ಜನರು ಬಿಜೆಪಿಯ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಮತ ನೀಡಿ ಆಶೀರ್ವದಿಸಿದ್ದಾರೆ-ಗ್ರಾಮೀಣ ಶಾಸಕ ನಾಗೇಂದ್ರ

ಬಳ್ಳಾರಿ : ರಾಜ್ಯದ ಪ್ರಭಾವಿ ನಾಯಕರೆಂದೇ ಬಿಂಬಿಸಿಕೊಳ್ಳುತ್ತಿರುವ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರೇ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಫೀಲ್ಡ್ಗಿಳಿದಿದ್ದರು. ಆದರೂ ಪ್ರಯೋಜನ ಆಗಲಿಲ್ಲ. ಇಂಥಹ ಪರಿಸ್ಥಿತಿ ಬಿಜೆಪಿಗೆ ಇದೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅವರು ನಗರದ ರಾಯಲ್ ಪೋರ್ಟ್ ಹೋಟೆಲ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ,  ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಗೆಲುವಿಗೆ ಜಿಲ್ಲೆಯ ಬಿಜೆಪಿ ನಾಯಕರು, ಸಚಿವರು, ಶಾಸಕರು ಹತಾಶರಾಗಿದ್ದಾರೆ. ಹೀಗಾಗಿ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸುವುದು, ಬೆದರಿಸಲು ಮುಂದಾಗಿದ್ದಾರೆ. ನಗರದ 8,18,20,29,31,32 ವಾರ್ಡುಗಳಲ್ಲಿ ಬಿಜೆಪಿಯವರು ನಮ್ಮ ಗೆಲುವನ್ನು ಸಹಿಸದೇ ನಮ್ಮವರ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರ ಮೇಲೆ ಎಸ್ಪಿಯವರಿಗೆ ದೂರು ಸಲ್ಲಿಸಿದ್ದೇವೆ, ನಮ್ಮವರಿಗೆ ಏನಾದರೂ ಆದರೇ ಹೊಣೆಗಾರಿಕೆ ಬಿಜೆಪಿಯವರದ್ದೇ ಎಂದು ಗ್ರಾಮೀಣ ಶಾಸಕ ನಾಗೇಂದ್ರ ತಿಳಿಸಿದರು.

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇಷ್ಟೊಂದು ಅಭೂತಪೂರ್ವ ಮೆಜಾರಿಟಿ ಬಂದಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯ ಹಾಗೂ ಬಳ್ಳಾರಿಯ ಸಮಸ್ಯೆಗಳಿಗೆ ಬೇಸತ್ತು ಈ ಮತದಾರರು ಈ ಫಲಿತಾಂಶ ನೀಡಿದ್ದಾರೆ ಎಂದರು.ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆಯಾಗಿದೆ. ಈಗ ರಾಜೀನಾಮೆ ನೀಡುತ್ತೀರೋ? ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3667 ಎಕರೆ ಭೂಮಿ ಪರಭಾರೆ ವಿಚಾರವಾಗಿ ರಾಜೀನಾಮೆ ನೀಡಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ ಭೂಮಿ ಪರಭಾರೆ ಮಾಡಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಅವರ ನಿಲುವೇನು?. ಭೂಮಿ ಪರಭಾರೆ ವಿಚಾರವಾಗಿ ಸಚಿವ ಆನಂದ ಸಿಂಗ್ ರಾಜೀನಾಮೆ ನೀಡುತ್ತಾರೋ ಎಂದು ಸೈಯದ್ ಪ್ರಶ್ನಿಸಿದ್ದಾರೆ.

ಮಾಜಿ ಶಾಸಕ  ಹೆಚ್.ಅನಿಲ್ ಲಾಡ್, ಜಿಲ್ಲಾ ಕಾಂಗ್ರೆಸ್ ಸಮಿತಿಯ (ನಗರ) ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್, ಮುಖಂಡರಾದ ಜೆ.ಎಸ್.ಆಂಜನೇಯಲು, ಕೊಳಗಲ್ಲು ಅಂಜಿನಿ, ಚಿತ್ರದುರ್ಗ ಜಿಲ್ಲೆಯ ಹಾನಗಲ್ ಜಿಲ್ಲಾ ಪಂಚಾಯಿತಿ ಸದಸ್ಯ ಮುಂಡರಗಿ ನಾಗರಾಜ ಸೇರಿದಂತೆ ಮತ್ತಿತರ ಮುಖಂಡರು ಪತ್ರಕಾಗೋಷ್ಠಿಯಲ್ಲಿದ್ದರು.

ವರದಿ- ಪಂಪನಗೌಡ.ಬಿ.ಬಳ್ಳಾರಿ.

Donate Janashakthi Media

Leave a Reply

Your email address will not be published. Required fields are marked *