ಕೋವಿಡ್ ಪರಿಹಾರಕ್ಕಾಗಿ ಪ್ರತಿಭಟನಾ ಸಪ್ತಾಹ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಮಾರ್ಕ್ಸ್ವಾದಿ ಕಮ್ಯೂನಿಷ್ಟ ಪಕ್ಷ  ಪ್ರತಿಭಟನಾ ಸಪ್ತಾಹವನ್ನು ಹಮ್ಮಿಕೊಂಡಿತ್ತು. ಆಗಸ್ಟ್ 24 ರಿಂದ 29 ರವರೆ ಪ್ರತಿಭಟನಾ ಸಪ್ತಾಹ ನಡೆದಿದೆ. ದೇಶಾಧ್ಯಂತ ಒಂದು ವಾರಗಳ ಕಾಲ ನಡೆದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. 16 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೋವಿಡ್ – 19 ವೈರಾಣುವನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ವಹಿಸದೇ ಜನರ ಸಂಕಷ್ಟ ಎದುರಿಸುವಂತಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಉಡಾಫೆತನಗಳನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ. ದೇಶ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.  ಬಿಕ್ಕಟ್ಟಿನಿಂದಾಗಿ  ಇಡೀ  ದೇಶವನ್ನು ಪಾರು ಮಾಡುವ ನೀತಿಗಳ ಬದಲು ಕೇವಲ ದೊಡ್ಡ ಬಂಡವಾಳದಾರರು ಹಾಗೂ ಕಾರ್ಪೋರೇಟ್  ಕಂಪನಿಗಳ ಹಿತಗಳನ್ನು ರಕ್ಷಿಸಲು ಮುಂದಾಗುತ್ತಿದೆ ಎಂದು ಯಚೂರಿಯವರು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸಪ್ತಾಹ ಕಾರ್ಯಕ್ರಮವನ್ನು ಜನಪರ ಗಾಯಕರಾದ ಜನಾರ್ಧನ್ ರವರು ಉದ್ಘಾಟಿಸಿ ಮಾತನಾಡಿದ ಅವರು ನವಿಲಿಗೆ ಕಾಳು ಹಾಕುವ ಪ್ರಧಾನಿ ಮೋದಿಯವರಿಗೆ ದೇಶದ ಜನರ ಸಂಕಷ್ಟುಗಳು ಕಾಣುತ್ತಿಲ್ಲಎಂದು ಜನ್ನಿಯವರು ಆರೋಪಿಸಿದ್ದಾರೆ.

ದೇಶಕ್ಕೆ ಭಾರಿ ಲಾಭ ನೀಡುವ ಬಿಎಸ್ ಎನ್ ಎಲ್, ಬ್ಯಾಂಕ್, ವಿಮೆ, ರೈಲ್ವೇ, ವಿಮಾನ ನಿಲ್ದಾಣಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮ ಬೆಲೆಗೆ ದಾನ ನೀಡುತ್ತಿದೆ. ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಿದೆ. ಅಪಾಯಕಾರಿ ಸುಗ್ರಿವಾಜ್ಞೆಗಳ ಮೂಲಕ ರೈತರನ್ನು, ಕೂಲಿಕಾರರನ್ನು, ಕಾರ್ಮಿಕರನ್ನು ಬಲಿಪಶು ಮಾಡಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಪರಿಣಾಮ ನಿರುದ್ಯೋಗ ಹೆಚ್ಚಾಗುತ್ತಿದೆ. ಬಡಜನರ ಸಂಕಷ್ಟುಗಳು ಹೆಚ್ಚಾಗುತ್ತಿವೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡೆಯನ್ನು ಖಂಡಿಸಿದ್ದಾರೆ.

ರಾಮನಿಗೆ ಮಂದಿರ ಕಟ್ಟುವ ಪ್ರಧಾನಿ ಮೋ

ದಿಯವರಿಗೆ ಉರಲ್ಲಿರುವ ರಾಮನ ಹಸಿವಿನ ಕಷ್ಟ ಕಾಣುತ್ತಿಲ್ಲ ಎಂದು ದೇವದುರ್ಗದ ತಾಲ್ಲೂಕಿನ ಸಿಪಿಐಎಂ ಮುಖಂಡ ಗಿರಿಯಪ್ಪ ಪೂಜಾರಿಯವರು ಆರೋಪಿಸಿದ್ದಾರೆ.

ದಲಿತರು , ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳು, ಆತ್ಮಹತ್ಯೆಗಳು, ಹಸಿವಿನ ಸಾವುಗಳು ವ್ಯಾಪಕಗೊಳ್ಳುತ್ತಿವೆ. ಕೊರೊನಾ ಹಾಗೂ ಕೊರೊನಾದಿಂದಾಗಿ ಉಂಟಾದ ಲಾಕ್ಡೌನ್ ನಿಂದಾಗಿ ಸಂಕಷ್ಟುಗಳು ಇನ್ನಷ್ಟು ಹೆಚ್ಚಾಗಿದ್ದು ಕೂಡಲೆ ಕೇಂದ್ರ ಸರಕಾರ ಆದಾಯ ತೆರಿಗೆ ವ್ಯಾಪ್ತಿಗೆ ಬರದ  ಎಲ್ಲ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ಆರು ತಿಂಗಳ ವರೆಗೆ ತಿಂಗಳಿಗೆ ರೂ.7500 ನಗದು ವರ್ಗಾವಣೆ ಮಾಡಬೇಕು. ಮತ್ತು ಆರು ತಿಂಗಳವರೆಗೆ 10 ಕೆಜಿ ಆಹಾರಧಾನ್ಯಗಳನ್ನು ನೀಡಬೇಕು ಎಂದು ಸಿಪಿಐಎಂ ಸರಕಾರವನ್ನು ಒತ್ತಾಯಿಸಿದೆ.

ಸಾಕಷ್ಟು ಜನ ಗುಳೆ ಹೋಗುತ್ತಿದ್ದಾರೆ ಅವರಿಗೆ ಉದ್ಯೋಗ ಖಾತ್ರಿ ಕೆಲಸ ನೀಡುವ ಮೂಲಕ ಅವರ ಕುಟುಂಬಗಳನ್ನು ರಕ್ಷಣೆ ಮಾಡಬೇಕು, ಹಾಗೂ  ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸಬೇಕು ಎಂ

ದು ಸಿಪಿಐಎಂ ರಾಜ್ಯ ಮುಖಂಡರಾದ ನಿತ್ಯಾನಂದ ಸ್ವಾಮಿ ಆಗ್ರಹಿಸಿದ್ದಾರೆ.

ಕೊರೊನಾ ಹಾಗೂ ಲಾಕ್ಡೌನ್  ಸಂಕಷ್ಠದ  ಸಂದರ್ಭವನ್ನು ಬಳಸಿಕೊಂಡು ಒಡೆದಾಳುವ ನೀತಿಗಳನ್ನು ಆಳಗೊಳಿಸಲಾಗುತ್ತಿದೆ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ರಾಜ್ಯ ಸರಕಾರಗಳ ಮತ್ತು ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳ ಹಕ್ಕುಗಳನ್ನು ದಮನ ಮಾಡಿ, ಸರ್ವಾಧಿಕಾರಗಳನ್ನು ಹೇರಲಾಗುತ್ತಿದೆ. ಪ್ರಧಾನ ಮಂತ್ರಿಗಳ ಖಾಸಗಿ ಹೆಸರಿನಲ್ಲಿರುವ ಪಿಎಂ ಕೇರ್ಸ್ ನಿಧಿಯನ್ನು  ಕೊರೊನಾ ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಿಗೆ ನೀಡಬೇಕು ಎಂದು ಸಿಪಿಐಎಂ ಪ್ರತಿಭಟನಾ ವಾರಾಚರಣೆ ನಡೆಸುವ ಮೂಲಕ 16 ಬೇಡಿಕೆಗಳನ್ನು ಈಡೇರಿಸಲು ಆಗ್ರಹವನ್ನು ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *