ತಾಂತ್ರಿಕ ಕಾರಣ ನೆಪವೊಡ್ಡಿ ದೀಪಾ ಭಾಸ್ತಿ ಉಪನ್ಯಾಸ ರದ್ದುಪಡಿಸಿದ ಕೇಂದ್ರೀಯ ವಿವಿ – ಮೀನಾಕ್ಷಿ ಬಾಳಿ ಖಂಡನೆ

ಕಲಬುರಗಿ: ವಿಶೇಷ ಉಪನ್ಯಾಸಕ್ಕಾಗಿ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ  ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರನ್ನು ಆಹ್ವಾನಿಸಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಇದ್ದಕ್ಕಿದ್ದಂತೆ ರದ್ದುಪಡಿಸಿರುವುದು ಖಂಡನೀಯ ಎಂದು ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಇದನ್ನೂ ಓದಿ : ಸಾರಿಗೆ ಬಸ್ಸುಗಳ ನೆರವಿಗಾಗಿ “ಅಪಘಾತ ತುರ್ತು ಸ್ಪಂದನ ವಾಹನ” ಗಳಿಗೆ ಚಾಲನೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರ ರುವ ಅವರು, ಯಶಸ್ವಿ ಅನುವಾದಕಿಯೂ ಆಗಿರುವ ದೀಪಾ ಬಾಸ್ತಿ ಅಂತಾರಾಷ್ಟ್ರೀಯ ಲೇಖಕಿ.  ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ.

ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಬಾಸ್ತಿ ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ನೋಡಿ :ಧರ್ಮಸ್ಥಳ ಪ್ರಕರಣ | ಕೊಂದವರು ಯಾರು? ಎಂಬುದು ಹೊರಬರಲಿ – ಡಾ. ನಾಗಲಕ್ಷ್ಮೀ ಚೌಧರಿJanashakthi Media

 

Donate Janashakthi Media

Leave a Reply

Your email address will not be published. Required fields are marked *