ಮಾಧವಿ ಭಂಡಾರಿ ಕೆರೆಕೋಣ ಅವರ ‘ಮೌನ ಗರ್ಭದ ಒಡಲು’ ಕೃತಿಗೆ ಡಾ.ದಿನಕರ ದೇಸಾಯಿ ರಾಷ್ಟ್ರೀಯ ಕಾವ್ಯ ಪುರಸ್ಕಾರ ಲಭಿಸಿದೆ.
ಇಂದು ಡಾ.ದಿನಕರ ದೇಸಾಯಿ ಜನ್ಮದಿನ ನಿಮಿತ್ತ ಚಿಂತನ ಉ.ಕ ಮತ್ತು ಸಹಯಾನ ಜಂಟಿಯಾಗಿ ಸಂಜೆ 4 ಗಂಟೆಯಿಂದ onlineನಲ್ಲಿ ಫೇಸ್ಬುಕ್ ಮತ್ತು ಯೂಟ್ಯೂಬ್ ಪ್ರಸಾರ ಮೂಲಕ ಕಾರ್ಯಕ್ರಮಗಳು ನಡೆಯಲಿವೆ.
ಮಾಧವಿಯವರ ಕವಿತೆ ಕುರಿತಾಗಿ ಡಾ. ಎಚ್.ಎಲ್. ಪುಷ್ಪಾ, ರವರು ಮಾತನಾಡಲಿದ್ದಾರೆ. ಮಾಧವಿಯವರ ‘ಮೌನ ಗರ್ಭದ ಒಡಲು’ ಕೃತಿಯ ಕುರಿತಾಗಿ ಭಾಗೀರಥಿ ಹೆಗಡೆಯವರು ಮಾತನಾಡಲಿದ್ದಾರೆ. ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ವರದಿಯನ್ನು ಹಂಚಿಕೊಳ್ಳಲಿದ್ದಾರೆ.
ಸಂಜೆ 6 ಗಂಟೆಗೆ ಕವಿಗೋಷ್ಟಿ ನಡೆಯಲಿದ್ದು, ಈ ಕವಿಗೋಷ್ಠಿಯಲ್ಲಿ ಪ್ರತಿಭಾ ಎಂ.ವಿ, ಕೆ.ಬಿ.ವೀರ ಲಿಂಗನಗೌಡ, ನಭಾ ವಕ್ಕುಂದ, ಕೆ.ಮಹಾಂತೇಶ, ರೇಣುಕಾ ರಮಾನಂದ, ಎಸ್.ಎಸ್. ಅಲಿ ತೋರಣಗಲ್ಲು, ಕಿರಣ್ ಭಟ್, ರೇಣುಕಾ ಹೆಳವರ್, ಜಾಂದ್ ಪಾಷಾ, ನವೀನ್ ಎಚ್. ಆರ್. ಹಾಸನ, ಸಚಿನ್ ಅಂಕೋಲಾ, ಯಮುನಾ ಗಾಂವ್ಕರ್ ಸೇರಿದಂತೆ ಅನೇಕ ಕವಿಗಳು ಕವಿತೆಯನ್ನು ವಾಚಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಿತ್ರಕಾವ್ಯ ನಡೆಯಲಿದ್ದು ಸತೀಶ ಯಲ್ಲಾಪು ಮತ್ತು ನಭಾ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಸಮಾರೋಪವನ್ನು ಸುನಂದಾ ಕಡಮೆ, ಖ್ಯಾತ ಸಾಹಿತಿಗಳು ನಡೆಸಿಕೊಡಲಿದ್ದಾರೆ.