ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ಹಮಾಲಿ ಕಲ್ಯಾಣ ಮಂಡಳಿ ರಚನೆ, ಸೇವಾ ಭದ್ರತೆ ಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಹಮಾಲಿ ಕಾರ್ಮಿಕರ ಫೆಡರೇಷನ್ ಸಿಐಟಿಯು ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಸಾಮಾಜಿಕ ಭದ್ರತೆ ಒದಗಿಸಬೇಕು. ಹಮಾಲಿ ಕಲ್ಯಾಣ ಮಂಡಳಿ ರಚನೆಗೆ ₹500 ಕೋಟಿ ಮೀಸಲಿಡಬೇಕು’ ಹಮಾಲಿ ಕಾರ್ಮಿಕ ಸಂಘಟನೆ ಮುಖಂಡ ನಾಗರಾಜ, ‘ಹಮಾಲಿ ಕಾರ್ಮಿಕರಿಗೆ ಹಣಕಾಸಿನ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕು. ಹಣಕಾಸು ಸಂಪನ್ಮೂಲ ಕ್ರೋಢಿಕರಿಸುವ ಯೋಜನೆ ರೂಪಿಸಬೇಕು. ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೆಳಗಾವಿ | ಮಧ್ಯವರ್ತಿಗಳು RTO ಕಚೇರಿಗಳಲ್ಲಿ ಕಂಡುಬಂದರೆ ಅಧಿಕಾರಿಗಳು ಸಸ್ಪೆಂಡ್ – ಸಚಿವ ರಾಮಲಿಂಗಾರೆಡ್ಡಿ
ಮುಖಂಡ ರವಿಚಂದ್ರ, ‘ಎಪಿಎಂಸಿಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ಕನಿಷ್ಠ ₹1 ಲಕ್ಷ ಇಡಿಗಂಟು ನೀಡಬೇಕು. ಹಮಾಲರಿಗೆ ಕಾರ್ಮಿಕರ ಭವಿಷ್ಯನಿಧಿ, ಪಿಂಚಣಿ ಹಾಗೂ ವಸತಿ ಯೋಜನೆಯ ನೆರವು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಹಮಾಲರಿಗೆ ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರಿಸಬೇಕು. ಸಮವಸ್ತ್ರ ವಿತರಣೆಗೆ ಕ್ರಮ ವಹಿಸಬೇಕು. ಕಾರ್ಮಿಕ ಕಾನೂನು ಜಾರಿಗೊಳಿಸಬೇಕು. ಕನಿಷ್ಠ ವೇತನ ನೀಡಬೇಕು’ ಎಂದರು.
ಮುಖಂಡರಾದ ಸಿದ್ದರಾಜು, ರಾಬಿನ್‌ಸನ್, ಲಕ್ಷ್ಮಿಕಾಂತ, ನಾಗೆಂದ್ರ, ಗೋಪಾಲ್ ಇತರರು ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ನೋಡಿ : ಸಾರಿಗೆ ಕಾರ್ಮಿಕರ ಭವಣೆಗಳು – ಕಣ್ತೆರೆಯದ ಸರಕಾರJanashakthi Media
