ಕೇರಳ | ದೋಣಿಯಲ್ಲೇ ಚಹಾ ಅಂಗಡಿ ತೆರೆದ ‘ಚಾಯಾ ಚೇಚಿ : ನೆಟ್ಟಿಗರು ಮೆಚ್ಚುಗೆ

ಕೇರಳ: ಸ್ಥಳೀಯವಾಗಿ ‘ಚಾಯಾ ಚೇಚಿ’ (ಚಹಾ ನೀಡುವ ಅಕ್ಕಾ) ಎಂದೇ ಜನಪ್ರಿಯರಾಗಿರುವ ಈ ವೃದ್ಧೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಕುಮಾರಕೊಂ ಎನ್ನುವ ಸ್ಥಳದಲ್ಲಿ ವೃದ್ಧೆಯೊಬ್ಬರು ದೋಣಿಯಲ್ಲಿ ಅಂಗಡಿ ತೆರೆದು ಮಸಾಲಾ ಚಹಾ ಮಾರುತ್ತಿರುವುದು ಪ್ರವಾಸಿಗರ ಗಮನ ಸೆಳೆದಿದೆ.

ಇದನ್ನೂ ಓದಿ : ಕಾಗದದ ಮೇಲೆ ಮಕ್ಕಳಿಗೆ ಊಟ; ಟೀಕೆಗೆ ಗುರಿಯಾಗುತ್ತಿದ್ದಂತೆ ಸ್ಟೀಲ್ ಪ್ಲೇಟ್‌ ವಿತರಣೆ

ಇನ್‌ಸ್ಟಾಗ್ರಾಂನಲ್ಲಿ ರನಾವತ್ ಎನ್ನುವವರು ವೃದ್ಧೆಯ ವಿಡಿಯೊ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತೇಲುವ ದೋಣಿಯಲ್ಲಿ ತಾಮ್ರದ ಪಾತ್ರೆಯಲ್ಲಿ ಚಹಾ ಇಟ್ಟುಕೊಂಡು ಗಾಜಿನ ಲೋಟಗಳಿಗೆ ಬಿಸಿ ಬಿಸಿ ಚಹಾ ಹಾಕುತ್ತಿರುವ ದೃಶ್ಯವಿದೆ.

ವಿಡಿಯೊ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.‘ಸ್ಟಾರ್‌ಬಕ್ಸ್‌ಗಳಲ್ಲಿ ಕುಳಿತು ಚಹಾ ಹೀರುವವರಿಗೆ ಈ ರೀತಿಯ ಜಾಗದಲ್ಲಿ ಚಹಾ ಕುಡಿಯುವುದು ವಿಶೇಷವಾಗಿಯೇ ಎನಿಸುತ್ತದೆ’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, ‘ಕನಸುಗಳು ಇದರಿಂದಲೇ ರೂಪುಗೊಳ್ಳುತ್ತವೆ’ ಎಂದಿದ್ದಾರೆ.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *