ವಿಡಂಬಾರಿ
ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012
`ದನ ಕಾಯುವುದು’ ಮುಖ್ಯವೋ ಅಥವಾ ಹೊಟ್ಟೆಗೆ ಕೂಳಿಲ್ಲದೆ ಪೌಷ್ಠಿಕತೆಯ ಲವಲೇಶವೂ ದೂರಕದೆ ರಕ್ತ ಬತ್ತಿ, ಮಾಂಸ ಕರಗಿ, ನರನಾಡಿಗಳು ಸೆಣೆತು ಇಂದು ನಾವು ಕಾಣುತ್ತಿರುವ ಕಾಲ್ಪನಿಕ ಚಿತ್ರ ಬೇತಾಳದ ಹಾಗೆ ಎಲುಬಿನ ಗೂಡಾಗಿರುವ ಬಹು ಸಂಖ್ಯಾತ ದುಡಿಯುವ ಬಡವರ ಮಾನ, ಪ್ರಾಣ ಕಾಪಾಡುವುದು ಮುಖ್ಯವೊ ಎಂಬ ಪ್ರಶ್ನೆ ಇಂದು ಎದುರಾಗಿದೆ. ಕೆಲವರು ದನ ಕಾಯುವುದೇ ಪ್ರಾಮುಖ್ಯವೆಂದು ಹೇಳುತ್ತಿದ್ದಾರೆ. ಅದಕ್ಕೇ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದ್ದಾರೆ. ಹಲವರಿಗೆ ಮಾಂಸವೇ ಪೌಷ್ಠಿಕಾಹಾರ. ಹಾಲು, ಮೊಸರು, ಬೆಣ್ಣೆ, ತುಪ್ಪ, ಇವರ ಕೈಗೆ ಎಟುಕಲಾರದಷ್ಟು ಎತ್ತರಕ್ಕೆ ಜಿಗಿದಿದೆ. ಇವೆಲ್ಲವೂ ಉಳ್ಳವರಿಗೆ ಮಾತ್ರ ಎಂಬಂತಾಗಿಬಿಟ್ಟಿದೆ.
ಇನ್ನು ಕೆಲವರಿಗೆ ಹಸು ಎಮ್ಮೆಗಳ ಮಾಂಸದಿಂದ ಉತ್ಪತ್ತಿಯಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ತರಕಾರಿಗಳೇ ಪೌಷ್ಠಿಕಾಹಾರ, ಇವರು ಶುದ್ಧ ಶಾಖಾಹಾರಿಗಳು !ಆಹಾರಕ್ಕಾಗಿ ಹಿಂಸೆ ಇಂದಿನದ್ದಲ್ಲ. ತಲೆ ತಲಾಂತರದ್ದು ಒಂದು ಕಾಲದಲ್ಲಿ ಎಲ್ಲರೂ ಮಾಂಸ ತಿನ್ನುತ್ತಿದ್ದರೆಂಬುದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಆಧಾರ ಸಹಿತವಾದ ಈ ಕೆಳಗಿನ ಕೆಲವು ಉದಾಹರಣೆಗಳನ್ನು ಓದಿ.
ಭಾರತದಲ್ಲಿ ಒಂದು ಕಾಲದಲ್ಲಿ ಗೋಮಾಂಸ ತಿನ್ನದೆ ಯಾವ ಬ್ರಾಹ್ಮಣನೂ ಇರಲಿಲ್ಲ. (ವಿವೇಕಾನಂದರ ಸಮಗ್ರ ಲೇಖನಗಳು ಸಂಪುಟ 3, ಪುಟ 174.) ತಿಳುವಳಿಕೆ ಇಲ್ಲದ ಜನ ಸ್ಥಳೀಯ ಸಂಪ್ರದಾಯಗಳನ್ನು ನಮ್ಮ ಧರ್ಮದ ಮೂಲ ತತ್ವವೆಂದು ತಿಳಿಯುತ್ತಿರುವುದು ನಾವು ಮಾಡುತ್ತಿರುವ ಬಹಳ ದೊಡ್ಡ ತಪ್ಪು. ರಾಮ ಕೃಷ್ಣಾಶ್ರಮದವರು ಪ್ರಕಟಿಸಿದ ಸಮಗ್ರ ಲೇಖನಗಳು ಸ್ವಾಮಿ ವಿವೇಕಾನಂದ. ಸಂಪುಟ 3, ಪುಟ 173. ವೇದದಲ್ಲಿ ನಾವು ಓದುವುದೇನೆಂದರೆ ಒಬ್ಬ ಸನ್ಯಾಸಿ, ರಾಜ ಅಥವಾ ಮಹಾಪುರುಷ ಮನೆಗೆ ಬಂದರೆ ಅತ್ಯುತ್ತಮವಾದ ಎತ್ತನ್ನು ಕೊಲ್ಲುತ್ತಿದ್ದರು. ಅದೇ ಪುಸ್ತಕ ಪುಟ 174. ಬ್ರಾಹ್ಮಣ ಶ್ರಾದ್ಧದ ಸಮಯದಲ್ಲಿ ಕೊಟ್ಟ ಮಾಂಸ ತಿನ್ನದಿದ್ದರೆ ಅವನು ನರಕಕ್ಕೆ ಹೋಗುತ್ತಾನೆ. ವಶಿಷ್ಠ ಧರ್ಮ ಶಾಸ್ತ್ರ 11/34. ಮಗಳ ಮದುವೆಯ ಸಮಯದಲ್ಲಿ ಎತ್ತುಗಳನ್ನು ಹಸುಗಳನ್ನು ಕೊಲ್ಲುತ್ತಿದ್ದರು, ಋಗ್ವೇದ (10/85/13) ಇಂದ್ರನು ಹಸು, ಕರು, ಕುದುರೆ, ಮತ್ತು ಎಮ್ಮೆ ಮಾಂಸ ತಿನ್ನುತ್ತಿದ್ದ. (ಋಗ್ವೇದ 6/17/1) ಅತಿಥಿಗಳು ಆಗಮಿಸಿದಾಗ, ಪೂವರ್ಿಕರ ಶ್ರಾದ್ಧದ ಸಮಯದಲ್ಲಿ ಮತ್ತು ಮದುವೆಯ ಸಂದರ್ಭದಲ್ಲಿ ಹಸುವನ್ನು ಕೊಲ್ಲಬೇಕು. ಆಪಸ್ತಂಭಗ್ರಹ ಸೂತ್ರ. (1/3/10) ಈ ಎಲ್ಲಾ ದಾಖಲೆಗಳ ಹೊರತಾಗಿಯೂ ಇನ್ನಷ್ಟು ತಿಳಿದುಕೊಳ್ಳಬೇಕೆಂದಿದ್ದರೆ, ನವಕನರ್ಾಟಕ ಪಬ್ಲಿಕೇಷನ್ಸ್ದವರು 2004 ರಲ್ಲಿ ಪ್ರಕಟಿಸಿದ ಚರಿತ್ರೆಯ ವಿಕೃತೀಕರಣ ಭಾರತದ ಬಹುಮುಖೀ ಸಂಸ್ಕೃತಿಯ ಐಕ್ಯತೆಗೆ ಧಕ್ಕೆ ಎಂಬ ಪುಸ್ತಕವನ್ನು ಓದಿ.
ಯಾವುದು ಶ್ರೇಷ್ಠ ಯಾವುದು ಕನಿಷ್ಟ, ಯಾರದ್ದು ಉತ್ತಮ ಕುಲ ಯಾರದ್ದು ಕೀಳು ಕುಲ ಯಾವುದು ಧರ್ಮ ಯಾವುದು ಅಧರ್ಮ, ಯಾವುದು ಮಡಿ ಯಾವುದು ಮೈಲಿಗೆ ಈ ಪ್ರಶ್ನೆಗಳಿಗೆಲ್ಲ ಮಹಾನ್ ಮಾನವತಾವಾದಿ ವಿಚಾರವಾದಿಗಳು ಸಮಾಜ ಸುಧಾರಕರುಗಳು ಎಂದೋ ಉತ್ತರ ಹೇಳಿದ್ದಾರೆ. ಮನುಷ್ಯತ್ವಕ್ಕಿಂತ ಹಿರಿದಾದದ್ದು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲವೆಂದು ಮಹಾನುಭಾವರುಗಳೆಲ್ಲ ಸಾರಿದ್ದಾರೆ. ನೋಡಿ ಅತ್ಯಂತ ಶ್ರೇಷ್ಠ ಕುಲ ತಮ್ಮದೆಂದು ಹೇಳಿಕೊಳ್ಳುತ್ತಿರುವವರಲ್ಲಿಯೂ ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆಯುತ್ತಿವೆ; ಇನ್ನು ಮಾಂಸ ತಿನ್ನುವ ಎಲ್ಲರೂ ತಾಮಸರು ಕ್ರೂರಿಗಳು ಎಂದು ಹೇಳಲಾಗುತ್ತಿದೆ. ಈ ಆಪಾದನೆಗೆ ಯಾವ ಆಧಾರವೂ ಇಲ್ಲ ಅಲ್ಲವಾ?
ಇನ್ನು ನಮ್ಮ ಜನಗಳಿಗೆ ಒಂದು ಕಿವಿಮಾತು ಅದೇನೆಂದರೆ ಈ ಜಾತಿ ಸೂಚಕ ಚಿನ್ಹೆಗಳನ್ನು ಮೊದಲು ಕಿತ್ತೆಸೆಯಬೇಕೆಂದು ಕೇಳಿಕೊಳ್ಳುತ್ತೇನೆ. ನಮ್ಮದೆಲ್ಲವೂ ಒಂದೇ ಕುಲ. ಅದು ಈ ಜಗತ್ತಿನಲ್ಲಿಯೇ ಅತ್ಯಂತ ಉತ್ತಮವಾದ ಮಾನವಕುಲ. ಮಾನವರಾಗಿ ಬದುಕಿ ಬಾಳುವುದೇ ಶ್ರೇಷ್ಟತೆ.
ಡಾ. ವಿ.ಆರ್.ನಾಲರ್ಾ ಮತ್ತು ಎಂ.ಎಂ. ಕುಂಟೆ ಅವರು ಹೇಳಿದಂತೆ ಒಂದೊಂದು ಜಾತಿಗೂ ಒಂದೊಂದು ನೀತಿ ಇವೆಲ್ಲವೂ ಜನತೆಯ ಐಕ್ಯತೆ ಒಡೆಯುವುದಕ್ಕಾಗಿ ಕೆಲವರು ಸೃಷ್ಠಿಸಿದ್ದು.ಪಾಸರ್ಿಗಳಿಗೆಲ್ಲ ಒಂದೇ ಧರ್ಮ ಗ್ರಂಥ, ಜೆಂಡ ಅವಸ್ತಾ, ಬೌದ್ಧರಿಗೆಲ್ಲ ಧರ್ಮ ಪದ, ಯಹೂದಿಯರಿಗೆ ತಾಲ್ ಮುದ್, ಕ್ರೈಸ್ತರಿಗೆಲ್ಲಾ ಬೈಬಲ್, ಮುಸ್ಲಿಮರಿಗೆ ಖುರಾನ್.ವಿಶ್ವದ ವಿವಿಧ ಧರ್ಮಗಳಲ್ಲಿ ಹಿಂದೂ ಧರ್ಮ ಮಾತ್ರ ಎರಡು ವರ್ಗದ ಧರ್ಮ ಗ್ರಂಥಗಳನ್ನು ಇಟ್ಟುಕೊಂಡಿದೆ. ಮೇಲ್ಜಾತಿಗಳಿಗಾಗಿ ವೇದಗಳು ಶೂದ್ರರಿಗಾಗಿ ಪುರಾಣಗಳು, ಶೂದ್ರರನ್ನು ಬಗ್ಗು ಬಡಿದು ತಾವು ಹೇಳಿದ್ದಕ್ಕೆಲ್ಲ ತಲೆ ಬಾಗುವಂತೆ ಮಾಡಲು ಧರ್ಮ ಶಾಸ್ತ್ರಕಾರರು ಹೂಡಿದ ಸಂಚು ಇದು ಒಂದೇ ಬಗೆಯ ಅಪರಾಧಕ್ಕೆ ಜಾತಿಗಳ ಆಧಾರದ ಮೇಲೆ ಬೇರೆ ಬೇರೆ ಶಿಕ್ಷೆ ಅನುಮೊದಿಸಿದರು, ಉದಾಹರಣೆಗಾಗಿ ಬ್ರಾಹ್ಮಣನು ಶೂದ್ರನಿಗೆ ಬೈದರೆ ಶಿಕ್ಷೆ ಇಲ್ಲ, ಆದರೆ ಶೂದ್ರನೂ ಬ್ರಾಹ್ಮಣನಿಗೆ ಬೈದರೆ ನಾಲಿಗೆಯನ್ನು ಕತ್ತರಿಸುವ ಶಿಕ್ಷೆ. ಹಲವಾರು ವರ್ಷಗಳ ವರೆಗೆ ಆಚರಿಸಿಕೊಂಡು ಬಂದ ಹಾಗೂ ಇಂದಿಗೂ ಸಂಪೂರ್ಣವಾಗಿ ಬಿಟ್ಟು ಕೊಡದ ಇಬ್ಬಂದಿತನದಿಂದಾಗಿ ನಮ್ಮ ರಾಷ್ಟ್ರೀಯ ಜೀವನದಲ್ಲಿ, ಚಿಂತನೆಯಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಇಬ್ಬಂದಿತನ ಇರುವುದು ಸಹಜವೆಂದು ತೋರಿದರೆ ಆಶ್ಚರ್ಯ ಪಡಬೇಕಾದದ್ದಿಲ್ಲ.
ಈ ಎಲ್ಲ ಅನಾಗರಿಕತೆ ವಂಚನೆ ಕ್ರೌರ್ಯಗಳಿಗೆ ಕಾನೂನು ರೂಪ ಕೊಡಲು ಕೆಲವರಿಗೆ ದೆಹಲಿ ಗದ್ದುಗೆ ಹಿಡಿಯ ಬೇಕಾಗಿದೆ. ಈ ಕುಹತನವನ್ನು ನಮ್ಮ ಬಹುಸಂಖ್ಯಾತ ಹಿಂದುಳಿದ ಮಂದಿಗಳು ಮತ್ತು ನಮ್ಮ ದಲಿತರುಗಳು ಅರಿತುಕೊಂಡು ಮುನ್ನಡೆಯಬೇಕಾಗಿದೆ.
0