ಬೆಂಗಳೂರು : ಕೃಷಿ ಕಾಯ್ದೆ ರದ್ದಿಗಾಗಿ ದೇಶವ್ಯಾಪಿ ನಡೆಯುತ್ತಿರುವ ಭಾರತ್ ಬಂದ್ ಗೆ ಎಂ.ಎಸ್.ಸತ್ಯು, ಡಾ.ಕೆ.ಮರುಳಸಿದ್ದಪ್ಪ, ಡಾ.ವಿಜಯ, ದೇವನೂರು ಮಹದೇವ, ಬೋಳುವಾರು ಮಹ್ಮದ್ ಕುಂಞ, ಡಾ.ಎಸ್.ಜಿ.ಸಿದ್ದರಾಮಯ್ಯ, ಡಾ.ಪುರುಷೋತ್ತಮ್ ಬಿಳಿಮಲೆ, ಡಾ.ರಾಜೇಂದ್ರ ಚೆನ್ನಿ, ಡಾ.ಗಣೇಶ್ ದೇವಿ, ಎಸ್.ಜಿ.ವಾಸುದೇವ್, ನಾಗೇಶ್ ಹೆಗಡೆ ಸೇರಿದಂತೆ 100ಕ್ಕೂ ಹೆಚ್ಚು ಸಾಹಿತಿ, ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ಸಮುದಾಯ ಕರ್ನಾಟಕ – ಬಂಡಾಯ ಸಾಹಿತ್ಯ ಸಂಘಟನೆ, ಸಮಕಾಲೀನರು, ಇಪ್ಟಾ ಬೆಂಬಲವನ್ನು ಘೋಷಿಸಿದ್ದಾರೆ. ಇತರರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಮನವಿ ಸಾರಾಂಶ ಈ ಕೆಳಗಿನಂತಿದೆ.
ದೇಶದ ರಾಜಧಾನಿಯ ಗಡಿಗಳಲ್ಲಿ ಕಳೆದ 10 ತಿಂಗಳಿನಿಂದ ಅನ್ನದಾತರು ಕೃಷಿಕಾಯ್ದೆಗಳ ತಿದ್ದುಪಡಿಯನ್ನು ವಾಪಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ದೇಶವ್ಯಾಪೀ ಮನವಿ, ಹೋರಾಟಗಳ ಮೂಲಕ ಮಾಡಿದ ಪ್ರತಿರೋಧವನ್ನು ಲೆಕ್ಕಿಸದೇ, ಕೇಂದ್ರ ಸರಕಾರವು ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಸುಗ್ರೀವಾಜ್ಞೆಯ ಮೂಲಕ ತಂದ ಕೃಷಿ ಕಾಯಿದೆಗಳು, ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳ ಕೈವಶ ಮಾಡುವ ಪ್ರಯತ್ನ ಎಂಬುದು ನಿಚ್ಚಳವಾಗಿದೆ. ಇದನ್ನು ವಿರೋಧಿಸಿ ರೈತ ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆಗೆ ಬೆಂಬಲಾರ್ಥವಾಗಿ ಸೆಪ್ಟೆಂಬರ್ 27, 2021ರಂದು ರಾಷ್ಟ್ರವ್ಯಾಪೀ ಪ್ರತಿಭಟನೆಗೆ ಗೆ ಕರೆ ನೀಡಲಾಗಿದೆ. ಇದು ಕೇವಲ ರೈತರ ಬೇಡಿಕೆ ಅಲ್ಲ, ಬದಲಿಗೆ ದೇಶದ ಎಲ್ಲ ಜನರ ಅನ್ನದ ಬಟ್ಟಲಿಗೆ ಕನ್ನ ಹಾಕುವ ಪ್ರಯತ್ನದ ವಿರುದ್ಧದ ಹೋರಾಟ ಎಂಬುದು ನಮಗೆಲ್ಲರಿಗೂ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಪ್ರಮುಖ ಕಾರಣಗಳಿಗಾಗಿ ನಾವು ಅನ್ನದಾತರ ಬೇಡಿಕೆಯ ಈಡೇರಿಕೆಗೆ ನಮ್ಮ ಧ್ವನಿಯನ್ನು ಸೇರಿಸುತ್ತಿದ್ದೇವೆ.
ಕೃಷಿ ಕಾಯ್ದೆಗಳ ಜೊತೆಯೇ ಏ.ಪಿ.ಎಂ.ಸಿ, ವಿದ್ಯುತ್, ಕಾರ್ಮಿಕ ಕಾಯ್ದೆಗಳು, ನೂತನ ಶಿಕ್ಷಣ ನೀತಿ, ಇವೆಲ್ಲವೂ ಖಾಸಗೀ ಉದ್ಯಮಪತಿಗಳನ್ನು ಬಲಗೊಳಿಸಿ ಸಾಮಾನ್ಯ ಜನರನ್ನು ದುರ್ಬಲಗೊಳಿಸುವ ಭಾರತ ಸರಕಾರದ ನೀತಿಯ ಸ್ಪಷ್ಟ ಉದಾಹರಣೆಗಳಾಗಿವೆ. ಇನ್ನೊಂದೆಡೆ ದುಡಿಮೆ ಮೂಲದ ಶ್ರಮಿಕ ಜನರನ್ನು ಗತಿಹೀನತೆಗೆ ತಳ್ಳುತ್ತಿದೆ. ಕಳೆದ ಏಳು ವರ್ಷಗಳ ಆಡಳಿತದಲ್ಲಿ ದುಡಿಯುವ ಜನತೆ ಸರಿಸುಮಾರು ನೂರು ವರ್ಷಗಳ ಹೋರಾಟದಿಂದ ಗಳಿಸಿಕೊಂಡ ಮಾನವಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ.ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ.
ಭಿನ್ನಾಭಿಪ್ರಾಯ ಹೊಂದಿದ ಬುದ್ಧಿಜೀವಿಗಳನ್ನು ಮಾಧ್ಯಮದವರನ್ನು ಜೈಲಿಗೆ ತಳ್ಳಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಆಶಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸೌಹಾರ್ದತೆ, ಮಾನವ ಘನತೆ, ಮಾನವಹಕ್ಕುಗಳು ಮತ್ತು ಅವುಗಳ ಗುರುತಾದ ಭಾರತ ಸಂವಿಧಾನದ ಮೇಲೆ ದಾಳಿ ನಡೆಸಲಾಗುತ್ತಿದೆ.
ಅಲ್ಪ ಸಂಖ್ಯಾತರು ಅದರಲ್ಲೂ ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರ ಮೇಲಿನ ದಾಳಿಗಳು ಈಗಿನ ಕೇಂದ್ರಾಡಳಿತದ ಅವಧಿಯಲ್ಲಿ ಹೆಚ್ಚುತ್ತಿವೆ. ಹಿಂದೂತ್ವ ಕೋಮುವಾದವನ್ನು ಎತ್ತಿಹಿಡಿಯುವ ಕೇಂದ್ರದ ನೀತಿಗಳು ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿಯೂ ದೇಶದ್ರೋಹಿಗಳನ್ನಾಗಿಯೂ ನಿರೂಪಿಸುತ್ತಿವೆ. ಅದೇ ವೇಳೆಯಲ್ಲಿ ಜಾಗತೀಕರಣವನ್ನು ಪೋಷಿಸುತ್ತಾ, ಸಾಮ್ರಾಜ್ಯಶಾಹಿ ಅಮೇರಿಕಾದ ಪರಿಚಾರಕರಂತೆಯೂ, ಆಯ್ದ ಬಂಡವಾಳಶಾಹಿಗಳ ಆಪ್ತಮಿತ್ರನಂತೆಯೂ ವರ್ತಿಸುತ್ತಿದೆ.
ನಮ್ಮ ಪ್ರಜಾಪ್ರಭುತ್ವ ಫ್ಯಾಸೀವಾದದ ಕಡೆಗೆ ಹೆಜ್ಜೆಯಿರಿಸುವುದನ್ನು ನಾವು-ಸಾಹಿತಿ ಕಲಾವಿದರು ಸಾಂಸ್ಕೃತಿಕ ಕಾರ್ಯಕರ್ತರು-ಗುರುತಿಸುತ್ತಿದ್ದೇವೆ. ಪ್ರಭುತ್ವದ ದಬ್ಬಾಳಿಕೆಯನ್ನು ಗುರುತಿಸಿ ರೈತರು, ಕಾರ್ಮಿಕರು, ದುಡಿಮೆಗಾರರು ಹೋರಾಟದ ಕಣದಲ್ಲಿದ್ದಾರೆ.. ಈ ದಬ್ಬಾಳಿಕೆಯನ್ನು ಎದುರಿಸಿ ಸೋಲಿಸದಿದ್ದರೆ ಜನತೆಗೆ ಉಳಿಗಾಲವಿಲ್ಲ ಎಂದು ದೇಶವನ್ನು ಎಚ್ಚರಿಸುತ್ತಿದ್ದಾರೆ. ಅವರ ಹೋರಾಟ ಕೇವಲ ಅವರ ಆರ್ಥಿಕ ಬೇಡಿಕೆಯ ಹೋರಾಟ ಮಾತ್ರವಾಗಿರದೇ ರಾಜಕೀಯ ಪರಿವರ್ತನೆಯ ಹೋರಾಟವಾಗುವ ಸೂಚನೆಗಳು ಕಾಣುತ್ತಿವೆ.
ಸಾಂಸ್ಕೃತಿಕ ರಂಗದ ಕಾರ್ಯಕರ್ತರಾದ, ಸಾಹಿತಿ,ಕಲಾವಿದರು ಶಿಕ್ಷಕರು, ಮಾಧ್ಯಮದವರ ಅಸ್ತಿತ್ವವೂ, ನಮ್ಮ ರೈತಾಪಿ ಮತ್ತು ದುಡಿಯುವ ವರ್ಗದ ಉಳಿವಿನಲ್ಲಿದೆ. ಅವರು ಸೋತದ್ದೇ ಆದರೆ, ಅದು ನಮ್ಮ ಹಾಗೂ ಜನ ಸಂಸ್ಕೃತಿಯ ಸೋಲಾಗುವುದು.
ಈ ನಿಟ್ಟಿನಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ರಾಜ್ಯದಲ್ಲಿ ಸೆಪ್ಟೆಂಬರ್ 27, 2021 ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ನಾವು, ಕರ್ನಾಟಕ ರಾಜ್ಯದ ಸಾಹಿತಿ ಕಲಾವಿದರು ಸಾಂಸ್ಕೃತಿಕ ಸಂಘಟನೆಗಳು ನಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತಿದ್ದೇವೆ.
ಬೆಂಬಲ ಪತ್ರಕ್ಕೆ ಸಮ್ಮತಿ ಸೂಚಿಸಿದವರು:
1. ಎಂ.ಎಸ್.ಸತ್ಯು,
2. ಡಾ.ಕೆ.ಮರುಳಸಿದ್ದಪ್ಪ,
3. ಡಾ.ವಿಜಯ,
4. ಡಾ.ಎಸ್.ಜಿ.ಸಿದ್ದರಾಮಯ್ಯ,
5. ಡಾ.ಪುರುಷೋತ್ತಮ್ ಬಿಳಿಮಲೆ,
6. ಡಾ.ರಾಜೇಂದ್ರ ಚೆನ್ನಿ,
7. ಡಾ.ಗಣೇಶ್ ದೇವಿ,
8. ದೇವನೂರು ಮಹದೇವ,
9. ಬೋಳುವಾರು ಮಹ್ಮದ್ ಕುಂಞ,
10. ಎಸ್.ಜಿ.ವಾಸುದೇವ್,
11. ನಾಗೇಶ್ ಹೆಗಡೆ,
12. ಅಗ್ರಹಾರ ಕೃಷ್ಣಮೂರ್ತಿ,
13. ಟಿ.ವೆಂಕಟೇಶ ಮೂರ್ತಿ,
14. ಸಿ. ಬಸವಲಿಂಗಯ್ಯ,
15. ಶಂಕರ ಹಲಗತ್ತಿ
16. ಡಾ.ದುರ್ಗಾದಾಸ್,
17. ವಿಷ್ಣು ನಾಯಕ್,
18. ಶಾಂತಾರಾA ನಾಯಕ ಹಿಚ್ಕಡ,
19. ಡಾ.ಎಂ.ಜಿ.ಹೆಗಡೆ,
20. ಲಕ್ಷ್ಮೀಪತಿ ಕೋಲಾರ,
21. ಡಾ.ಕೆ.ಷರೀಫಾ
22. ಡಾ.ವಸುಂಧರಾ ಭೂಪತಿ,
23. ಎಂ.ಡಿ.ಪಲ್ಲವಿ,
24. ಚಿದಂಬರ ರಾವ್ ಜಂಬೆ,
25. ಎಸ್.ಆರ್.ಹಿರೇಮಠ,
26. ಡಾ. ಕಾಶಿನಾಥ ಅಂಬಲಗಿ,
27. ಜನಾಧನ್ (ಜೆನ್ನಿ),
28. ಬಿ.ಸುರೇಶ್,
29. ಡಾ.ರಹಮತ್ ತರಿಕೆರೆ,
30. ಡಾ.ಪ್ರಭು ಖಾನಾಪುರೆ,
31. ಕೆ.ನೀಲಾ,
32. ಬಸವರಾಜ ಸಬರದ,
33. ಆರ್.ಕೆ.ಹುಡಗಿ,
34. ಪಿಚ್ಚಳ್ಳಿ ಶ್ರೀನಿವಾಸ್,
35. ಡಾ. ಡಾ.ಚಂದ್ರ ಪೂಜಾರಿ,
36. ನರೇಂದ್ರ ನಾಯಕ,
37. ಚಂದ್ರಶೇಖರ ನಂಗಲಿ,
38. ಡಾ.ಕೇಶವಶರ್ಮಾ,
39. ಎಸ್.ಆರ್.ರಮೇಶ್,
40. ಪ್ರೊ.ಪಂಡಿತಾರಾಧ್ಯ,
41. ಪ್ರೊ.ವಾಸುದೇವನ್.ಕೆ.ಪಿ,
42. ಸಿ.ಕೆ.ಗುಂಡಣ್ಣ,
43. ಶ್ರೀನಿವಾಸ್ ಜಿ.ಕಪ್ಪಣ್ಣ,
44. ಶಶಿಧರ್ ಬಾರಿಘಾಟ್,
45. ಪ್ರೊ.ಲಕ್ಷ್ಮೀ ನಾರಾಯಣ,
46. ಕೆ.ಫಣಿರಾಜ್,
47. ಡಿ.ಉಮಾಪತಿ,
48. ಎನ್.ಆರ್.ವಿಶುಕುಮಾರ್,
49. ಕೆ.ಪಿ.ಲಕ್ಷ್ಮಣ್
50. ಸುರೇಂದ್ರನಾಥ್,
51. ಅಭಿಷೇಕ್ ಮುಜುಂದಾರ್,
52. ಡಾ.ರಂಗಾರೆಡ್ಡಿ ಕೊಡಿರಾಂಪುರ,
53. ಡಾ.ಕೇಶವ ಶರ್ಮಾ,
54. ಡಾ,ಬಂಜಗೆರೆ ಜಯಪ್ರಕಾಶ್
55. ಬಿ.ಗಂಗಾಧರ್ ಮೂರ್ತಿ,
56. ಡಾ.ಜಯಪ್ರಕಾಶ್ ಗೌಡ,
57. ನಗರಗೆರೆ ರಮೇಶ್,
58. ಕೇಸರಿ ಹರವೂ,
59. ಜೆ.ಲೋಕೇಶ್,
60. ಬಿ.ಶ್ರೀಪಾದ ಭಟ್,
61. ಮುಕುಂದ ರಾಜ್,
62. ಡಾ.ಬಿ.ಆರ್.ಮಂಜುನಾಥ್,
63. ಡಾ.ಇಸಬೆಲ್ಲಾ ಕ್ಸೇವಿಯರ್,
64. ಶಾರದಾ ದಾಬಡೆ,
65. ಡಾ.ಎಚ್.ಜಿ.ಜಯಲಕ್ಷಿö್ಮ,
66. ಪ್ರಕಾಶ್ ಅರಸ್,
67. ಚಂದ್ರಪ್ಪ ಹೆಬ್ಬಾಳ್ಕರ್,
68. ಶಂಭುಲಿಂಗ ವಾಲ್ದೊಡ್ಡಿ,
69. ನಾಗೇಶ್ ಅರಳಕುಪ್ಪೆ,
70. ಸಂಧ್ಯಾ ಹೊನಗುಂಟಿಕರ್,
71. ಡಾ.ಸಂಧ್ಯಾ ರೆಡ್ಡಿ,
72. ಹುರಗಲವಾಡಿ ರಾಮಯ್ಯ,
73. ಪೀರ್‌ಬಾಷ ಕಾರಟಗಿ,
74. ಜಗದೀಶ್ ಕೊಪ್ಪ,
75. ಪ್ರೊ.ಜಿ.ಟಿ.ವೀರಪ್ಪ,
76. ಡಾ.ಎನ್.ಗಾಯತ್ರಿ,
77. ರಾಜೇಂದ್ರ ಪ್ರಸಾದ್,
78. ಸಿ.ಕೆ.ರಾಮೇಗೌಡ,
79. ಅಲ್ಲಮಪ್ರಭು ಬೆಟ್ಟದೂರು,
80. ಪ್ರಭುಗೌಡ ಪಾಟೀಲ್,
81. ಡಾ.ಲೀಲಾ ಅಪ್ಪಾಜಿ,
82. ಡಿ.ಎಚ್.ಕಂಬ್ಳಿ,
83. ವೀರಹನುಮಾನ್,
84. ರಮೇಶ್ ಬದನೂರ್,
85. ಡಾ.ವಿನೋದ್‌ಕುಮಾರ್,
86. ಡಾ.ರೇವತಿ,
87. ಸ.ರಘುನಾಥ್,
88. ಸೋಮವರದ,
89. ಡಾ.ಲೀಲಾ ಸಂಪಿಗೆ,
90. ಡಾ.ಇಂದಿರಾ ಹೆಗ್ಡೆ,
91. ಡಾ.ಬಿ.ಶ್ರೀನಿವಾಸ ಕಕ್ಕಿಲಾಯ,
92. ಚಂದ್ರಕಲಾ ನಂದಾವರ
93. ಎಚ್.ಪಟ್ಟಾಭಿರಾಮ ಸೋಮಾಯಾಜಿ,
94. ಹಾ.ಮ.ರಾಮಚಂದ್ರ,
95. ಕೆ.ಆರ್.ಸುಮತಿ,
96. ಅಚ್ಯುತ,
97. ಎಸ್.ದೇವೇಂದ್ರಗೌಡ,
98. ಜೆ.ಸಿ.ಶಶಿಧರ್,
99. ಬಿ.ಐ.ಇಳಿಗೆರ್,
100. ವಾಸುದೇವ್ ಉಚ್ಚಿಲ್,
100.ಶಶಿಕಾಂತ ಯಡಹಳ್ಳಿ,
101. ಗೌರಿ ದತ್ತು,
102. ಯಮುನಾ ಗಾಂವ್ಕರ್
103. ಸುಜಾತ,
104. ಕಿರಣ್ ಭಟ್,
105. ಟಿ.ಸುರೇಂದ್ರರಾವ್,
106. ವಿಮಲಾ.ಕೆ.ಎಸ್,
ಸಮುದಾಯ ಕರ್ನಾಟಕ – ಬಂಡಾಯ ಸಾಹಿತ್ಯ ಸಂಘಟನೆ – ಸಮಕಾಲೀನರು – ಇಪ್ಟಾ