ದೆಹಲಿಯ ಹೋರಾಟಕ್ಕೆ ಕೇರಳ ರೈತರ ಸಾಥ್

ತಿರುವನಂತಪರ, ಜ 11: ಕಳೆದ 47 ದಿನಗಳಿಂದ ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಈ ಹೋರಾಟದಲ್ಲಿ ಸಕ್ರಿಯವಾಗಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ರೈತರನ್ನು ಅಣಿನೆರೆಸಿವೆ. ಈ ಹೋರಾಟಕ್ಕೆ ಪೂರಕವಾಗಿ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂದ್ರಪ್ರದೇಶ ತೆಲಂಗಾಣಗಳಲ್ಲಿ ವ್ಯಾಪಕ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಈಗ ಕೇರಳದಿಂದ ಅಖಿಲ ಭಾರತ ಕಿಸಾನ್ ಸಭಾ AIKS ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ‌ ರೈತರು ದೆಹಲಿ ಹೋರಾಟದಲ್ಲಿ ಭಾಗವಹಿಸಲು ಹೊರಟಿದ್ದಾರೆ. ದೆಹಲಿಗೆ ಹೊರಟಿರುವ ರೈತರನ್ನು ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮಗಳು ಕೇರಳದಾದ್ಯಂತ ನಡೆಯುತ್ತಿವೆ.

ತಿರುವನಂತಪರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಹಿರಿಯ ಉಪಾಧ್ಯಕ್ಷರಾದ ಎಸ್.ರಾಮಚಂದ್ರನ್ ಪಿಳ್ಳೆಯವರು ದೆಹಲಿಗೆ ಹೊರಟ ವಾಹನಗಳಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಿಸಾನ್ ಸಭಾದ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಸಭಾ ಸದಸ್ಯರಾದ ಕೆ.ಕೆ.ರಾಘೇಶ್ ಮಾತನಾಡಿ, ಕೃಷಿ ಕಾಯ್ದೆ ರದ್ದಾಗುವವರೆಗೂ ನಾವು ವಾಪಸ್ ಬರುವುದಿಲ್ಲ. ದೆಹಲಿಯಲ್ಲಿ 47 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸರಕಾರದ ಗಮನಕ್ಕೆ ತಂದರೂ ಮೋದಿ ಸರಕಾರ ಕಿವಿಗೊಡುತ್ತಿಲ್ಲ. 108 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಮೋದಿ ಸರಕಾರ ಕೃಷಿ ಮತ್ತು ರೈತರನ್ನು ಬಲಿಪಡೆದ ಸರಕಾರವಾಗಿದೆ. ಈ ಸರಕಾರಕ್ಕೆ ಜನವರಿ 26 ರಂದು ರೈತರು ತಕ್ಕ ಪಾಠ ಕಲಿಸಲಿದ್ದಾರೆ. ಅದು ಐತಿಹಾಸಿಕ ದಿನವಾಗಿ ಮಾರ್ಪಾಡಾಗಲಿದೆ ಎಂದು ರಾಘೇಶ್ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಬಾಲಗೋಪಾಲ್ ಸೆರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *