ತಿರುವನಂತಪುರ: ‘ಕೇರಳದ ಸ್ಥಳೀಡಾಳಿತ ಸಂಸ್ಥೆಗಳಿಗೆ ನಡೆದ ಮೂದಲ ಹಂತದ ಮತದಾನದ ವೇಳೆ ಕೇಂದ್ರ ಸಚಿವ ಸುರೇಶ್ ಗೋಪಿ, ತಿರುವನಂತಪುರದಲ್ಲಿ ಮತ ಚಲಾಯಿಸಿದ್ದರು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಮತದಾನ ಮಾಡಿದ್ದರು’ ಎಂದು ಸಿಪಿಐ ನಾಯಕ ವಿ.ಎಸ್. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಸುರೇಶ್ ಗೋಪಿ ಎರಡು ಕಡೆ ಮತದಾನದ ಹಕ್ಕು ಹೊಂದಲು ಹೇಗೆ ಸಾಧ್ಯ? ಈ ಕುರಿತು ಚುನಾವಣಾ ಆಯೋಗ ಹಾಗೂ ಕೇಂದ್ರ ಸಚಿವರು ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿ | ಅಧಿಕಾರಿಗಳಲ್ಲಿ ಯಾವುದೇ ಭಯ ಇಲ್ಲ ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು
‘ಆದರೆ ಮಂಗಳವಾರದಂದು ಸ್ಥಳೀಡಾಳಿತ ಸಂಸ್ಥೆಗಳಿಗೆ ಮೊದಲ ಹಂತದ ಮತದಾನದ ವೇಳೆ ಸುರೇಶ್ ಗೋಪಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುವನಂತಪುರ ಪುರಸಭೆಯ ಶಾಸ್ತಮಂಗಲಂ ವಾರ್ಡ್‌ನಲ್ಲಿ ಮತ ಚಲಾಯಿಸಿದ್ದರು’ ಎಂದು ಹೇಳಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಸುನಿಲ್, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಹಾಗೂ ಅವರ ಕುಟುಂಬ ತ್ರಿಶೂರ್‌ನ ನೆಟ್ಟಿಶ್ಶೇರಿಯಿಂದ ಮತದಾನ ಮಾಡಿದ್ದರು. ನಾನು ತ್ರಿಶೂರ್‌ನ ನಿವಾಸಿ ಅವರು ಹೇಳಿಕೊಂಡಿದ್ದರು’ ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಅವರನ್ನು ಸುರೇಶ್ ಗೋಪಿ ಸುಮಾರು 75 ಸಾವಿರ ಮತಗಳ ಅಂತರದಿಂದ ಮಣಿಸಿದ್ದರು.
ಇದನ್ನೂ ನೋಡಿ : ಡ್ರಗ್ಸ್ ಮಾಫಿಯಾ :ಯುವಜನ ಟಾರ್ಗೆಟ್ ಯಾಕೆ? ಪೊಲೀಸರ ಬಲೆಗೆ ಬೀಳದ ಪೆಡ್ಲರ್‌ಗಳು Janashakthi Media
