ಬೆಂಗಳೂರು : ಉಪಚುನಾವಣೆ ಸಂರ್ಭದಲ್ಲಿ ರಾಜಕೀಯ ಒಳಗುಟ್ಟುಗಳು ಒಂದೊಂದಾಗಿಯೇ ಹೊರಬರುತ್ತಿವೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಬರಗೂರಿನಲ್ಲಿ ಸಿರಾ ಉಪ ಚುನಾವಣೆಯ ಬೃಹತ್ ಸಭೆಯಲ್ಲಿ ನನ್ನ ಪುತ್ರ ಎಚ್ ಡಿ ಕುಮಾರಸ್ವಾಮಿ ಸಿಎಂ ಮಾಡಲು ನಾನು ಒಪ್ಪಿರಲಿಲ್ಲ, ಕಾಂಗ್ರೆಸ್ ನಾಯಕರನ್ನು ಸಿಎಂ ಮಾಡಲು ಸೂಚಿಸಿದ್ದೆ ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಗುಲಾಬ್ ನಬಿ ಆಜಾದ್ ಹಾಗು ಹೀಗಿನ ರಾಜಸ್ಥಾನದ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಅವರು ನಮ್ಮ ಮನೆಗೆ ಬಂದು ಕುಮಾರಸ್ವಾಮಿ ಅವರನ್ನ ಮುಖ್ಯ ಮಂತ್ರಿ ಮಾಡುತ್ತೀವಿ ಎಂದರು , ಆಗ ನಾನು ಹಿರಿಯರಾದ ಖರ್ಗೆ ಅವರನ್ನ ಮುಖ್ಯಮಂತ್ರಿ ಮಾಡಿ ಎಂದು ಸಲಹೆ ನೀಡಿದ್ದೆ. ಅವರು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಂತ ತೀರ್ಮಾನ ಮಾಡಿದ್ದೀವಿ ಎಂದರು. ಅವರೇ ತಿರ್ಮಾನ ಮಾಡಿಕೊಂಡ ಬಂದ ಮೇಲೆ ನಾನು ಏನು ಮಾಡಲು ಸಾಧ್ಯ ? ಈಗ ಸುಖಾಸುಮ್ಮನೆ ನಮ್ಮ ಮೇಲೆ ಇಲ್ಲ ಸಲ್ಲದ ರಾಜ್ಯದ ಕೆಲವು ನಾಯಕರು ಆರೋಪಗಳನ್ನ ಮಾಡುತ್ತಿದ್ದಾರೆ.
ದಿವಂಗತ ಸತ್ಯನಾರಾಯಣ್ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ , ರೈತ ಪರ ಹೋರಾಟಗಾರ , ಸಿರಾ ತಾಲೂಕಿಗೆ ಅವರ ಕೊಡುಗೆ ಅಪಾರ , ಜೆ.ಎಚ್.ಪಟೇಲರ ಸಂಪುಟದಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಸರಿಯಾಗಿ ಸಿಗಲಿಲ್ಲ ಎಂದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ವಾಪಾಸ್ ಪಡೆಯಿರಿ ಪಟೇಲರ ಜೊತೆ ಮಾತಾಡಿ ಸರಿಪಡಿಸುತ್ತೀನಿ ಎಂದು ಹೇಳಿದರು ನನ್ನ ಮಾತು ಕೇಳಲಿಲ್ಲ , ತಕ್ಷಣ ಪಟೇಲರ ಜೊತೆ ಮಾತಾಡಿ ಪರಿಹಾರ ಕೊಡಿಸಿದ ಮೇಲೆ ರಾಜೀನಾಮೆ ವಾಪಸ್ ಪಡೆದರು. ನಿಮ್ಮೆಲ್ಲರ ಆಶೀರ್ವಾದದಿಂದ ದಿವಂಗತ ಶ್ರೀ ಬಿ.ಸತ್ಯನಾರಾಯಣ್ ಅವರ ಧರ್ಮಪತ್ನಿ ಅಮ್ಮಾಜಮ್ಮ ಅವರನ್ನು ವಿಧಾನಸಭೆಗೆ ಕಳಿಸಿಕೊಡಬೇಕಾಗಿದೆ.
ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಪಕ್ಷವೊಂದು ಏನೇ ಆಮಿಷ ಒಡ್ಡಿದರು ಅದಕ್ಕೆ ತಲೆಬಾಗದೆ ಪಕ್ಷದ ಜೊತೆ ನಿಂತ ಮಹಾನ್ ವ್ಯಕ್ತಿ , ಅಂತವರ ಶ್ರೀಮತಿ ಅವರು ವಿಧಾನಸಭೆಗೆ ಹೋಗಲೇಬೇಕು , ಅವರು ಶಾಸಕರಾಗಲು ಶಿರಾ ಜನತೆಯ ಆಶಿರ್ವಾದಬೇಕು , ದಯಮಾಡಿ ಈ ಬಾರಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.
ಪಕ್ಕದ ಆಂಧ್ರಪ್ರದೇಶ , ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ಜನತೆ ಪ್ರಾದೇಶಿಕ ಪಕ್ಷಗಳ ಜೊತೆ ಇದ್ದಾರೆ , ಅದಕ್ಕೆ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಬಂದರು ಈ ಮೂರು ರಾಜ್ಯಗಳ ಪ್ರಾದೇಶಿಕ ಪಕ್ಷದ ನಾಯಕರ ಮನೆ ಮುಂದೆ ಬಂದು ನಿಲ್ಲುತ್ತಾರೆ .
ನಮ್ಮ ರಾಜ್ಯದಲ್ಲಿ ಯಡಿಯೂರಪ್ಪನವರೇ ಮುಖ್ಯ ಮಂತ್ರಿ ಇರಬಹುದು ಆದರೆ ದುರ್ದೈವ ನಮ್ಮ ರಾಜ್ಯಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ , ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದಾರೆ ಆದರೆ ಯಾವುದೇ ಪ್ರಯೋಜನ ವಾಗಿಲ್ಲ , ನಾನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೀನಿ ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ.
ಇದನ್ನು ಓದಿ ಲಿಂಕ್ ಕ್ಲಿಕ್ ಮಾಡಿ : ಕ್ಷೇತ್ರದ ಶಾಂತಿ, ಪ್ರಗತಿಗೆ ಕುಸುಮಾ ಅವರಿಗೆ ಮತ ನೀಡಿ; ಚಿತ್ರನಟಿ ಉಮಾಶ್ರೀ
ನನ್ನ ಕಾಲದಲ್ಲಿ ರಾಜ್ಯಕ್ಕೆ ಒಳ ಮೀಸಲಾತಿ ಮಾಡಿದ ಕಾರಣ ಎಲ್ಲಾ ವರ್ಗದವರು ಪಾಲಿಕೆಗಳಲ್ಲಿ , ಜಿಲ್ಲಾ ಪಂಚಾಯಿತಿಗಳಲ್ಲಿ , ತಾಲೂಕು ಪಂಚಾಯಿತಿ ಗಳಲ್ಲಿ ಹಾಗು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಮಾಡುವಂತಾಗಿದೆ , ಆಗ ಸಿದ್ದರಾಮಯ್ಯ ಅವರು ನನ್ನ ಜೊತೆಯಲ್ಲೇ ಇದ್ದರು , ಇದರ ಬಗ್ಗೆ ಸಿದ್ದರಾಮಯ್ಯ ಅವರು ಪ್ರಾಮಾಣಿಕವಾಗಿ ಹೇಳಬೇಕು , ನಾನು ಮಹಿಳೆಯರಿಗೂ ಕೂಡ ಮೀಸಲಾತಿ ನೀಡಿದ್ದೀನಿ , ಇದರ ಬಗ್ಗೆ ಯಾವ ಚರ್ಚೆಗೂ ಸಹ ಸಿದ್ಧನಿದ್ದೀನಿ ಎಂದಿದ್ದಾರೆ.
ಈ ಬಾರಿ ಈ ಹೆಣ್ಣು ಮಗಳನ್ನ ಗೆಲ್ಲಿಸಿಕೊಡಿ , ನಿಮ್ಮ ವಿಶ್ವಾಸಕ್ಕೆ ಎಂದು ಚ್ಯುತಿ ಬರದ ರೀತಿ ಅಮ್ಮಾಜಮ್ಮ ಅವರು ನಡೆದುಕೊಳ್ಳುತ್ತಾರೆ , ಸತ್ಯನಾರಾಯಣ್ ಅವರಂತೆ ಅಮ್ಮಾಜಮ್ಮ ಅವರು ಕೂಡ ರೈತರ ಮತ್ತು ಬಡವರ ಏಳಿಗೆಗಾಗಿ ಶ್ರಮಿಸ್ಸುತ್ತಾರೆ ಎಂದು ಮತದಾರರಲ್ಲಿ ವಿನಂತಿಸಿದ್ದಾರೆ.