ಕಾರವಾರ: ಶಿಕ್ಷಕರ ಪ್ರೀತಿ ವಿಶ್ವಾಸವನ್ನು ನೆನಪಿಟ್ಟುಕೊಂಡು ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿದ್ದೇನೆ’ ನಾನು ಏನೆ ತಪ್ಪು ಮಾಡಿದರೂ ಶಿಕ್ಷಕರಿಗೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಎಚ್ಚರಿಕೆಯಿಂದ ಹೇಜ್ಜೆಯಿಟ್ಟು ಕೆಲಸ ನಿರ್ವಹಿಸಿದ್ದೆನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇದನ್ನೂ ಓದಿ : ನವದೆಹಲಿ | ಗೋದಾವರಿ–ಕಾವೇರಿ ನದಿ ಜೋಡಣೆ :ಹೆಚ್ಚುವರಿ 5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ
ಇಲ್ಲಿನ ಶಿವಾಜಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಸಭೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಕರು ದಾರಿ ತಪ್ಪಿದರೆ ಸಮಾಜ ದಾರಿ ತಪ್ಪುತ್ತದೆ. ಶಿಕ್ಷಕರ ಪ್ರತಿನಿಧಿಯಾಗಿರುವ ಕಾರಣದಿಂದಲೇ ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡುತ್ತಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಶಿಕ್ಷಣ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಈಶ್ವರ ನಾಯ್ಕ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಡಿಡಿಪಿಐ ಲತಾ ನಾಯಕ, ಬಿಇಓ ಉಮೇಶ ನಾಯ್ಕ, ಉಡುಪಿಯ ಟೀಚರ್ ಕೋ-ಆಪರೇಟವ್ ಸೊಸೈಟಿ ಅಧ್ಯಕ್ಷ ದಿನಕರ ಶೆಟ್ಟಿ ಪಾಲ್ಗೊಂಡಿದ್ದರು.
ಇದನ್ನೂ ನೋಡಿ : ‘ಮರ್ಯಾದೆಗೇಡು ಹತ್ಯೆ’ ಮರ್ಯಾದೆ ಉಳಿಸಿಕೊಳ್ಳಲಿ ಸರ್ಕಾರ!? ಕೆ.ಎಸ್.ವಿಮಲಾ, ಗುರುರಾಜ ದೇಸಾಯಿ ಮಾತುಕತೆ Janashakthi
