ಉಗ್ರರು ನಡೆಸಿದ ದಾಳಿಯಲ್ಲಿ ಪ್ಯಾರಾ ಮಿಲಿಟರಿ (ಸಿಆರ್ ಪಿಎಫ್) ಅಧಿಕಾರಿಯೊಬ್ಬರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ಉದಂಪುರ್ ನಲ್ಲಿ ನಡೆದಿದೆ.
ಕಳೆದ ಕೆಲವು ತಿಂಗಳಿಂದ ದಿಢೀರನೆ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಪದೇಪದೆ ನಡೆಯುತ್ತಿರುವ ದಾಳಿಗಳಿಂದ ಹಲವಾರು ಯೋಧರು ಹುತಾತ್ಮರಾಗುತ್ತಿದ್ದಾರೆ.
ಉಗ್ರರ ದಾಳಿ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಸೇನಾ ಬಲ ಹೆಚ್ಚಿಸಲಾಗಿದ್ದರೂ ಉಗ್ರರ ದಾಳಿ ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯ ದಿನಾಚಣೆ ಹಿಂದಿನ ದಿನ ಅಂದರೆ ಆಗಸ್ಟ್ 14ರಂದು ದೀಪಕ್ ಶರ್ಮ ಎಂಬ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು.
ಇದೀಗ ಸೇನಾ ಕಾರ್ಯಾಚರಣೆ ವೇಳೆ ಸಿಆರ್ ಪಿಎಫ್ ಅಧಿಕಾರಿಯೊಬ್ಬರು ಉಗ್ರರ ದಾಳಿಗೆ ಹುತಾತ್ಮರಾಗಿದ್ದಾರೆ.