ಕೋಲ್ಕತಾ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆಯಿಂದ ಗಾಬರಿ ಮತ್ತು ಆತಂಕ ಉಂಟಾಗಿದೆ. ಇನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ಹೇಳಿದ್ದಾರೆ.
ಕೋಲ್ಕತಾ ಘಟನೆ ನಡೆದು 20 ದಿನಗಳ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ ರಾಷ್ಟ್ರಪತಿ, ನಮ್ಮ ಮಕ್ಕಳು ಮತ್ತು ಸೋದರಿಯರ ಮೇಲಿನ ದೌರ್ಜನ್ಯಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ಮಹಿಳೆಯರನ್ನು ಮನುಷ್ಯರು ಎಂದು ಪರಿಗಣಿಸ ಮನಸ್ಥಿತಿಯಿಂದಾಗಿ ಈ ಹೀನಾಯ ಕೃತ್ಯಗಳು ನಡೆಯುತ್ತಿವೆ. ಮಹಿಳೆಯರು ಭೋಗದ ವಸ್ತು, ಕಡಿಮೆ ತಿಳುವಳಿಕೆ ಹಾಗೂ ಕಡಿಮೆ ವಿದ್ಯಾವಂತೆ ಎಂದು ಪರಿಣಗಿಸುತ್ತಿರುವುದು ಸಮಾಜದ ದುರ್ದೈವ ಎಂದು ದ್ರೌಪದಿ ಮರ್ಮು ವಿಷಾದಿಸಿದ್ದಾರೆ.
ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ನಡೆದ ದಾಳಿ ಕೇವಲ ಘಟನೆಯಲ್ಲ. ಇದೊಂದು ಅಪರಾಧ ಪ್ರಕರಣ. ಇದೊಂದು ಸಂಘಟಿತ ಕೃತ್ಯ ಎಂದು ಅವರು ಬಣ್ಣಿಸಿದ್ದಾರೆ.