ಜನತೆಗೆ ಮತ್ತು ದೇಶಕ್ಕೆ ಬಿಜೆಪಿಯ ಎಚ್ಚರಿಕೆ!

-ಸೀತಾರಾಮ್ ಯೆಚೂರಿ

ಅಮಿತ್ ಷಾ, ಗಿರಿರಾಜ್ ಸಿಂಗ್, ಪ್ರವೀಣ್ ತೊಗಾಡಿಯ, ರಾಮದಾಸ ಕದಂ ಭಾಷಣಗಳು ಕೆಲವು ವ್ಯಕ್ತಿಗಳ ತಿಕ್ಕಲು ಮಾತುಗಳಲ್ಲ ಎಂಬುದನ್ನು ತಿಳಿಯಬೇಕಾಗಿದೆ. ಇವು ಬಿಜೆಪಿ ಮತ್ತು ನರೇಂದ್ರ ಮೋದಿಯ ರಾಜಕೀಯ ವೇದಿಕೆಯ ಅಭಿನ್ನ ಭಾಗ. ಇಗೋ ಇಲ್ಲಿದೆ-ಜನತೆಗೆ ಮತ್ತು ದೇಶಕ್ಕೆ ಮುನ್ನೆಚ್ಚರಿಕೆ

togadia
ಬಿಜೆಪಿಯ ಚುನಾವಣಾ ಪ್ರಚಾರದಲ್ಲಿನ ಇಬ್ಬಂದಿತನ ಈಗ ಬಯಲಾಗುತ್ತಿದೆ. ಮೇಲ್ತುದಿಯಲ್ಲಿ ‘ಅಭಿವೃದ್ಧಿ’, ‘ಉತ್ತಮ ಆಡಳಿತ’, ಉದ್ಯೋಗ ಮುಂತಾದ ಮೋದಿವಾಣಿಯ ಲೇಪನ ಇದೆ. ಅದರ ತಳದಲ್ಲಿ ಮಾತ್ರ ತೀವ್ರ ಕೋಮುವಾದಿ ಪ್ರಚಾರ ಹೊಂಚು ಹಾಕುತ್ತಿದೆ. ಇದು ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೇಂದ್ರೀಕೃತವಾಗಿದೆ.

model code 240414ಬಿಜೆಪಿ/ಆರೆಸ್ಸೆಸ್ ಮುಖಂಡರ ಇತ್ತೀಚಿನ ಭಾಷಣಗಳು, ನುಡಿಗಳು ಅವರ ಪ್ರಚಾರದ ಹಿಂದೂ ಸಂಕುಚಿತವಾದಿ ಮತ್ತು ಕೋಮುವಾದಿ ಸ್ವರೂಪವನ್ನು ಪ್ರಕಟಪಡಿಸುತ್ತಿವೆ. ಬಿಜೆಪಿಯ ಒಬ್ಬ ಮುಖಂಡ ಮತ್ತು ಬಿಹಾರದ ನವಾಡ ಕ್ಷೇತ್ರದ ಅಭ್ಯಥರ್ಿ ಗಿರಿರಾಜ್ ಸಿಂಗ್ “ನರೇಂದ್ರ ಮೋದಿಯವರನ್ನು ತಡೆದು ನಿಲ್ಲಿಸ ಬಯಸುವವರು ಪಾಕಿಸ್ತಾನದ ಸಹಾಯ ಎದುರು ನೋಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹವರಿಗೆ ಭಾರತದಲ್ಲಿ ಜಾಗ ಇರುವುದಿಲ್ಲ…..ಯಾಕೆಂದರೆ ಅವರ ಜಾಗ ಪಾಕಿಸ್ತಾನದಲ್ಲಿರುತ್ತದೆ” ಎಂದು ಒಂದು ಚುನಾವಣಾ ಭಾಷಣದಲ್ಲಿ ಸಾರಿದರು. ಹಿಂದುತ್ವವನ್ನು ಟೀಕಿಸುವವರೆಲ್ಲ ರಾಷ್ಟ್ರ-ವಿರೋಧಿಗಳು, ಪಾಕಿಸ್ತಾನದ ಪರವಾಗಿರುವವರು ಎಂದು ಹಣೆಪಟ್ಟಿ ಹಚ್ಚುವುದು ಸಂಘ ಪರಿವಾರದ ಹಳೆಯ ತಂತ್ರ. ಪಾಕಿಸ್ತಾನದ ಪ್ರಸ್ತಾಪ ಬರುವುದು ಕೂಡ ಮುಸ್ಲಿಮರ ಮೇಲೆ ಗುರಿಯಿಡಲಿಕ್ಕಾಗಿಯೇ. ಅವರು ಪಾಕಿಸ್ತಾನಕ್ಕೆ ವಿಧೇಯರಾಗಿರುವವರು ಎಂದೇ ಅವರು ಸದಾ ವ್ಯಂಗ್ಯವಾಡುತ್ತಾರೆ. ಬಿಜೆಪಿ ಭಾಷಣಕ್ಕೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದರೂ ಗಿರಿರಾಜ್ ಸಿಂಗ್ ಮಾತ್ರ ತನ್ನ ಹೇಳಿಕೆ ಸರಿ ಎಂದು ಸಮಥರ್ಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ಮೊದಲು ಮೋದಿಯ ಸಹಾಯಕ ಅಮಿತ್ ಷಾ ಉತ್ತರಪ್ರದೇಶದ ಮುಝಪ್ಪರ್ನಗರದಲ್ಲಿ ಒಂದು ಹಗೆ ಕಾರುವ ಭಾಷಣ ಮಾಡಿದ್ದರು. “ನಿಮ್ಮ ಸಮುದಾಯಕ್ಕೆ ಮಾಡಿದ ಅವಮಾನವನ್ನು ತೀರಿಸಿಕೊಳ್ಳುವ ಸಮಯ ಇದು. ನಮ್ಮ ತಾಯಂದಿರೊಂದಿಗೆ, ಸೋದರಿಯರೊಂದಿಗೆ ಕೆಟ್ಟದಾಗಿ ವತರ್ಿಸುವವರಿಗೆ ಈ ಚುನಾವಣೆ ಉತ್ತರವಾಗಬೇಕು” ಎಂದು ಅವರು ಸಾರಿದ್ದರು. ಇತ್ತೀಚೆಗೆ ಅತ್ಯಂತ ಕೆಟ್ಟ ಕೋಮುವಾದಿ ಹಿಂಸಾಚಾರವನ್ನು ಕಂಡ ಒಂದು ಪ್ರದೇಶದಲ್ಲಿ ಜಾಟ್ ಸಭಿಕರಿಗೆ ಕೊಟ್ಟಿರುವ ಕರೆ “ಸೇಡು ಮತ್ತು ಗೌರವದ ರಕ್ಷಣೆ’ಯ ಮಾತಾಡುವುದು ಕೋಮುವಾದಿ ದ್ವೇಷವನ್ನು ಬಡಿದೆಬ್ಬಿಸಲಿಕ್ಕಾಗಿಯೇ.

ಬಿಜೆಪಿ ಮುಖಂಡರೆಲ್ಲ ಅಮಿತ್ ಷಾ ಸಮರ್ಥನೆಗೆ ಬಂದರು, ಅವರು ಮತದಾನದ ಮೂಲಕ ಸೇಡು ತೀರಿಸಿಕೊಳ್ಳಬೇಕು ಎಂದಷ್ಟೇ ಕರೆ ನೀಡಿದ್ದು ಎಂದರು. ಸ್ವತಃ ನರೇಂದ್ರ ಮೋದಿ ಕೂಡ ಅವರ ರಕ್ಷಣೆಗೆ ಬಂದರು.

development waning

ಇಂತಹ ದ್ವೇಷ ಕಾರುವ ಭಾಷಣಗಳು ಅಲ್ಪಸಂಖ್ಯಾತ ಸಮುದಾಯದವರು ಮತ್ತು ಹಿಂದುತ್ವ ಅಜೆಂಡಾವನ್ನು ವಿರೋಧಿಸುವವರ ಮೇಲೆಯೇ ಗುರಿಯಿಟ್ಟಿರುವಂತದ್ದು. ಇದು ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಆರೆಸ್ಸೆಸ್ ಕಾರ್ಯಕರ್ತರ ಪ್ರಚಾರ ಶೈಲಿಯ ಭಾಗವೇ ಆಗಿದೆ. ಆರೆಸ್ಸೆಸ್ ತಂಡಗಳು ಮನೆ-ಮನೆಗೆ ಹೋಗಿ ಹಿಂದೂಗಳು ನೂರಕ್ಕೆ ನೂರರಷ್ಟು ಮತ ನೀಡಿ ಅಸೂಯೆ ತುಂಬಿರುವ ಶತ್ರುಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಮನವಿ ಮಾಡುವ ಕರಪತ್ರಗಳನ್ನು ಹಂಚುತ್ತಿದ್ದಾರೆ.

ಆರೆಸ್ಸೆಸ್ ಅಂಗ ಸಂಘಟನೆಯಾದ ವಿಶ್ವ ಹಿಂದೂ ಪರಿಷದ್ ಮುಖಂಡ ಪ್ರವೀಣ್ ತೊಗಾಡಿಯ ಈ ಸಂದರ್ಭವನ್ನು ಮುಸ್ಲಿಮರ ವಿರುದ್ಧ ದ್ವೇಷಕಾರಲು ಬಳಸಿಕೊಂಡಿದ್ದಾರೆ. ಗುಜರಾತಿನ ಭಾವನಗರದಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬರು ಖರೀದಿಸಿದ ಮನೆಯ ಹೊರಗೆ ಪ್ರತಿಭಟನೆಯಲ್ಲಿ ಮಾತಾಡುತ್ತ ಈತ, 48 ಗಂಟೆಯೊಳಗೆ ಮನೆ ಖಾಲಿ ಮಾಡಬೇಕು, ಇಲ್ಲವಾದರೆ ಹಿಂದೂಗಳು ಬಲವಂತದಿಂದ ಅದನ್ನು ವಶಕ್ಕೆ ತಗೊಳ್ಳಬೇಕು ಎಂದು ಪ್ರಕಟಿಸಿದರು. ಹಿಂದೂ ಪ್ರದೇಶದಲ್ಲಿ ಮುಸ್ಲಿಮರಿಗೆ ಮನೆ ಮಾಡುವ ಹಕ್ಕು ಇಲ್ಲ ಎನ್ನುತ್ತಾರೆ ಆತ. ಇಲ್ಲಿ ಕೂಡ, ಈತನಾಡಿದ ಮಾತುಗಳ ವೀಡಿಯೋ ಟೇಪ್ ಇದ್ದರೂ, ಆತ ಹಾಗೆ ಹೇಳಿಯೇ ಇಲ್ಲ ಎಂದು ಆರೆಸ್ಸೆಸ್ ಸಮರ್ಥನೆಗೆ ಬಂದಿದೆ.

giriraj

ತೊಗಾಡಿಯಾ ಹಾಕಿದ ಬೆದರಿಕೆ ವಾಸ್ತವವಾಗಿ ಮೋದಿಯ ಗುಜರಾತಿನಲ್ಲಿ ಆಚರಣೆಯಲ್ಲಿದೆ. ಅಹಮದಾಬಾದ್, ವಡೋದರಾ ಮತ್ತಿತರ ನಗರಗಳಲ್ಲಿ ಅಪಾಟರ್್ಮೆಂಟ್ಗಳು, ವಸತಿ ಸಂಕೀರ್ಣಗಳು ಹಿಂದೂಗಳಿಗಾಗಿಯೇ, ಅಲ್ಲಿ ಮುಸ್ಲಿಮರು ಮನೆ ಖರೀದಿಸುವಂತಿಲ್ಲ. ಕಳೆದ ಕೆಲವು ದಶಕಗಳಿಂದ ಈ ರೀತಿ ಪ್ರತ್ಯೇಕ ಕೇರಿಗಳು, ಕೊಳೆಗೇರಿಗಳಲ್ಲಿ ನೆಲೆಗೊಳಿಸುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ.

amit shah

ನರೇಂದ್ರ ಮೋದಿ ಇವನ್ನೆಲ್ಲ ಸರ್ವತೋಮುಖ ಅಭಿವೃದ್ಧಿ ತಂದು ಕೊಡುವ, ಪರಿಣಾಮಕಾರಿ ಆಡಳಿತ ಕೊಡುವ ಮಾತುಗಳಿಂದ ಮರೆ ಮಾಚುವ ಪ್ರಚಾರದ ಸಾರಥ್ಯವನ್ನು ವಹಿಸಿದ್ದಾರೆ. ಆದರೆ ಇದರಲ್ಲಿ ಹರಡಿಸುತ್ತಿರುವ ಕೋಮುವಾದಿ ಹಂಚಿಕೆಗಳು, ವಿಭಜನಕಾರಿ ದ್ವೇಷವನ್ನು ಅಡಗಿಸಿಡಲು ಸಾಧ್ಯವಿಲ್ಲ.
ಮೋದಿಯವರ ಸಮ್ಮುಖವೇ. ಮುಂಬಯಿಯ ಒಂದು ರ್ಯಾಲಿಯಲ್ಲಿ ಎಪ್ರಿಲ್ 21ರಂದು ಶಿವಸೇನೆಯ ಮುಖಂಡ ರಾಮದಾಸ ಕದಂ ದುರ್ವರ್ತನೆ ತೋರುವ ಮುಸ್ಲಿಮರಿಗೆ ನರೇಂದ್ರ ಮೋದಿ ಒಂದು ಪಾಟ ಕಲಿಸುತ್ತಾರೆ ಎಂದು ಸಾರಿದರು.

ಇವೆಲ್ಲ ಕೆಲವು ವ್ಯಕ್ತಿಗಳ ತಿಕ್ಕಲುತನದ ಉದಾಹರಣೆಗಳಲ್ಲ ಎಂಬುದನ್ನು ತಿಳಿಯಬೇಕಾಗಿದೆ. ಇವು ಬಿಜೆಪಿ ಮತ್ತು ನರೇಂದ್ರ ಮೋದಿಯ ರಾಜಕೀಯ ವೇದಿಕೆಯ ಅಭಿನ್ನ ಭಾಗ. ಜನತೆಗೆ ಮತ್ತು ದೇಶಕ್ಕೆ ಮುನ್ನೆಚ್ಚರಿಕೆ ಬಂದಿದೆ.

Donate Janashakthi Media

Leave a Reply

Your email address will not be published. Required fields are marked *