– ಡಬ್ಲ್ಯೂಎಚ್ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ ವಿಶ್ವಾಸ
ಜಿನೀವಾ: ಕೊರೊನಾ ಸಾಂಕ್ರಾಮಿಕ ಮಹಾಮಾರಿ ರೋಗವನ್ನು ಎರಡು ವರ್ಷಗಳಿಗಿಂತ ಮುಂಚೆಯೇ ಕೊನೆಗಾಣಿಸಬಹುದು ಎಂಬ ಆಶಯ ನಮಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಫೆಬ್ರೆಯೆಸಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿನೀವಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯೂ ಎಚ್ ಒ) ಪ್ರಧಾನ ಕಚೇರಿಯಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1918 ರ ಮಾರಕ ಸ್ಪ್ಯಾನಿಷ್ ಪ್ಲೂ’ ಸಾಂಕ್ರಾಮಿಕ ರೋಗ ಕ್ಕಿಂತ ವೇಗವಾಗಿ ಈ ಕೊರೊನಾ ವೈರಸ್ ಅನ್ನು ಪಳಗಿಸಲು ಸಾಧ್ಯವಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಆಗಿನ ಸ್ಪ್ಯಾನಿಷ್ ಜ್ವರದೊಂದಿಗೆ ಹೋಲಿಸಿದರೆ, ಪ್ರಪಂಚವು ಇಂದು’ ಜಾಗತೀಕರಣದ ಪರಿಣಾಮ, ಮುಕ್ತ ಮಾರುಕಟ್ಟೆ, ನಿಕಟತೆ ಮತ್ತು ಹೆಚ್ಚು ಸಂಪರ್ಕ ‘ ದಿಂದಾಗಿ ಅನನುಕೂಲ ಉಂಟಾಗಿದೆ. ಇದರಿಂದಾಗಿಯೇ ಕೊರೊನಾ ವೈರಸ್ ಮಿಂಚಿನ ವೇಗದಲ್ಲಿ ಜಗತ್ತಿನಾದ್ಯಂತ ಹರಡಲು ಅನುವು ಮಾಡಿಕೊಟ್ಟಿದೆ ಎಂದು ಟೆಡ್ರೊಸ್ ಹೇಳಿದ್ದಾರೆ.
ಅವರು, ಈ ಮೂಲಕ ಪರೋಕ್ಷವಾಗಿ ಜಾಗತೀಕರಣದಿಂದಾಗಿ, ಖಾಸಗಿ ಆರೋಗ್ಯ ವ್ಯವಸ್ಥೆಯ ವಿಫಲತೆ ಯನ್ನು ಪ್ರಸ್ತಾಪಿಸಿದ್ದಾರೆ.
ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯುವುಲ್ಲಿ ಕೆಲವು ಪ್ರಬಲ ರಾಷ್ಟ್ರಗಳು, ಆರೋಗ್ಯ ಸಂರಕ್ಷಣೆಯ ಕಡೆ ಹೆಚ್ಚು ಗಮನ ಹರಿಸದಿರುವುದನ್ನು ಇಲ್ಲಿ ಉಲ್ಲೇಖಿಸ ಬಹುದು.
ಆದಾಗ್ಯೂ, ಇದೀಗ ಲಭ್ಯವಿರುವ ಪರಿಕರಗಳನ್ನು ಗರಿಷ್ಠವಾಗಿ ಬಳಸುವುದರ ಮೂಲಕ ಮತ್ತು ಲಸಿಕೆ ಗಳಂತಹ ಹೆಚ್ಚುವರಿ ಸಾಧನಗಳನ್ನು ನಾವು ಆದಷ್ಟು ಬೇಗ ಹೊಂದಬಹುದು ಎಂದು ಟೆಡ್ರೊಸ್ ಆಶಿಸಿದ್ದಾರೆ.
ಕೋವಿಡ್-19 ಇಲ್ಲಿವರೆಗೂ, ಸುಮಾರು 8,00,000 ಜನರನ್ನು ವಿಶ್ವದಾದ್ಯಂತ ಬಲಿ ತೆಗೆದುಕೊಂಡಿದೆ ಮತ್ತು 2.3 ಕೋಟಿ ಜನರು ಸೋಂಕಿಗೆ ಒಳಗಾಗಿದ್ದಾರೆ. ಆದರೆ, ಇತಿಹಾಸದಲ್ಲಿನ ಅತ್ಯಂತ ಮಾರಕ ಸಾಂಕ್ರಾಮಿಕ ಸ್ಪ್ಯಾನಿಷ್ ಜ್ವರವು ‘ ಪೆಬ್ರವರಿ 1918 ರಿಂದ ಏಪ್ರಿಲ್ 2020’ ರ ಕಾಲಾವಧಿಯ ನಡುವೆ ಸುಮಾರು 5 ಕೋಟಿಗೂ ಹೆಚ್ಚು ಜನರನ್ನು ಬಲಿ ತೆಗೆದು ಕೊಂಡಿದೆ. ವಿಶ್ವಾದ್ಯಂತ ಸುಮಾರು 50 ಕೋಟಿ ಜನರಿಗೆ ಸೋಂಕು ತಗುಲಿತ್ತು ಎಂದು ಎ ಎಫ್ ಪಿ ಸಂಗ್ರಹಿಸಿದ್ದ ಅಧಿಕೃತ ಮೂಲಗಳನ್ನು ವಿವರಿಸಿದರು.