ಬೆಂಗಳೂರು : ಜೊಮ್ಯಾಟೋ ಡೆಲಿವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ವಿರುದ್ದ ಡೆಲಿವರಿ ಬಾಯ್ ಕಾಮರಾಜ್ ದೂರು ದಾಖಲಿಸಿದ್ದಾರೆ.
ತಡವಾಗಿ ಡೆಲಿವರಿ ಮಾಡಿದ್ದಕ್ಕೆ ರಾದ್ದಂತ ಮಾಡಿದ್ದ ಹಿತೇಶಾ ಚಂದ್ರಾನೀ ಎಂಬ ಯುವತಿ, ಡೆಲಿವರಿ ಬಾಯ್ ತಮ್ಮ ಮೂಗಿಗೆ ಪಂಚ್ ಮಾಡಿದ್ದ ಎಂದು ಆರೋಪ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು.
ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು. ಈ ಕಾರಣದಿಂದ ಜೊಮ್ಯಾಟೋ ಕಂಪನಿಯು ಡೆಲಿವರಿ ಬಾಯ್ ಕಾಮರಾಜ್‌ನನ್ನು ಕೆಲಸದಿಂದ ವಜಾ ಮಾಡಿತ್ತು.
ಈ ಕುರಿತಾಗಿ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೊಮ್ಯಾಟೋ ಡೆಲಿವರ್ ಬಾಯ್ ಪರವಾಗಿ ನಿಂತಿದ್ದಾರೆ. ಜೊಮ್ಯಾಟೋ ಕಂಪನಿ ಮಾಲೀಕರು ಈ ಕೂಡಲೇ ಆತನ ಪರವಾಗಿ ನಿಲ್ಲಬೇಕು, ಮತ್ತು ಕೆಲಸಕ್ಕೆ ಮರಳಿ ತೆಗೆದುಕೊಳ್ಳಬೇಕು, ಇಲ್ಲವಾದರೆ ನಾವು ನಿಮ್ಮ ಕಂಪನಿಯ ವಸ್ತುಗಳನ್ನು ಬಾಯ್ ಕಟ್ ಮಾಡುವುದಾಗಿ ಜಾಲತಾಣದಲ್ಲಿ ಸಾಲು ಸಾಲಾಗಿ ಡೆಲಿವರ್ ಬಾಯ್ ಪರವಾಗಿ ಜನರು ಒತ್ತಡಗಳು ಹಾಕಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಯುವತಿ ಹಿತೇಶಾ ಚಂದ್ರಾನಿ ವಿರುದ್ದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ಕಾಮರಾಜ್ ದೂರು ದಾಖಲಿಸಿದ್ದಾರೆ.
ಜೊಮ್ಯಾಟೋ ಪ್ರಕರಣ ಈಗ ಪೋಲಿಸ್ ಅಂಗಳಕ್ಕೆ ಬಂದು ನಿಂತಿದ್ದು, ಜೊಮ್ಯಾಟೋ ಡೆಲಿವರ್ ಬಾಯ್ ಹಲ್ಲೆ ಆರೋಪಕ್ಕೆ ತಾತ್ಕಾಲಿಕ ಬ್ರೆಕ್ ಬಿದ್ದಂತಾಗಿದೆ.
ಸುಕಾಸುಮ್ಮನೆ ಒಬ್ಬ ಸಣ್ಣ ಉದ್ಯೋಗಿ ಮೇಲೆ ಈ ರೀತಿಯ ಆರೋಪಗಳು ಬಂದರು ಕಂಪನಿ ಅವರ ಪರವಾಗಿ ನಿಲ್ಲದಿರುವು ಸರಿಯಾದ ಕ್ರಮವಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳ ನಡೆದಿದ್ದು, ಕಾಮರಾಜ್ ಪರವಾಗಿ ನಿಂತಿದ್ದಾರೆ. ಒಬ್ಬ ಉದ್ಯೋಗಿ ಪರವಾಗಿ ನಿಂತು ಮಾನವೀಯತೆ ಮರೆದಿದ್ದಾರೆ.