- ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ , ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ
ದೆಹಲಿ : ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಐದು ಎಡಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ, ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ-ಲೆನಿನ್ ವಾದಿ), ರೆವೊಲ್ಯೂಶನರಿ ಸೋಶಲಿಸ್ಟ್ ಪಾರ್ಟಿ ಮತ್ತು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ತಮ್ಮ ಸೌಹಾರ್ದ ಬೆಂಬಲವನ್ನು ವ್ಯಕ್ತಪಡಿಸಿವೆ.
ಡಿಸೆಂಬರ್ 8ರಂದು ಭಾರತ ಬಂದ್ ಕರೆಗೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಭಾರತೀಯ ಕೃಷಿಯನ್ನು ಮತ್ತು ದೇಶದ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಮ್ಮ ಅನ್ನದಾತರ ಹೋರಾಟದ ವಿರುದ್ಧ ಆರೆಸ್ಸೆಸ್/ಬಿಜೆಪಿ ಅಸಂಬದ್ಧ ಆಪಾದನೆಗಳ ಮೇಲೆ ದ್ವೇಷಪೂರ್ಣ ಪ್ರಚಾರ ನಡೆಸುತ್ತಿರುವುದನ್ನು ಎಡಪಕ್ಷಗಳು ಖಂಡಿಸಿವೆ.
ಮೂರು ಕೃಷಿ ಕಾಯ್ದೆಗಳನ್ನು ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ, 2020ನ್ನು ರದ್ದು ಮಾಡಬೇಕೆಂಬ ರೈತ ಸಂಘಟನೆಗಳ ಬೇಡಿಕೆಯನ್ನು ಎಡಪಕ್ಷಗಳು ಬೆಂಬಲಿಸಿವೆ.
ರೈತರಿಗೆ ಬೆಂಬಲವಾಗಿ ನಿಂತಿರುವ ಮತ್ತು ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿರುವ ಇತರ ಎಲ್ಲ ರಾಜಕೀಯ ಪಕ್ಷಗಳು ಅವರ ಡಿಸೆಂಬರ್ 8ರ ಬಂದ್ ಕರೆಗೆ ಬೆಂಬಲ ಮತ್ತು ಸಹಕಾರವನ್ನು ನೀಡಬೇಕು ಎಂದು ಎಡಪಕ್ಷಗಳು ಮನವಿ ಮಾಡಿಕೊಂಡಿವೆ.