ಯಾದಗಿರಿ: ನೆರೆಯ ಮಹಾರಾಷ್ಟ್ರದಿಂದ ಆಗಮಿಸುವವರೇ ಗಡಿ ಜಿಲ್ಲೆಗೆ ಕಂಟಕವಾಗುತ್ತಿದ್ದು, ಆಗ ಕೊರೊನಾ ಹರಡಲು ಕಾರಣವಾಗಿದ್ದವರು ಈಗ ಡೆಲ್ಟಾ ವೈರಸ್ ವ್ಯಾಪಿಸುಲು ಕಾರಣವಾಗುತ್ತಾರಾ ಎನ್ನುವ ಆತಂಕ ಎದುರಾಗಿದೆ.
ರಾಜ್ಯ ಸರ್ಕಾರ ಮಹಾರಾಷ್ಟ್ರ ದಿಂದ ಆಗಮಿಸುವ ವರಿಗೆ ಕಡ್ಡಾಯವಾಗಿ 72ಗಂಟೆಯೊಳಗಿನ ಕೋವಿಡ್ ಪರೀಕ್ಷಾ ನೆಗೆಟಿವ್ ವರದಿ ಇದ್ದರೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಮಾರ್ಗಸೂಚಿ ಹೋರಾಡಿಸಿದ್ದು, ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ವೇಳೆ ಪ್ರಯಾಣಿಕರು ಕಾಂಪೌಂಡ್ ಗೋಡೆ ಹಾರಿ ಎಸ್ಕೇಪ್ ಆಗುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಮಾತು ಕೇಳಿಬರುತ್ತಿದೆ.