ಕಾಂಗ್ರೆಸ್ ಶಾಸಕರಿಗೆ 60 ಕೋಟಿ ರೂ. ಆಮೀಷ: ಶಾಸಕ ರವಿ ಗಣಿಗ ಗಂಭೀರ ಆರೋಪ

ಬಿಜೆಪಿಯಲ್ಲಿ ಇರುವ ಕೆಲವು ಬ್ರೋಕರ್ ಗಳು ಕಾಂಗ್ರೆಸ್ ಶಾಸಕರನ್ನು ಸೆಳೆಯಲು 60 ಕೋಟಿ ರೂ ಆಮೀಷವೊಡ್ಡುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಕಾಂಗ್ರೆಸ್ ಶಾಸಕರಿಗೆ ಆಮೀಷವೊಡುತ್ತಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳಿವೆ ಎಂದರು.

ಬಿಜೆಪಿಯಲ್ಲಿ ಕೆಲವು ಬ್ರೋಕರ್ ಗಳಿದ್ದಾರೆ. ಅವರು ಸರ್ಕಾರ ಬೀಳಿಸುವುದೇ ಕೆಲಸ. ಆ ಬ್ರೋಕರ್ ಗಳು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ತೆಪ್ಪಗೆ ಇರಬೇಕು. ಅದು ಬಿಟ್ಟು ಇಲ್ಲದೇ ಇರುವುದನ್ನು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕರಿಗೆ 60 ಕೋಟಿ ರೂ. ಆಮೀಷವೊಡ್ಡಲಾಗುತ್ತಿದೆ. 30 ಕೋಟಿ ರೂ. ಕೈಗೆ ಮತ್ತು 30 ಕೋಟಿ ರೂ. ಚುನಾವಣಾ ವೆಚ್ಚಕ್ಕಾಗಿ ನೀಡುವುದಾಗಿ ಆಮೀಷವೊಡ್ಡಲಾಗಿದೆ. ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳಿವೆ. ಸಮಯ ಬಂದಾಗ ಈ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *