ಕಪಟತನದ ಒಂದು ಕಸರತ್ತು

ಸೀತಾರಾಮ್ ಯೆಚೂರಿ

ಚುನಾವಣೆ ಸಮೀಪ ಬರುತ್ತಿರುವಂತೆ, ದೇಶ ಯುಪಿಎ ಆಳ್ವಿಕೆಯಲ್ಲಿ ಮಹಾ ಪ್ರಗತಿ ಸಾಧಿಸಿದೆ, ಬಡ ಮತ್ತು ಅಂಚಿನಲ್ಲಿರುವ ಜನಗಳಿಗೆ ಇದರಿಂದ ಪ್ರಯೋಜನವಾಗಿದೆ ಎಂದು ತೋರಿಸುವ ವಂಚಕ ಕಸರತ್ತುಗಳು ಹೆಚ್ಚುತ್ತಲೇ ಇವೆ. ಯೋಜನಾ ಆಯೋಗ ದೇಶದಲ್ಲಿ ಬಡತನದ ಮಟ್ಟಗಳ ಇತ್ತೀಚಿನ ಅಂದಾಜುಗಳನ್ನು ಕೊಡಮಾಡಿರುವುದು ಇಂತಹುದೇ ಒಂದು ಕಸರತ್ತು. ಇದು ಚುನಾವಣಾ ಪ್ರತಿಫಲ ನೀಡಬಹುದೆಂಬುದು ಅವರ ಲೆಕ್ಕಾಚಾರ. ಸರಕಾರ ಕೊಡುವ ಅಂಕಿ-ಅಂಶಗಳೆಂದರೆ ಸುಳ್ಳುಗಳನ್ನಷ್ಟೇ ಅಲ್ಲ, ಹಸಿ ಸುಳ್ಳುಗಳನ್ನೂ ಮೀರಿದವುಗಳು ಎಂದು ಜನಜನಿತವಾಗಿರುವ ಮಾತನ್ನು ಮತ್ತೊಮ್ಮೆ ದೃಢೀಕರಿಸಿದೆ.

poverty line9

ಯೋಜನಾ ಆಯೋಗದ ಪ್ರಕಾರ, ತೆಂಡುಲ್ಕರ್ ವಿಧಾನವನ್ನು ಬಳಸಿ ಲೆಕ್ಕ ಹಾಕಲಾದ ರಾಷ್ಟ್ರೀಯ ಬಡತನ ರೇಖೆ 2011-12ರಲ್ಲಿ ನಗರಗಳಲ್ಲಿ ರೂ.33.33 ಮತ್ತು ಹಳ್ಳಿಗಳಲ್ಲಿ ರೂ. 27,20 ಎಂದು ಅಂದಾಜು ಮಾಡಲಾಗಿದೆ. ಆಹಾರಕ್ಕೆ ಮಾತ್ರವಲ್ಲ, ಬೇರೆಲ್ಲ ಸರಕುಗಳು ಮತ್ತು ಸೇವೆಗಳಿಗೆ ಒಟ್ಟಾಗಿ ಇದಕ್ಕಿಂತ ಹೆಚ್ಚು ಖಚರ್ು ಮಾಡುತ್ತಿದ್ದರೆ, ಅವರು ಬಡವರಲ್ಲ! ಒಬ್ಬ ಬಡವನಲ್ಲದ ವ್ಯಕ್ತಿ ಯಾರು ಎಂಬ ಬಗ್ಗೆ ಇದಕ್ಕಿಂತ ಹೆಚ್ಚು ಅಸಂಬದ್ಧವಾದ, ಅಮಾನವೀಯವಾದ ನಿರೂಪಣೆ ಬೇರೆ ಇರಲು ಸಾಧ್ಯವಿಲ್ಲ.

ಈ ಹಾಸ್ಯಾಸ್ಪದ ನಿರೂಪಣೆಗಳ ಪ್ರಕಾರ, ಬಡತನದ ರೇಖೆಯ ಕೆಳಗೆ ಬದುಕು ಸಾಗಿಸುತ್ತಿರುವವರ ಪ್ರಮಾಣ ಯುಪಿಎ-1 ಸರಕಾರ ರಚನೆಗೊಂಡ ವರ್ಷ, ಅಂದರೆ 2004-05 ಮತ್ತು 2011-12ರ ನಡುವೆ, ಹಳ್ಳಿಗಳಲ್ಲಿ 41.8ಶೇ.ದಿಂದ 25.7ಶೇ.ಕ್ಕೆ ಇಳಿದಿದೆ, ನಗರಗಳಲ್ಲಿ 25.7ರಿಂದ 13.7ಕ್ಕೆ ಇಳಿದಿದೆ. ನಿಜವಾದ ಸಂಖ್ಯೆಯಲ್ಲಿ ಹೇಳುವುದಾದರೆ, 2004-05ರಲ್ಲಿ 40.71 ಕೋಟಿ ಜನ ಬಡತನದ ರೇಖಯ ಕೆಳಗೆ ಇದ್ದರೆ, 2011-12ರಲ್ಲಿ ಅಂತವರ ಸಂಖ್ಯೆ ಕೇವಲ 26.93 ಕೋಟಿ, ಅಂದರೆ ಒಟ್ಟು ಜನಸಂಖ್ಯೆಯ 21.9ಶೇ. ಎಂದು ನಮಗೀಗ ಹೇಳಲಾಗಿದೆ.

ಇಂತಹ ಹಾಸ್ಯಾಸ್ಪದವೆನಿಸುವಂತಹ ಬಡತನದ ಮಟ್ಟಗಳ ನಿರೂಪಣೆಯ ಬಗ್ಗೆ ಒಂದು ರಾಷ್ಟ್ರೀಯ ಆಕ್ರೋಶವೇ ವ್ಯಕ್ತಗೊಂಡಾಗ, ಯುಪಿಎ ಸರಕಾರ ನಿವರ್ಾಹವಿಲ್ಲದೆ ಪ್ರಧಾನ ಮಂತ್ರಿಗಳ ಆಥರ್ಿಕ ಸಲಹಾ ಮಂಡಳಿಯ ಅಧ್ಯಕ್ಷ ರಾದ ಸಿ.ರಂಗರಾಜನ್ ನೇತೃತ್ವದ ಒಂದು ಸಮಿತಿಯನ್ನು ನೇಮಿಸಿತು. ಬಡತನದ ತಖ್ತೆ ತಯಾರಿಸುವ ತೆಂಡುಲ್ಕರ್ ವಿಧಾನದ ಮರುಪರಿಶೀಲನೆ ನಡೆಸುವ ಕೆಲಸವನ್ನು ಅದಕ್ಕೆ ಒಪ್ಪಿಸಲಾಯಿತು. ಆದರೆ ಈ ಸಮಿತಿ ಮುಂದಿನ ಸಾರ್ವತ್ರಿಕ ಚುನಾವಣೆಗಳ ನಂತರವೇ, 2014ರ ಮಧ್ಯಭಾಗದಲ್ಲಷ್ಟೇ ವರದಿ ಸಲ್ಲಿಸಬಹುದು ಎಂಬ ನಿರೀಕ್ಷೆಯಿದೆ. ಅದುವರೆಗೆ ಯುಪಿಎ ಸರಕಾರ ಇಂತಹ ಅಸಂಬದ್ಧ ಅಂಕಿ-ಅಂಶಗಳಿಂದ ಜನಗಳಿಗೆ ಮಂಕುಬೂದಿ ಎರಚುತ್ತಲೇ ಇರಬಹುದು. ತಲಾ ಬಳಕೆಯ ಆಧಾರದ ಈ ಬಡತನದ ನಿರೂಪಣೆಗಳು ಎಷ್ಟು ತಳಮಟ್ಟದಲ್ಲಿ ಇವೆಯೆಂದರೆ, ಅದರಿಂದ ಕನಿಷ್ಠ ಪೌಷ್ಟಿಕ ಆಹಾರದ ಬಳಕೆಯೂ ಸಾಧ್ಯವಿಲ್ಲ, ಇನ್ನು ಆರೋಗ್ಯ, ವಸತಿ, ಬಟ್ಟೆ ಮತ್ತು ಇತರ ಜೀವನಾವಶ್ಯಕತೆಗಳಂತೂ ದೂರದ ಮಾತು. ಇಂತಹ ನಿರೂಪಣೆಗಳು ದಟ್ಟ ದಾರಿದ್ರ್ಯದ ಮಟ್ಟ ಎನ್ನಬಹುದಾದಕ್ಕಿಂತಲೂ ಕೆಳಗಿವೆ.

1979ರಲ್ಲಿ ರೂಪಿಸಿದ ಬಡತನದ ರೇಖೆಯ ಮೂಲ ನಿರೂಪಣೆಯನ್ನು, ಮುಂದಿನ ದಶಕಗಳಲ್ಲಿ, ಒಂದು ದೊಡ್ಡ ಕೈಚಳಕದ ಮೂಲಕ ಬದಲಿಸಲಾಯಿತು. ಆಗ, ಎಲ್ಲ ಬಳಕೆ ಸರಕುಗಳು ಮತ್ತು ಸೇವೇಗಳಿಗೆ ಮತ್ತು ಪ್ರತಿದಿನ ಗ್ರಾಮೀಣ ಪ್ರದೇಶಗಳಲ್ಲಿ 2400 ಕ್ಯಾಲರಿ ಶಕ್ತಿ ಹಾಗೂ ನಗರಗಳಲ್ಲಿ 2100 ಕ್ಯಾಲರಿ ಶಕ್ತಿ ಒದಗಿಸಬಲ್ಲ ಆಹಾರ ಸೇವನೆಗಾಗಿ ಮಾಡಬೇಕಾದ ಖಚರ್ುಗಳನ್ನು ಕುರಿತ ರಾಷ್ಟ್ರೀಯ ಮಾದರಿ ಸವರ್ೆಯ ಮಾಹಿತಿಯ ಆಧಾರದಲ್ಲಿ ಒಂದು ನಿದರ್ಿಷ್ಟ ಮಟ್ಟವನ್ನು ಬಡತನದ ಮಟ್ಟ ಎಂದು ನಿರೂಪಿಸಲಾಗಿತ್ತು. ಸ್ವಲ್ಪ ಸಮಯದಲ್ಲೇ ಗ್ರಾಮೀಣ ಕನಿಷ್ಟ ಪೌಷ್ಟಿಕತೆಯ ಪ್ರಮಾಣವನ್ನು 2200 ಕ್ಯಾಲರಿಗೆ ಇಳಿಸಲಾಯಿತು. ಈ ನಿರೂಪಣೆಯ ಆಧಾರದಲ್ಲಿ 1973-74ರಲ್ಲಿ ಗ್ರಾಮೀಣ ಬಡತನದ ಮಟ್ಟವನ್ನು ದಿನಕ್ಕೆ ಒಬ್ಬ ವ್ಯಕ್ತಿಗೆ ರೂ.49 ಮತ್ತು ನಗರಗಳಲ್ಲಿ ರೂ.56 ಎಂದು ನಿರೂಪಿಸಲಾಯಿತು. ಅದರ ಪ್ರಕಾರ ಸುಮಾರು 56ಶೇ. ಗ್ರಾಮೀಣ ಜನತೆ ಮತ್ತು 49ಶೇ.ದಷ್ಟು ನಗರಪ್ರದೇಶಗಳ ಜನಗಳು ಬಡವರು ಎಂದು ಪರಿಗಣಿಸಲಾಯಿತು.

ನಂತರ, ದೇಶದಲ್ಲಿ ಬಡತನದ ಮಟ್ಟ ಇಳಿಯುತ್ತಿಲ್ಲ ಎಂದು ಮುಜುಗರಗೊಂಡ ಸರಕಾರಗಳು, ಈ ನಿರೂಪಣೆಯನ್ನು ಕಾರ್ಯತಃ ಬದಲಿಸಿದವು. ಅಂದಿನಿಂದ ಬಡತನದ ಮಟ್ಟಗಳನ್ನು 2200/2100 ಕ್ಯಾಲರಿ ಪೌಷ್ಟಿಕತೆ ಒದಗಿಸಬಲ್ಲ ಸರಕುಗಳು ಮತ್ತು ಸೇವೆಗಳ ಮೇಲೆ ಮಾಡಬೇಕಾದ ಖಚರ್ುಗಳ ಆಧಾರದಲ್ಲಿ ನಿರ್ಧರಿಸುತ್ತಿಲ್ಲ. 1973-74ರ ಬಡತನದ ಸಂಖ್ಯೆಗಳನ್ನು ಒಂದು ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರಕ್ಕೆ ಹೊಂದಿಸಿ ಲೆಕ್ಕ ಹಾಕಲಾಗುತ್ತಿದೆ. ಅವು ಕನಿಷ್ಟ ಪೌಷ್ಟಿಕತೆಯ ಮಟ್ಟಕ್ಕೆ ಅನುಗುಣವಾಗಿವೆಯೇ ಎಂಬುದರ ಗೋಜಿಗೇ ಹೋಗುತ್ತಿಲ್ಲ.

ಹೀಗೆ 1973-74 ರ ನಿಗದಿತ ಬಳಕೆ ಪ್ರಮಾಣಕ್ಕೆ ಬೆಲೆ ಸೂಚ್ಯಂಕವನ್ನು ಸರಿ-ಹೊಂದಿಸುವ ವಿಧಾನವನ್ನು ಅಂಗೀಕರಿಸಿ ಯೋಜನಾ ಆಯೋಗ ಅವಾಸ್ತವಿಕ ಬಡತನದ ಮಟ್ಟಗಳನ್ನು ಕೊಡುತ್ತಲೇ ಬಂದಿತು. ಇದು 2009-10ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ ತಲಾ ರೂ.22.4 ಮತ್ತು ನಗರ ಪ್ರದೇಶಗಳಲ್ಲಿ ರೂ. 28.7ರ ಅಸಂಬದ್ಧ ಸಂಖ್ಯೆಗಳನ್ನು ಕೊಟ್ಟಿತು. ನಂತರದ ಎರಡು ವರ್ಷಗಳ ಬೆಲೆ ಸೂಚ್ಯಂಕಕ್ಕೆ ಹೊಂದಿಸಿದಾಗ ಇದನ್ನು 2011-12ರಲ್ಲಿ ದಿನಕ್ಕೆ ತಲಾ ರೂ.26/32 ಗೆ ಏರಿಸಲಾಯಿತು. ಯೋಜನಾ ಆಯೋಗದ ಪ್ರಸಕ್ತ ಪ್ರಕಟಣೆಯಲ್ಲಿ ತೆಂಡುಲ್ಕರ್ ವಿಧಾನವನ್ನು ಬಳಸಿ ಇದನ್ನು ತುಸು ಏರಿಸಿ ರೂ. 27.20/ 33.33 ಮಾಡಲಾಗಿದೆ.

ಈ ಬಡತನದ ಮಟ್ಟಗಳು ಅಸಂಬದ್ಧ ಮಾತ್ರವೇ ಅಲ್ಲ, ನಮ್ಮ ಬಹುಪಾಲು ಜನಗಳು ಇಂದು ಹೇಗಾದರೂ ಬದುಕುಳಿಯಲು ನಡೆಸಿರುವ ಜೀವನ್ಮರಣ ಹೋರಾಟಗಳನ್ನು ಅಪಹಾಸ್ಯ ಮಾಡುವಂತವು. ನಗರ ಪ್ರದೇಶಗಳ ಬಡತನ ಮಟ್ಟದ ನಿರೂಪಣೆ ಇಂದು ಬಹಿರಂಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಸಾಧಾರಣ ಮಟ್ಟದ ಅಕ್ಕಿಗೂ ಸಾಲದು. ಎಲ್ಲ ಆವಶ್ಯಕ ಸರಕುಗಳ ನಿರಂತರ ಬೆಲೆಯೇರಿಕೆ, ಅದರೊಂದಿಗೆ ಇಂಧನ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಮತ್ತೆ-ಮತ್ತೆ ಸತತವಾಗಿ ಏರಿಸುತ್ತಿರುವುದು ನಮ್ಮ ಜನಗಳ ಬದುಕಿನ ಮಟ್ಟವನ್ನು ದಿನೆಗಳೆದಂತೆ ಇನ್ನಷ್ಟು ಹದಗೆಡಿಸುತ್ತಿವೆ. ಇದೂ ಸಾಲದೆಂಬಂತೆ ಸಬ್ಸಿಡಿಗಳ ಮಟ್ಟದಲ್ಲೂ ಭಾರೀ ಕಡಿತ, ಅದರಲ್ಲೂ ರಸಗೊಬ್ಬರದ ಮೇಲಿನ ಸಬ್ಸಿಡಿಗಳಲ್ಲಿ. ಇದು ಅದಾಗಲೇ ಭಾರೀ ಕೃಷಿ ಸಂಕಟದಿಂದ ನರಳುತ್ತಿರುವ ರೈತರ ಬದುಕನ್ನು ಚಿಂದಿ ಮಾಡುತ್ತಿದೆ. ಧಾನ್ಯ ಬಳಕೆಯ ತಲಾ ಪ್ರಮಾಣ 1991ರಲ್ಲಿ 480 ಗ್ರಾಂ ಇದ್ದದ್ದು 2010ರಲ್ಲಿ 440 ಗ್ರಾಂ ಗೆ ಇಳಿದಿದೆ ಎಂಬುದೇ ನಮ್ಮ ವಿಶಾಲ ಜನಸಮೂಹಗಳ ಜೀವನ ಪರಿಸ್ಥಿತಿಗಳು ಹದಗೆಡುತ್ತಿವೆ ಎಂಬುದನ್ನು ದೃಢ ಪಡಿಸುತ್ತದೆ.

ಇಂತಹ ಸನ್ನಿವೇಶದಲ್ಲಿ ಸಂಕಟ ಪಡುತ್ತಿರುವ ನಮ್ಮ ವಿಶಾಲ ಜನಸಮೂಹಗಳಿಗೆ ಯಾವುದೇ ಅರ್ಥಪೂರ್ಣ ಪರಿಹಾರ ಆಹಾರ ಭದ್ರತೆಯ ಒಂದು ಸಾರ್ವತ್ರಿಕ ಯೋಜನೆಯಿಂದ ಮಾತ್ರವೇ ಸಾಧ್ಯ. ಅಂದರೆ ನಮ್ಮ ಜನಸಂಖ್ಯೆಯ ಕನಿಷ್ಟ 90ಶೇ. ಜನಕ್ಕೆ ಪ್ರತಿ ಕುಟುಂಬಕ್ಕೆ ಕನಿಷ್ಟ 35 ಕೆ.ಜಿ. ಆಹಾರಧಾನ್ಯಗಳನ್ನು ಕೆ.ಜಿ.ಗೆ 2ರೂ. ಮೀರದ ಬೆಲೆಗಳಲ್ಲಿ ಒದಗಿಸುವ ಒಂದು ಯೋಜನೆ ಅಗತ್ಯ. ಇದರ ಬದಲು ಯುಪಿಎ-2 ಸರಕಾರದ ಆಹಾರ ಭದ್ರತಾ ಮಸೂದೆ ಈ ಪ್ರಮಾಣವನ್ನು 25 ಕೆ.ಜಿ.ಗೆ ಇಳಿಸಿದೆ ಮತ್ತು ದರವನ್ನು ಕೆ.ಜಿ.ಗೆ 3ರೂ.ಗೇರಿಸಿದೆ. ಇದು ಹಚ್ಚೆಂದರೆ ನಮ್ಮ ಜನಸಂಖ್ಯೆಯ ಮೂರನೇ ಎರಡು ಭಾಗಕ್ಕಷ್ಟೇ ಅನ್ವಯವಾಗ ಬಲ್ಲದು. ಇದು ಏನೇನೂ ಸಾಲದು, ಜನತೆಗೆ ಇದು ಆಹಾರ ಭದ್ರತೆಯನ್ನು ಕೊಡುವ ಬದಲು ಆಹಾರ ಅಭದ್ರತೆಯನ್ನೇ ಕೊಡುತ್ತದೆ.

ಆದ್ದರಿಂದ, ಬಡತನವನ್ನು ತಗ್ಗಿಸುವ ಪ್ರಶ್ನೆಯ ಮೇಲೆ ಯುಪಿಎ-2 ಸರಕಾರ ಪ್ರಚಾರ ಮಾಡುತ್ತಿರುವ ಸುಳ್ಳುಗಳನ್ನು ಸಂಪೂರ್ಣವಾಗಿ ಬಯಲಿಗೆಳೆಯ ಬೇಕಷ್ಟೇ ಅಲ್ಲ, ನಮ್ಮೆಲ್ಲ ಜನಗಳಿಗೆ ಆಹಾರ ಭದ್ರತೆಯೊಂದಿಗೆ ಒಂದು ಅರ್ಥಪೂರ್ಣ ಬದುಕನ್ನು ಒದಗಿಸುವಂತೆ ಮಾಡಲು ಜನಗಳನ್ನು ಅಣಿನೆರೆಸಬೇಕು, ಹೋರಾಟಗಳನ್ನು ಬಲಪಡಿಸಬೇಕು.
0

Donate Janashakthi Media

Leave a Reply

Your email address will not be published. Required fields are marked *