“ಕ್ಯಾರೆಕ್ಟರ್ ಸರ್ಟಿಫಿಕೇಟ್ ನ ಅಭೂತಪೂರ್ವ ಅಸಂಬದ್ಧ  ಆಣತಿ” : ಹರ್ಯಾಣ ಸರಕಾರದ ಕ್ರಮಕ್ಕೆ ದಿಲ್ಲಿ ಪತ್ರಕರ್ತರ ಸಂಘದ ಬಲವಾದ ಖಂಡನೆ

ನವದೆಹಲಿ : ಬಿಲಾಸ್‌ಪುರಕ್ಕೆ ಪ್ರಧಾನಮಂತ್ರಿಯವರ ಭೇಟಿಯನ್ನು ವರದಿ ಮಾಡಲು ಬಯಸುವ ಎಲ್ಲಾ ಪತ್ರಕರ್ತರು ಸಿಐಡಿಗೆ ತಮ್ಮ ಚಾರಿತ್ರ್ಯದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಹಿಮಾಚಲ ಪ್ರದೇಶ ಸರಕಾರದ ಆದೇಶಕ್ಕೆ ದಿಲ್ಲಿ ಪತ್ರಕರ್ತರ ಸಂಘ  (ಡಿಯುಜೆ) ದಿಗ್ಭ್ರಮೆ ವ್ಯಕ್ತಪಡಿಸಿದೆ. ಈ ಕೆಟ್ಟದಾಗಿ ಯೋಜಿಸಿರುವ  ಆದೇಶವನ್ನು ಹಿಂಪಡೆಯುವ ಸರ್ಕಾರದ ಕೊನೆಯ ಕ್ಷಣದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದೂ ಅದು ಹೇಳಿದೆ.

ಇದು ಪತ್ರಿಕಾರಂಗವನ್ನು ಹೆದರಿಸಿ ಮಣಿಸಲು ಅಧಿಕಾರದ ಪ್ರಯೋಗದ ಅಶುಭಕಾರೀ ಕಸರತ್ತು. ಜಿಲ್ಲಾಡಳಿತದ ಆದೇಶವು ಎಂತಹ ವಿವಾದವನ್ನು ಹುಟ್ಟುಹಾಕಿದೆ ಎಂದರೆ ಹಿಮಾಚಲ ಪೊಲೀಸ್ ಮುಖ್ಯಸ್ಥರು ಅಕ್ಟೋಬರ್ 5, 2022 ಕ್ಕೆ ನಿಗದಿತ ಭೇಟಿಗೆ ಒಂದು ದಿನ ಮುಂಚಿತವಾಗಿ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಬೇಕಾಗಿ ಬಂದಿದೆ ಎಂದು ಡಿಯುಜೆ ಹೇಳಿದೆ.

“ಪತ್ರಕರ್ತರ ಮೇಲೆ ಇಂತಹ ಅತಿಯಾದ ಕಣ್ಗಾವಲು ನಮ್ಮ ಕೆಲಸವನ್ನು ದಿನದಿಂದ ದಿನಕ್ಕೆ ಕಷ್ಟಕರವಾಗಿಸುತ್ತದೆ. ‘ಕ್ಯಾರೆಕ್ಟರ್ ಸರ್ಟಿಫಿಕೇಟ್’ ಆಣತಿ ಅಸಂಬದ್ಧವಾಗಿ ಕಾಣುತ್ತದೆ, ಇದು ಜಿಲ್ಲಾಡಳಿತದ ಮಿತಿಮೀರಿದ ಉತ್ಸಾಹದ ಕ್ರಮವಷ್ಟೇ ಅಲ್ಲ,  ಇದೊಂದು  ಪತ್ರಿಕಾರಂಗದ ಬಾಯಿ ಮುಚ್ಚಿಸುವ ಪ್ರಸ್ತುತ ಕಾಲದ ಅಪಾಯಕಾರಿ ಪ್ರವೃತ್ತಿಯ ವಾಸನೆ ಹೊಡೆಯುವ ಅಭೂತಪೂರ್ವ ಅಶುಭಕಾರೀ ಕ್ರಮ…….ಪತ್ರಕರ್ತರ ಬಗ್ಗೆ ಆಳವಾಗಿ ಬೇರೂರಿರುವ ಅನುಮಾನ ಮತ್ತು ಸರ್ಕಾರಿ ಕಚೇರಿಗಳು, ಸಚಿವಾಲಯಗಳು ಮತ್ತು ಸಂಸತ್ತಿಗೆ ಕೂಡ ನಮ್ಮ ಪ್ರವೇಶವನ್ನು ತಡೆಯಲು ಹೆಚ್ಚುತ್ತಿರುವ ಕ್ರಮಗಳು ಕೇಂದ್ರದಿಂದ ಆಯ್ದ ರಾಜ್ಯಗಳವರೆಗೆ ಈ ಆಡಳಿತದ ವಿಶಿಷ್ಟ ಲಕ್ಷಣವಾಗಿ ಬಿಡುತ್ತಿದೆ. ತಮ್ಮ ಒಲವಿನ  ಕೆಲವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತದೆ, ಇದು ಆಡಳಿತವನ್ನು ಕಡಿಮೆ ಪಾರದರ್ಶಕವಾಗಿಸುತ್ತದೆ. ಇದರಲ್ಲಿ ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ಚೈತನ್ಯವನ್ನು ಹೊಡೆದು ಹಾಕುವ   ಮತ್ತು ಅಘೋಷಿತ ತುರ್ತು ಪರಿಸ್ಥಿತಿಯಂತಹ ಅಪಾಯಕಾರಿ ಪರಿಸ್ಥಿತಿಯ ವಾಸನೆ ಬಡಿಯುತ್ತಿದೆ. ಇದರ ಚಿಹ್ನೆಗಳು ಈಗಾಗಲೇ ಗೋಚರಿಸುತ್ತಿವೆ” ಎಂದು ದಿಲ್ಲಿ ಪತ್ರಕರ್ತರ ಸಂಘದ ಈ ಹೇಳಿಕೆ ಖೇದ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *