ತಮಿಳುನಾಡು, ಫೆ. 09 : ಉಚ್ಚಾಟಿತ ಎಐಎಡಿಎಂಕೆ, ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ತಮಿಳುನಾಡಿ ಮತ್ತು ಕರ್ನಾಕದ ಗಡಿಯಲ್ಲಿ ಅದ್ದೂರಿ ಸ್ವಾಗತ ದೊರಕಿತ್ತು. ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿದರು, ಇದೇ ಸಂದರ್ಭದಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪಟಾಕಿ ಸಿಡದ ಕಾರಣ ಅಚಾನಕ್ಕಾಗಿ ಪಟಾಕಿ ಶಶಿಕಲಾ ಬಿಂಬಲಿಗರ ಕಾರಿನ ಮೇಲೆ ನಿದ್ದು ಕಾರು ಸುಟ್ಟು ಹೊತ್ತಿ ಉರಿಯಿತ್ತು.
ಅಕ್ರಮ ಆಸ್ತಿಗಳಿಕೆ ವಿಚಾರದಲ್ಲಿ ನಾಲ್ಕು ವರ್ಷಗಳ ಹಿಂದೆ ಜೈಲು ಸೇರಿದ ಶಶಿಕಲಾ ಅವರಿಗೆ ಜನವರಿ 27ರಂದು ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು ಆದರೆ, ಜನವರಿ 20ರಂದು ಶಶಿಕಲಾಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಪಡೆದು ಗುಣಮುಖರಾದ ಶಶಿಕಲಾ ಅವರು ಇಂದು ಚೆನ್ನೈಗೆ ಪ್ರಯಾಣ ಮಾಡಿದರು. ಮಾರ್ಗಮಧ್ಯದಲ್ಲಿ ಶಶಿಕಲಾ ಅವರಿಗೆ ಸ್ವಾಗತ ಕೋರಲು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಸಾಲು ಸಾಲಾಗಿ ರಸ್ತೆಯ ಬದಿಯಲ್ಲಿ ನಿಂತಿದ್ದರು.
ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ, ಇದೀಗ ಶಶಿಕಲಾ ಅವರ ಪಾತ್ರವೇನ್ನು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.