈ ಹಿಂದೆ ಪುಣೆ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿತ್ತು.

Donate Janashakthi Media

Leave a Reply

Your email address will not be published. Required fields are marked *