ಡೊನೇಷನ್ ನಿಯಂತ್ರಣಕ್ಕಾಗಿ ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಲು ಒತ್ತಾಯ ರಾಜ್ಯಾದ್ಯಂತ ಎಸ್‌ಎಫ್‌ಐ ನಿಂದ ಭೂತದಹಿಸಿ ಪ್ರತಿಭಟನೆ

ಸಂಪುಟ 9, ಸಂಚಿಕೆ 21, 24 ಮೇ 2015

ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಕಾರದ ನೀತಿ-ನಿಯಮಗಳನ್ನು ಮೀರಿ ಡೊನೇಷನ್ ವಸೂಲಿಯಲ್ಲಿ ತೊಡಗಿವೆ. ಸೀಟುಗಳ ಲಭ್ಯತೆ, ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ, ನಿಯಮಗಳ ಕುರಿತು ಶಿಕ್ಷಣ ಇಲಾಖೆ ಅನೇಕ ಸುತ್ತೋಲೆ ಹೊರಡಿಸಿದರೂ ಖಾಸಗಿ ಶಾಲೆಗಳು ಎಗ್ಗಿಲ್ಲದೆ ವಸೂಲಿಯಲ್ಲಿ ತೊಡಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಆದೇಶಗಳಿಗೆ ಬೆಲೆ ನೀಡದೆ ಸರ್ವಾಧಿಕಾರಿ ಧೊರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಎಸ್.ಎಫ್.ಐ. ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ. ಬೆಂಗಳೂರಿನಲ್ಲಿ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಾಜ್ಯ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

1983ರ ಕರ್ನಾಟಕ ಶಿಕ್ಷಣ ಕಾಯಿದೆ ಅನ್ವಯ ಮತ್ತು 1995ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಲಾಸಿಫಿಕೇಶನ್, ರೆಗ್ಯುಲೇಶನ್ ಮತ್ತು ಪ್ರಿಸ್ಕಿಪೇಶನ್ ಕರಿಕ್ಯುಲಂ) ರ ಕಾಯಿದೆಯ ನಿಯಮಗಳು 28.10.1999 ರಂದು ಜಾರಿಗೆ ಬರುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿತ್ತು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಈ ಪ್ರಾಧಿಕಾರಕ್ಕೆ ಡಿ.ಡಿ.ಪಿ.ಐ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಡಿ.ಡಿ.ಪಿ.ಯು. ಜಿಲ್ಲಾ ಮುಖ್ಯ ಇಂಜಿನೀಯರ್, ಸೇರಿದಂತೆ ಪೋಷಕರು, ಶಿಕ್ಷಣ ಆಸಕ್ತರು, ವಿದ್ಯಾರ್ಥಿ ಪ್ರತಿನಿಧಿಗಳು ಸದಸ್ಯರುಗಳಾಗಿರುವರು. ಈ ಸಮಿತಿಯು ಅಕ್ರಮವಾಗಿ ಡೊನೇಷನ್ ವಸೂಲಿ, ಪ್ರವೇಶ ಮೀಸಲಾತಿಯಲ್ಲಿ ಅನ್ಯಾಯ ಆಗದಂತೆ ಕ್ರಮವಹಿಸಲು ಮುಂದಾಗಬೇಕೆಂಬ ನಿಯಮವಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಈ ಸಮಿತಿಯೇ ರಚನೆಯಾಗಿಲ್ಲ.

ಪ್ರತಿಭಟನೆಯಲ್ಲಿ ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗುರುರಾಜ ದೇಸಾಯಿ, ರಾಜ್ಯ ಉಪಾಧ್ಯಕ್ಷ ಎಸ್. ಚಿಕ್ಕರಾಜು, ಮುಖಂಡರಾದ ಹರಿಪ್ರಸಾದ್, ವೆಂಕಟೇಶ್, ಮಹೇಶ್, ಹನಮಂತ್ ದುರ್ಗದ, ದಿಲೀಪ್ ಶೆಟ್ಟಿ, ಮೊನೀಷಾ, ರಮ್ಯಾ, ಸಾಗರ್, ಶ್ರೀನಿವಾಸ್, ಪೋಷಕರ ಸಂಘದ ರವಿ ಎಗ್ಗನಳ್ಳಿ, ಸೀಮಾ ಕೌಸರ್ ಸೇರಿದಂತೆ ಅನೇಕರಿದ್ದರು.

ರಾಜ್ಯ ಕೇಂದ್ರ ಬೆಂಗಳೂರು, ಹಾವೇರಿ, ಕೊಪ್ಪಳಗಳಲ್ಲಿ ಸರಕಾರದ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ-ಪೋಷಕರ ಸಭೆಗಳು ನಡೆದಿವೆ. ಮಂಗಳೂರು, ಕುಂದಾಪುರ ಮುಂತಾದ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *